40ನೇ ವರ್ಷದ ಉಬರ್ ಕಂಬಳೋತ್ಸವ: ಮಾರ್ಚ್ 28ರಂದು ನಡೆಸಲು ನಿರ್ಧಾರ,ವಿಶೇಷತೆಗಳು ಏನು ಪೂರ್ತಿ ಮಾಹಿತಿ ಇಲ್ಲಿದೆ

40ನೇ ವರ್ಷದ ಉಬರ್ ಕಂಬಳೋತ್ಸವ

ಕಂಬಳ ಅಂದ್ರೆ ಏನು?

ಇದು ಒಂದು ಪಾರಂಪರಿಕ ಕೋಣಗಳ  ಓಟದ ಸ್ಪರ್ಧೆಯಾಗಿದೆ, ಅದರಲ್ಲೂ ಮುಖ್ಯವಾಗಿ ನಮ್ಮ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಪ್ರಿಯ ಜಾನಪದ ಕ್ರೀಡೆಯಾಗಿದೆ.

ಕಂಬಳ ಯಾವ ರೀತಿಯಲ್ಲಿ ನಡೆಯುತ್ತದೆ?

ನೀರಿನಿಂದ ತುಂಬಿದ ಹೊಲದಲ್ಲಿ ಈ ಕಂಬಳ ಸ್ಪರ್ಧೆಯನ್ನು ನಡೆಸಲಾಗುತ್ತದೆ.ಎರಡು ಕೋಣಗಳನ್ನು ಜೋಡಿಸಿ ಓಡಿಸುತ್ತಾರೆ. ಕೋಣಗಳ ಜೊತೆ ಒಬ್ಬ ವ್ಯಕ್ತಿಯು ಕೂಡ ಓಡಬೇಕಾಗುತ್ತದೆ. ಕೆಲವರು ನೀರನ್ನು ಸಿಂಪಡಿಸಿ ಎತ್ತರವಾದ ಸ್ಲ್ಯಾಷ್ ಅನ್ನು ಮಾಡುತ್ತಾರೆ. ಒಟ್ಟಿನಲ್ಲಿ ಈ ಆಟವು ಸ್ಪೀಡ್+ಕಂಟ್ರೋಲ್+ಸ್ಕಿಲ್ಸ್  ನ ಮೇಲೆ ಅವಲಂಬಿತವಾಗಿರುತ್ತದೆ.ಸಾಮಾನ್ಯವಾಗಿ ಈ ಕಂಬಳ ಆಟವನ್ನು ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳ ತನಕ ಒಂದು ದಿನವನ್ನು ನಿಗದಿ ಮಾಡಿ ನಡೆಸಲಾಗುತ್ತದೆ.

ಕಂಬಳದ ವಿಧಗಳು ಯಾವುವು?

ಹಗ್ಗ ಕಂಬಳ – ಇದರಲ್ಲಿ ಹಗ್ಗವನ್ನು ಹಿಡಿದು ಓಡುತ್ತಾರೆ

ನೇಗಿಲು ಕಂಬಳ – ಇದರಲ್ಲಿ ನೇಗಿಲನ್ನು ಹಿಡಿದು ಅಂದರೆ ಹಲಗೆಯನ್ನು ಹಿಡಿದು ನಿಂತು ಹಲಗೆಯ ಜೊತೆ ಓಡುತ್ತಾರೆ

ಅಡ್ಡ ಹಲಗೆ ಕಂಬಳ – ಮರದ ಫಲಕದ ಮೇಲೆ ನಿಂತು ಓಡುತ್ತಾರೆ

ಕನೆ ಹಲಗೆ – ನೀರಿನ ಸ್ಲ್ಯಾಷ್ ಹೈಟ್ ಬೇಸ್ ಮೇಲೆ ಅವಲಂಬಿತವಾಗಿರುತ್ತದೆ.

ಕೋಣಗಳ ಪಾತ್ರ

ಈ ಸ್ಪರ್ಧೆಗೆ ಭಾಗವಹಿಸುವ ಕೋಣಗಳಿಗೆ ವಿಶೇಷವಾಗಿ ತರಬೇತಿಯನ್ನು ಕೊಟ್ಟು ಸಜ್ಜುಗೊಳಿಸಿರುತ್ತಾರೆ.

ಉತ್ತಮ ಆಹಾರವನ್ನು ಕೊಟ್ಟು ಆರೈಕೆಯನ್ನು ಮಾಡಿರುತ್ತಾರೆ ಕೋಣಗಳು ಸ್ಪರ್ಧೆಯಲ್ಲಿ ಗೆದ್ದರೆ ಮಾಲೀಕರಿಗೆ ಒಳ್ಳೆಯ ಗೌರವವನ್ನು ತಂದು ಕೊಡುತ್ತದೆ.ಊರು ಮತ್ತು ಪರವೂರಿನಲ್ಲಿ ಗೌರವವನ್ನು ತಂದು ಕೊಡುತ್ತದೆ.ಕಂಬಳ ಸ್ಪರ್ಧೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಕೂಡ ನಡೆದಿತ್ತು ಮತ್ತು ಎಲ್ಲರೂ ಇದನ್ನು ಮೆಚ್ಚಿಕೊಂಡಿದ್ದಾರೆ.

ಒಂದು ಸಮಯದಲ್ಲಿ ban ಆಗಿದ್ದ ಕಂಬಳ ಮತ್ತೆ ಶುರುವಾಗಿದ್ದು ಹೇಗೆ?

ಒಮ್ಮೆ ಈ ಕಂಬಳ ಇಲ್ಲೀಗಲ್ ಅಂತ ಕಾಂಟ್ರವರ್ಸಿ ಕೂಡ ಆಗಿತ್ತು ಆದರೆ ನಂತರ ಸಾಂಪ್ರಾದಾಯಿಕ ಕ್ರೀಡೆ ಎಂದು ಇದನ್ನು ಮತ್ತೆ ಪ್ರಾರಂಭ ಮಾಡಲಾಯಿತು.ಈ ಸ್ಪರ್ಧೆಯು ನಿಯಮದ ಅನುಸಾರವಾಗಿಯೇ ನಡೆಯುತ್ತದೆ. ಇದು ಒಂದು ಕೇವಲ ಸ್ಪರ್ಧೆಯಲ್ಲ ಇದು ಗ್ರಾಮದ ಗೌರವ ಮತ್ತು ಸಂಪ್ರದಾಯ ಕೂಡ ಆಗಿದೆ. ಈ ಕಂಬಳವನ್ನು ವೀಕ್ಷಿಸಲ ಅಪಾರ ಮಂದಿ ಸೇರುತ್ತಾರೆ.ಆಗ ಅಲ್ಲಿ ಒಂದು ದೊಡ್ಡ ಉತ್ಸವದ ವಾತಾವರಣವೇ ಸೃಷ್ಟಿಯಾಗುತ್ತದೆ.

ಕಂಬಳ ಹುಟ್ಟಿಕೊಂಡದ್ದು ಹೇಗೆ?

ಕಂಬಳವು ನೋಡಲು ಮನರಂಜನೆ ಕೊಡುವ ಆಟವಾಗಿದ್ದರು ಸಹ ಇದು ಹುಟ್ಟಿದ್ದು ಮೂಲತಃ ಕೃಷಿ ಸಂಸ್ಕೃತಿಯ ಭಾಗದಿಂದ.ಸಾಮಾನ್ಯವಾಗಿ ಬೆಳೆ ಕಟಾವು ಆದ ನಂತರ ರೈತರು ತಮ್ಮ ತಮ್ಮ ಕೋಣಗಳ ಶಕ್ತಿಯನ್ನು ಪರೀಕ್ಷೆ ಮಾಡುತ್ತಿದ್ದರು.ಯಾರ ಕೋಣವು ಹೆಚ್ಚು ಶಕ್ತಿಶಾಲಿ ಎಂದು ನೋಡುವುದು ಅವರ ಉದ್ದೇಶವಾಗಿತ್ತು

ತುಳುನಾಡಿನಲ್ಲಿ ಈ ಕಂಬಳವನ್ನು ದೇವರ ಸೇವೆ ಅಥವಾ ಹಬ್ಬದ ಅಂಗವಾಗಿ ನಡೆಸುವ ಆಟವಾಗಿ ಕಾಣುತ್ತಿದ್ದರು ಹೀಗೆ ಮಾಡುತ್ತ ಈ ವಿಧಾನವು ಮೊದಲಿಗೆ ಸಣ್ಣದಾಗಿ ಪ್ರಾರಂಭವಾದ ಆಟವಾಗಿ ಮುಂದೆ ದೊಡ್ಡ ಕ್ರೀಡೆ ಅಥವಾ  ಸ್ಪರ್ಧೆಯಾಗಿ ಮಾರ್ಪಾಡುಗೊಂಡಿತು. ಗ್ರಾಮಗಳ ಮಧ್ಯ ಈ ಸ್ಪರ್ಧೆ ನಡೆಯುತ್ತಿತ್ತು ಮತ್ತು ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನವನ್ನು ಕೂಡ ನೀಡಲಾಗುತ್ತಿತ್ತು.

ಇದನ್ನು ಓದಿ:ಕಡಬದಲ್ಲಿ ಕಾರು ಪಲ್ಟಿ:ಒಂದು ಕುಟುಂಬದ ಆರು ಮಂದಿ ಗಂಭೀರ ಗಾಯ – ಅಪಘಾತದ ನಿಜವಾದ ಕಾರಣವೇನು? – KPworld365 

ಉಪ್ಪಿನಂಗಡಿ(ಉಬರ್) ನಲ್ಲಿ ನಡೆಯುತ್ತದೆ ಪ್ರತಿವರ್ಷ ಜೋಡುಕೆರೆ ಕಂಬಳ 

ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆಯುತ್ತದೆ ಪ್ರತಿವರ್ಷ ಈ ಜೋಡುಕರೆ ಕಂಬಳ,ಜೋಡುಕೆರೆ ಕಂಬಳ ಅಂದರೆ ಅಲ್ಲಿ ಎರಡು ನೀರಿನ ಕಾಲುವೆಗಳು ಇರುತ್ತವೆ ಅದರ ನಡುವೆ ಇರುವ ಹೊಲ ಈ ಸ್ಥಳದಲ್ಲಿ ಕಂಬಳ ನಡೆಯುವುದಕ್ಕೆ ಜೋಡುಕರೆ ಕಂಬಳ ಎಂದು ಹೇಳುತ್ತಾರೆ.ಈ ಕಂಬಳ ಬಹಳ ವಿಶೇಷವಾದುದು ಮತ್ತು ಇದಕ್ಕೆ ಸಾವಿರಾರು ಜನರು ಸೇರುತ್ತಾರೆ.ಕರಾವಳಿ ಭಾಗದ ಫೇಮಸ್ ಕಂಬಳದಲ್ಲಿ ಇದು ಕೂಡ ಒಂದಾಗಿದೆ.ಕರಾವಳಿ ಭಾಗದ ಉತ್ತಮ ತರಬೇತಿಯನ್ನು ಪಡೆದ ಕೋಣಗಳು ಇಲ್ಲಿ ಭಾಗವಹಿಸುತ್ತವೆ. ಇದು ನೋಡಲು ತುಂಬ ಆಕರ್ಷಕವಾಗಿರುತ್ತದೆ.

ಈ ವರ್ಷದ (4೦ನೇ ವರ್ಷದ) ಕಂಬಳ ಯಾವಾಗ?

ವರ್ಷವೂ ನಡೆಯುವ ಕಂಬಳದ ಹಾಗೆ ಈ ವರ್ಷವೂ ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳ “ಉಬಾರ್ ಕಂಬಳೋತ್ಸವವು” ಉಪ್ಪಿನಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗವಾಗಿರುವ ನೇತ್ರಾವತಿ ನದಿಯ ಕಿನಾರೆಯ ಕೂಟೇಲುವಿನಲ್ಲಿ ಇದೇ ಮಾರ್ಚ್ 28ರಂದು ನಡೆಯಲಿದೆ. ಉಪ್ಪಿನಂಗಡಿ ಕಂಬಳ ಸಮಿತಿಯ ಅಧ್ಯಕ್ಷರು ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ.|ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಸುಸೂತ್ರವಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಅವರು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಾರಿ ವಿಶೇಷವಾಗಿ ಮಂಜೋಟಿಗೆ ನೆರಳು ಸಿಗಲಿ ಎಂದು ಅತೀ ಎತ್ತರವಾದ ಚಪ್ಪರವನ್ನು ಹಾಸಲಾಗಿದೆ.ಸಾಧಕರಿಗೆ ಸನ್ಮಾನವನ್ನು ಮಾಡಲಾಗುತ್ತದೆ.ಮತ್ತು ಈ ಕಂಬಳವನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಲು ಸಿನಿಮಾ ತಾರೆಯರು ಆಗಮಿಸಲಿದ್ದಾರೆ. ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಪ್ಪಿನಂಗಡಿಯಿಂದ ಮಾರ್ಚ್ 28ರಂದು ಬೆಳಗ್ಗೆ ಮೆರವಣಿಗೆ ನಡೆಯಲಿದೆ.ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರು ಈ ಮೆರವಣಿಗೆಯ ಉದ್ಘಾಟನೆಯನ್ನು ಮಾಡಿದ್ದಾರೆ.ನಂತರ ಕಂಬಳದ ಕರೆಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಅವರು ಉದ್ಘಾಟಿಸಲಿದ್ದಾರೆ.ಈ ಕಂಬಳದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ವಿಶೇಷ ಟ್ರೋಫಿ 

ಕನೆ ಹಲಗೆ ಕಂಬಳದಲ್ಲಿ ಭಾಗವಹಿಸುವಂತಹ ಎಲ್ಲಾ ಕೋಣಗಳ ಯಜಮಾನರಿಗೆ ವಿಶೇಷ ಟ್ರೊಫಿ ಯನ್ನು ನೀಡಲಾಗುವುದು.ನಿಶಾನೆಗೆ ನೀರನ್ನು ಹಾಯಿಸಿದವರಿಗೆ ಮಾತ್ರ ಬಹುಮಾನ ನೀಡಿ ಗೌರವಿಸಲಾಗುವುದು.ಈ ವಿಭಾಗದಲ್ಲಿ ಗೆದ್ದರೆ ಪ್ರಥಮ ಬಹುಮಾನ ಒಂದೂವರೆ ಪವನ್, ದ್ವಿತೀಯ ಒಂದು ಪವನ್,ಅಡ್ಡ ಹಲಗೆ ವಿಭಾಗದಲ್ಲಿ ಗೆದ್ದರೆ ಪ್ರಥಮ ಒಂದು ಪವನ,ದ್ವಿತೀಯ ಅರ್ಧ ಪವನ್ ,ಹಗ್ಗ ಹಿರಿಯ ವಿಭಾಗದಲ್ಲಿ ಗೆದ್ದರೆ ಪ್ರಥಮ ಒಂದೂವರೆ ಪವನ್,ದ್ವಿತೀಯ ಒಂದು ಪವನ್,ಹಗ್ಗ ಕಿರಿಯ ವಿಭಾಗದಲ್ಲಿ ಗೆದ್ದರೆ ಪ್ರಥಮ ಒಂದು ಪವನ್, ದ್ವಿತೀಯ ಅರ್ಧ ಪವನ್, ನೇಗಿಲು ಹಿರಿಯ ವಿಭಾಗದಲ್ಲಿ ಗೆದ್ದರೆ ಪ್ರಥಮ ಒಂದೂವರೆ ಪವನ್, ದ್ವಿತೀಯ ಒಂದು ಪವನ್, ನೇಗಿಲುಕಿರಿಯ ವಿಭಾಗದಲ್ಲಿ ಗೆದ್ದರೆ ಪ್ರಥಮ ಒಂದು ಪವನ್,ದ್ವಿತೀಯ ಅರ್ಧ ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ರೈ ಅರ್ಪಿಣಿಗುತ್ತು ಅವರು ಹೇಳಿದ್ದಾರೆ.

ಸಾಧಕರಿಗೆ ಸನ್ಮಾನ

ಉದ್ಯಮದ ಕ್ಷೇತ್ರದಲ್ಲಿ ಅನೇಕ ಸಾಧನೆಯನ್ನು ಮಾಡಿದ ಮಾಸ್ಟರ್ ಪ್ಲಾನರಿ ಪುತ್ತೂರು ಇದರ ಮಾಲೀಕರಾದ ಎಸ್.ಕೆ.ಆನಂದ್,ಹಾಗೂ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ಸದಾಶಿವ ಸಾಮಾನಿ ಸಂಪಿಗೆದಡಿ ಮಠ0ತ ಬೆಟ್ಟು , ಹಾಗೇ ಕಂಬಳ ಮತ್ತು ಶಿಲ್ಪಶಾಸ್ತ್ರದಲ್ಲಿ ಸಾಧನೆಯನ್ನು ಮಾಡಿದ ಬೆಳ್ಳಿಪ್ಪಾಡಿ ಕೊಡಪೊಟ್ಯ ಸುರೇಶ್ ಕೃಷ್ಣಯ್ಯ ಆಚಾರ್ಯ ಅವರನ್ನು ಜೋಡುಕರೆ ಕಂಬಳದ ಸಭೆಯಲ್ಲಿ ಸನ್ಮಾನಿಸಲಾಗುವುದು. ಮತ್ತು ಕಬಡ್ಡಿ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸಾಧನೆಯನ್ನು ಮಾಡಿದ ಚಾಂಪಿಯನ್ಶಿಪ್ ಆದ ಜೂನಿಯರ್ ಕಬಡ್ಡಿ ಆಟಗಾರ ಅಧೀಶ್ ಶೆಟ್ಟಿ ಬರೆಮೇಲು ಅವರನ್ನು ಕೂಡ ಅಭಿನಂದಿಸಲಾಗುವುದು.ಎಂದು ಅಶೋಕ್ ರೈ ಅವರು ತಿಳಿಸಿದ್ದಾರೆ.

ಸಮಾರೋಪ ಸಮಾರಂಭ ಯಾವಾಗ ನಡೆಯಲಿದೆ?

40ನೇ ವರ್ಷದ ಉಬರ್ ಕಂಬಳೋತ್ಸವದ ಸಮಾರೋಪ ಸಮಾರಂಭವು ಮಾರ್ಚ್ 29 ರಂದು ನಡೆಯಲಿದೆ.ಈ ಸಮಾರೋಪ ಸಮಾರಂಭದಲ್ಲಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಗುತ್ತದೆ.

ಎಷ್ಟು ಗಂಟೆಗೆ ಶುರುವಾಗಲಿದೆ ಕಂಬಳ

ಮಾರ್ಚ್ 28ರಂದು ಸರಿಯಾಗಿ ಅಂದಾಜು 10ಗಂಟೆಗೆ ಕೋಣಗಳು ಕೆರೆಗೆ ಇಳಿಯಲಿವೆ. 10ಗಂಟೆಗೆ ನೇಗಿಲು ಕಿರಿಯ,ಗಂಟೆ 11 ಗಂಟೆಗೆ ನೇಗಿಲು ಹಿರಿಯ  ,ಹಾಗೂ ಮಧ್ಯಾಹ್ನ 3ಗಂಟೆಗೆ ಸರಿಯಾಗಿ ಹಗ್ಗ ಕಿರಿಯ ಮತ್ತು ಹಗ್ಗ ಹಿರಿಯ, ಸಂಜೆ ಗಂಟೆ 5 ಗಂಟೆಗೆ ಕನೆ ಹಲಗೆ ಹಾಗೂ ಅಡ್ಡ ಹಲಗೆಯ ವಿಭಾಗದ ಕೋಣಗಳನ್ನು ಕೆರೆಗೆ ಇಳಿಸಲಾಗುತ್ತದೆ. ಜಿಲ್ಲಾ ಕಂಬಳ ಸಮಿತಿಯಿಂದ ಈ ಸ್ಪರ್ಧೆಯನ್ನು 24 ಗಂಟೆಗಳ ಒಳಗೆ ಮುಗಿಸಬೇಕೆಂಬ ನಿಯಮ ಇರುವುದರಿಂದ ನಿಯಮದ ಪ್ರಕಾರ ಈ ಸ್ಪರ್ಧೆಯನ್ನು ಮುಗಿಸಲು ಕೋಣಗಳ ಯಜಮಾನರು ಸಹಕರಿಸಬೇಕೆಂದು ಮನವಿಯನ್ನು ಮಾಡಿದ್ದಾರೆ.

ಮೊದಲ ಬಾರಿಗೆ ಚಪ್ಪರದ ವ್ಯವಸ್ಥೆ

ಪ್ರತಿವರ್ಷವೂ ಕಂಬಳ ನಡೆಯುವುದು ಮಾರ್ಚ್ ಸಮಯ ಬೇಸಿಗೆಯ ಶಾಖವು ಅಧಿಕವಾಗಿರುತ್ತದೆ.ಬೇಸಿಗೆಯ ತಾಪವು ವೇದಿಕೆಯ ತನಕ ಹರಡುತ್ತಿತ್ತು. ಮತ್ತು ಕಂಬಳವನ್ನು ವೀಕ್ಷಿಸಲು ಬರುವ ಜನರಿಗೂ ಕಷ್ಟವಾಗುತ್ತಿತ್ತು ಇದನ್ನೆಲ್ಲ ಗಮನಿಸಿ ಈ ವರ್ಷ ಅಂತಹ ತೊಂದರೆಗಳು ಆಗಬಾರದು ಎಂದು ಪ್ರಥಮ ಪ್ರಯೋಗವಾಗಿ  ಈ ವರ್ಷ ವೇದಿಕೆಗೆ ಅಡ್ಡವಾಗಿರುವಂತೆ ಚಪ್ಪರವನ್ನು ಹಾಕಲಾಗಿದೆ ಮತ್ತು ಇದು ತುಂಬ ಎತ್ತರವಾಗಿದೆ.  ಇದರಿಂದ ತುಂಬ ಪ್ರಯೋಜನವೂ ಆಗಲಿದೆ ಎಂದು  ಸುದ್ದಿಗೋಷ್ಠಿಯಲ್ಲಿ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ತಿಳಿಸಿದ್ದಾರೆ.

ಇದನ್ನು ಓದಿ:AC ಬೇಡ ಫ್ಯಾನ್ ನಲ್ಲೇ ತಂಪು ಗಾಳಿ ಪಡೆಯಲು ಈ ಸ್ಮಾರ್ಟ್ ಟ್ರಿಕ್ಸ್ ಯೂಸ್ ಮಾಡಿ: ಪೂರ್ತಿ ಮಾಹಿತಿ ಇಲ್ಲಿದೆ – KPworld365 

 

 

 

Prashree Gowda