Government Advocate Job
ಮುಖ್ಯ ಮಾಹಿತಿ
- ಹುದ್ದೆ: Additional Government Advocate
- ಸ್ಥಳ: ಚಿತ್ರದುರ್ಗ
- ಅನುಭವ: ಕನಿಷ್ಠ 7 ವರ್ಷ
- ಕೊನೆಯ ದಿನಾಂಕ: 06 ಏಪ್ರಿಲ್ 2026
- ಅನುಭವ: ಕನಿಷ್ಠ 7 ವರ್ಷ
- ಆಯ್ಕೆಯ ಅವಧಿ: 3 ವರ್ಷ
ಹುದ್ದೆಯ ವಿವರ
Additional Government Advocate AGA)
ಚಿತ್ರದುರ್ಗದ ಹೊಳಲ್ಕೆರೆ ಮತ್ತು ಹಿರಿಯೂರು ತಾಲೂಕಿನ ಹಿರಿಯ ನ್ಯಾಯಾಲಯಗಳಲ್ಲಿ ಈ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. Additional Government Advocate(AGA). AGA ಎಂದರೆ ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡುವ ಪ್ರಮುಖ ವಕೀಲ. ಈ ಹುದ್ದೆಯು ನ್ಯಾಯ ವ್ಯವಸ್ಥೆಯಲ್ಲಿ ತುಂಬಾ ಜವಾಬ್ದಾರಿಯುತ ಗೌರವಯುತ ಸ್ಥಾನವಿರುವ ವೃತ್ತಿ ಆಗಿದೆ. ಸರ್ಕಾರಿ ಇಲಾಖೆಗಳಿಗೆ ಕಾನೂನು ಸಲಹೆಗಳನ್ನು ನೀಡುವುದು, ಸಾರ್ವಜನಿಕ ಹಿತಾಸಕ್ತಿ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗವಹಿಸುವುದು,ಸರ್ಕಾರದ ನೀತಿಗಳು ಮತ್ತು ಕ್ರಮಗಳನ್ನು ಕಾನೂನು ಬದ್ಧವಾಗಿ ರಕ್ಷಣೆ ಮಾಡುವುದು ಇವರ ಕರ್ತವ್ಯ ಆಗಿರುತ್ತದೆ.
AGA ವಕೀಲರು ಕೇವಲ ಒಂದು ಕೇಸ್ ಗೆ ಅಷ್ಟೇ ಸೀಮಿತವಾಗಿರುವುದಿಲ್ಲ.ಇವರು ಸಂಪೂರ್ಣ ಸಮಾಜದ ಹಿತಾಸಕ್ತಿಯನ್ನು ತೆಗೆದುಕೊಂಡು ಅಥವಾ ಗಮನದಲ್ಲಿ ಇಟ್ಟುಕೊಂಡು ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು.ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸಿ ಅವರನ್ನು ಕಾಪಾಡಬೇಕು ಅಥವಾ ಅವರಿಗೆ ರಕ್ಷಣೆ ನೀಡುವುದು ಇವರ ಕರ್ತವ್ಯವಾಗಿರುತ್ತದೆ.
ಯಾಕೆ ಚಿತ್ರದುರ್ಗದಲ್ಲಿ ಮಾತ್ರ ನೇಮಕಾತಿ?
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮತ್ತು ಹಿರಿಯೂರಿನ ತಾಲೂಕುಗಳಲ್ಲಿ ನ್ಯಾಯಾಲಯದ ಪ್ರಕರಣಗಳು ಇತ್ತೀಚೆಗೆ ತುಂಬಾ ಹೆಚ್ಚಾಗಿ ಕಂಡು ಬರುತ್ತಿವೆ.ಈ ಹಿನ್ನೆಲೆಯಲಿ ರಾಜ್ಯ ಸರಕಾರವು ಈ ಭಾಗಗಳಲ್ಲಿ Additional Govermment Advocate ಹುದ್ದೆಯನ್ನು ಭರ್ತಿ ಮಾಡಲು ನಿರ್ಧರಿಸಿದೆ. ಇದು ಸ್ಥಳೀಯ ವಕೀಲರಿಗೆ ಒಳ್ಳೆಯ ಅವಕಾಶ.
ಈ ಹುದ್ದೆಯ ವಿಶೇಷತೆ
ಇದು ಸರ್ಕಾರದ ನೇರ ಪ್ರತಿನಿಧಿ ಸ್ಥಾನವಾಗಿದೆ.ಉತ್ತಮ ಅನುಭವ ಮತ್ತು ಕಾನೂನು ಜ್ಞಾನ ತಿಳಿಯುತ್ತದೆ.ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಕನಿಷ್ಠವಾಗಿ 7 ವರ್ಷಗಳ ವಕೀಲ ವೃತ್ತಿ ಅನುಭವ ಹೊಂದಿರಬೇಕು. ಈ ಹುದ್ದೆಗೆ ಅರ್ಜಿ ಹಾಕುವ ಮೊದಲು ದಂಡ ಸಂಹಿತೆ(ಐಪಿಸಿ),ಸಿವಿಲ್ ಪ್ರೊಸೀಜರ್ ಕೋಡ್ (CPC), ಕ್ರಿಮಿನಲ್ procedure ಕೋಡ್ (CrPC), ಸಂವಿಧಾನ ಕಾನೂನು ಮತ್ತು ವಿವಿಧ ರಾಜ್ಯ ಕಾನೂನುಗಳ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರಬೇಕು.ಈ ಜ್ಞಾನಗಳನ್ನು ಅಭ್ಯರ್ಥಿಗಳು ಹೊಂದಿದ್ದರೆ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದಗಳನ್ನು ಮಂಡಿಸಲು ಸಹಾಯ ಆಗುತ್ತದೆ. ಅಭ್ಯರ್ಥಿಗಳು ನ್ಯಾಯಾಲಯದ ಕಾರ್ಯ ಪದ್ಧತಿ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿರಬೇಕು. ಆಯ್ಕೆ ಮಾಡುವಾಗ ಕೇವಲ ಅನುಭವವನ್ನು ಮಾತ್ರ ನೋಡುವುದಿಲ್ಲ, ವಕೀಲರ ವಾದ ಸಾಮರ್ಥ್ಯವನ್ನು ,ಹಾಗೂ ಹಿಂದಿನ ಕೇಸುಗಳ ದಾಖಲಾತಿ,ಕಾನೂನಿನ ಬಗ್ಗೆ ಎಷ್ಟು ಜ್ಞಾನವನ್ನು ಹೊಂದಿದ್ದಾರೆ,ನ್ಯಾಯಾಲಯದಲ್ಲಿ ಅವರ ಪ್ರದರ್ಶನ ಹೇಗಿದೆ ಎಂದು ನೋಡುತ್ತಾರೆ.
ಏನೇ ಸಮಸ್ಯೆ ಬಂದರು ಅದನ್ನು ಎದುರಿಸಲು ಬಲವಾದ ಸಾಮರ್ಥ್ಯವು ಇರಬೇಕು. ಕರ್ನಾಟಕದ ಕಾನೂನು ಅಧಿಕಾರಿಗಳ ನಿಯಮ 1977ರ ಅನ್ವಯದ ಅಡಿಯಲ್ಲಿ ನೇಮಕಾತಿಯನ್ನು ಮಾಡಲಾಗುತ್ತಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದೆ ಮೂರು ವರ್ಷಗಳ ಅವಧಿಯ ತನಕ ಮತ್ತು ಸರ್ಕಾರದ ಆದೇಶದ ತನಕ ಈ ಜವಾಬ್ದಾರಿಯನ್ನು ನೀಡಲಾಗುವುದು.
ಇದನ್ನು ಓದಿ:Railway requirement 2026: ಎಕ್ಸಾಮ್ ಇಲ್ಲದೇ ರೇಲ್ವೇ ಜಾಬ್.ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು – KPworld365
ಅರ್ಜಿಯನ್ನು ಹೇಗೆ ಎಲ್ಲಿ ಸಲ್ಲಿಸಬೇಕು?
7 ವರ್ಷ ವಕೀಲ ವೃತ್ತಿಯಲ್ಲಿ ನೀವು ಅನುಭವವನ್ನು ಹೊಂದಿದ್ದರೆ ತಡ ಮಾಡದೆ ಏಪ್ರಿಲ್ 6/04/ 2026 ರ ಸಂಜೆ ಗಂಟೆ 5.30ರ ಒಳಗೆ ಅರ್ಜಿಯನ್ನು ಸಲ್ಲಿಸಿ.ಅರ್ಜಿ ಸಲ್ಲಿಸಲು ಹೋಗುವಾಗ ನಿಮ್ಮ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮರೆಯದೆ ತೆಗೆದುಕೊಂಡು ಹೋಗಿ.ಅಗತ್ಯವಿರುವ ಎಲ್ಲ ಶಿಕ್ಷಣ ಸಂಬಂಧಿತ ದಾಖಲೆಗಳನ್ನು ಮತ್ತು ನಿಮ್ಮ ಅನುಭವದ ದಾಖಲೆಯನ್ನು ಲಗತ್ತಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.ಕೊನೆಯ ದಿನಾಂಕಕ್ಕಾಗಿ ಕಾಯದೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ ಯಾಕೆಂದರೆ ಒಮ್ಮೆ ಈ ಚಾನ್ಸ್ ಮಿಸ್ ಮಾಡಿಕೊಂಡರೆ ನೀವು ಮತ್ತೆ ಇಂತಹ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬರಬಹುದು.
ಅರ್ಜಿಯನ್ನು ಸಲ್ಲಿಸಲು ಅರ್ಜಿ ನಮೂನೆ ಎಲ್ಲಿ ದೊರೆಯುತ್ತದೆ ಎಂದು ನಿಮಗೆ ಪ್ರಶ್ನೆಗಳು ಕಾಡುತ್ತಿದ್ದರೆ ಅಥವಾ ಇದರ ಬಗ್ಗೆ ನಿಮಗೆ ಬೇರೆ ಏನಾದರೂ ಸಂದೇಹಗಳಿದ್ದರೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದಂತೆ ಸೀದಾ ಜಿಲ್ಲಾಧಿಕಾರಿಗಳ ಕಚೇರಿ ಕೆಲಸದ ಸಮಯದಲ್ಲಿ ನೀವೇ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ನಿಮ್ಮ ಭವಿಷ್ಯವನ್ನು ವೃದ್ಧಿಗೊಳಿಸಲು ಇದು ಒಳ್ಳೆಯ ಅವಕಾಶ. ತಕ್ಷಣವೇ ಬೇಕಾದ ತಯಾರಿಗಳನ್ನು ನಡೆಸಿ ಮತ್ತು ಅರ್ಜಿಯನ್ನು ಸಲ್ಲಿಸಿ ಬಂದ ಅವಕಾಶವನ್ನು ತಿರಸ್ಕರಿಸಬೇಡಿ. ಹಾಗೇ ಯಾರಾದರೂ ನಿಮ್ಮ ಸ್ನೇಹಿತರು ವಕೀಲ ವೃತ್ತಿ ಮಾಡುತ್ತಿದ್ದರೆ ಅವರಿಗೂ ಈ ವಿಷಯವನ್ನು ತಿಳಿಸಿ ಅವರಿಗೂ ಉಪಯೋಗ ಆಗಬಹುದು.ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕವೂ ಬೆಳೆಯುತ್ತದೆ.ಭವಿಷ್ಯದಲ್ಲಿ ಹೈ ಕೋರ್ಟ್ ಅಥವಾ ಪಬ್ಲಿಕ್ prosecutor ಹುದ್ದೆಗಳಿಗೆ ಹೋಗುವಂತಹ ಅವಕಾಶಗಳು ಹೆಚ್ಚಾಗುತ್ತವೆ.
ವೃತ್ತಿಯ ಮಹತ್ವ
ವಕೀಲ ವೃತ್ತಿಯು ಸಮಾಜದ ನ್ಯಾಯ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದೆ.ನಿರಪರಾಧಿಗಳನ್ನು ರಕ್ಷಿಸಿ ನ್ಯಾಯವನ್ನು ಒದಗಿಸಲು ಮತ್ತು ಕಾನೂನುಗಳ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಲು ವಕೀಲರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಉಳಿಯಲು ನ್ಯಾಯ ವ್ಯವಸ್ಥೆಯು ಬಲವಾಗಿರಬೇಕು,ಮತ್ತು ಇದರಲ್ಲಿ ವಕೀಲರ ಪಾತ್ರವು ತುಂಬ ಮಹತ್ವದ್ದಾಗಿರುತ್ತದೆ.
ವಕೀಲರು ಕಾನೂನು ಜ್ಞಾನವನ್ನು ಹೊಂದಿರುವವರು. ಅವರು ತಮ್ಮ ಕ್ಲೈಂಟ್ ನ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ,ಅವರ ಹಕ್ಕುಗಳನ್ನು ಕಾಪಾಡುತ್ತಾರೆ ಮತ್ತು ಇದು ಅವರ ಜವಾಬ್ಧಾರಿ ಕೂಡ ಆಗಿರುತ್ತದೆ.ಸಾಮಾನ್ಯ ಜನರಿಗೆ ಕಾನೂನುಗಳ ಬಗ್ಗೆ ಪೂರ್ತಿ ಆಗಿ ತಿಳಿದಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಇವರು ಸರಿಯಾದ ಮಾರ್ಗದರ್ಶನವನ್ನು ನೀಡಿ ಸತ್ಯಕ್ಕೆ ಜಯ ದೊರೆಯುವಂತೆ ಮಾಡುತ್ತಾರೆ.
ವಕೀಲ ವೃತ್ತಿ ಎಂದರೆ ಕೇವಲ ಹಣವನ್ನು ಗಳಿಸುವ ಉದ್ಯೋಗವಲ್ಲ,ಇದು ಒಂದು ಸಾಮಾಜಿಕ ಸೇವೆಯಾಗಿದೆ.ದುರ್ಬಲರು,ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಅನ್ಯಾಯಕ್ಕೆ ಒಳಗಾಗಿರುವವರಿಗೆ ಸಹಾಯವನ್ನು ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಬಲಿಷ್ಠಗೊಳಿಸುತ್ತಾರೆ.ಒಬ್ಬ ಉತ್ತಮ ವಕೀಲ ಸತ್ಯ ಮತ್ತು ನ್ಯಾಯದ ಪರವಾಗಿ ನಿಂತು,ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಉತ್ತೇಜಿಸುತ್ತಾನೆ.
ಇಂದಿನ ಕಾಲದಲ್ಲಿ ಕಾನೂನುಗಳ ಮಹತ್ವದಲ್ಲಿ ಬದಲಾವಣೆ ಆಗುತ್ತಿದೆ ಮತ್ತು ಮಹತ್ವವು ಹೆಚ್ಚಾಗುತ್ತಿದೆ. ಇದರಿಂದಾಗಿ ವಕೀಲರ ಅವಶ್ಯಕತೆಯು ಕೂಡ ಹೆಚ್ಚಾಗಿದೆ. ಮಾನವ ಹಕ್ಕುಗಳು,ಮಹಿಳಾ ಹಕ್ಕುಗಳು, ಪರಿಸರ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ವಕೀಲರು ಮಹತ್ವದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.ವಕೀಲ ವೃತ್ತಿಯು ನ್ಯಾಯ ಮತ್ತು ಸತ್ಯದ ಪ್ರತೀಕವಾಗಿದೆ,ಸರ್ಕಾರದ ವಿವಿಧ ಇಲಾಖೆಗಳು,ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಾಗೂ ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ವಕೀಲರ ಸೇವೆಯು ಅಗತ್ಯವಾಗಿರುತ್ತದೆ.
ಈ ವೃತ್ತಿಯು ಚಾಲೆಂಜಿಂಗ್ ವೃತ್ತಿಯಾಗಿದೆ
ಯಾಕೆ ವಕೀಲ ಹುದ್ದೆಯು ಒಂದು ಚಾಲೆಂಜಿಂಗ್ ಹುದ್ದೆಯಾಗಿದೆ ಅಂದರೆ ಈ ಹುದ್ದೆಯಲ್ಲಿ ಕೆಲಸ ಮಾಡುವವರಿಗೆ ಒತ್ತಡವು ಹೆಚ್ಚಾಗಿ ಇರುತ್ತದೆ.ಸರ್ಕಾರದ ಪ್ರಮುಖ ಪ್ರಕರಣಗಳಲ್ಲಿ ಸೋಲನ್ನು ತಪ್ಪಿಸುವ ಜವಬ್ದಾರಿ ದೊಡ್ಡದಾಗಿ ಇರುತ್ತದೆ. ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ಸಿದ್ಧಪಡಿಸುವ ಹೊಣೆ ಇರುತ್ತದೆ.ನ್ಯಾಯಾಲಯದ ಒತ್ತಡವನ್ನು ನಿರ್ವಹಿಸುವುದು ಕೆಲವೊಮ್ಮೆ ಕಷ್ಟವಾಗಬಹುದು.
ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು
- ನಿಮ್ಮ ಬಾರ್ ಕೌನ್ಸಿಲ್ ರಿಜಿಸ್ಟ್ರೇಷನ್ ಆಕ್ಟಿವ್ ಇರಬೇಕು
- ಯಾವುದಾದರೂ pending ಕೇಸ್ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ
- ಪ್ರೊಫೆಷನಲ್ reputation ಕ್ಲೀನ್ ಇರಬೇಕು
ಇದು ನಿಮಗೆ ಗೇಮ್ ಚೇಂಜಿಂಗ್ ಅವಕಾಶವು ಆಗಿರಬಹುದು.
ಇದನ್ನು ಓದಿ:AYUSH Recruitment 2026:ಸರ್ಕಾರಿ ಕೆಲಸ ಬೇಕಾ? ಆಯುಷ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಅವಕಾಶ – KPworld365
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026