ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ

ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಬಹಳ ಕಾತರದಿಂದ ಕಾಯುತ್ತಿದ್ದ 2026 ರ 2ನೇ ಪಿಯುಸಿ ಫಲಿತಾಂಶ ಇಂದು ಹೊರಬೀಳಲಿದೆ.ಅಂದರೆ ಏಪ್ರಿಲ್ 9 ರಂದು ಪ್ರಕಟವಾಗುತ್ತಿದೆ. ಪಾಸ್ ಆದರೆ ಏನು ಮಾಡಬೇಕು ಫೇಲ್ ಆದರೆ ಏನು ಮಾಡಬೇಕು ಪೂರ್ತಿ ಮಾಹಿತಿ ಇಲ್ಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಈಗಾಗಲೇ ಘೋಷಿಸಿದೆ. ಈ ಫಲಿತಾಂಶವು ಲಕ್ಷಾಂತರ ವಿಧ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಹಂತವಾಗಿದ್ದು, ವಿಧ್ಯಾರ್ಥಿಗಳು,ಪೋಷಕರು ಹಾಗೂ ಶಿಕ್ಷಕರಲ್ಲಿ ಅಪಾರ ಕುತೂಹಲವನ್ನು ಉಂಟು ಮಾಡಿದೆ.

ಈ ವರ್ಷದ 2ನೇ ಪಿಯುಸಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ಗಳಾದ karresults.nic.in ಮತ್ತು kseab.karnataka.gov.in ಮೂಲಕ ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾದ ನಂತರ, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (ರಿಜಿಸ್ಟ್ರೇಷನ್ ನಂಬರ್) ಬಳಸಿ ತಮ್ಮ ತಮ್ಮ ಅಂಕಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಫಲಿತಾಂಶ ಪ್ರಕಟಣೆ ಸಮಯ ಮತ್ತು ಪ್ರಮುಖ ಮಾಹಿತಿ

ಫಲಿತಾಂಶವು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಪ್ರಕಟಿಸಲಾಗುತ್ತದೆ. ಈ ಸಮಯದಿಂದಲೇ ಫಲಿತಾಂಶದ ಲಿಂಕ್ ಸಕ್ರಿಯಗೊಳ್ಳುತ್ತದೆ ಅಂದರೆ activate ಆಗುತ್ತದೆ.ವಿದ್ಯಾರ್ಥಿಗಳು ಆನ್ಲೈನ್ ಸಹಾಯದಿಂದ ಕೂಡಲೇ ತಮ್ಮ ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು, ಆದರೆ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಸಂಜೆ 6:15ಕ್ಕೆ ನಡೆಯಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಒಟ್ಟು ಪಾಸ್ ಪ್ರಮಾಣ, ಜಿಲ್ಲಾವಾರು ಫಲಿತಾಂಶ, ಟಾಪರ್ ಗಳ  ವಿವರಗಳು ಸೇರಿದಂತೆ ಹಲವು ಪ್ರಮುಖ ಮಾಹಿತಿಗಳನ್ನು ಪ್ರಕಟಿಸಲಾಗುತ್ತದೆ.

Digilocker ಮೂಲಕ ಕೂಡ ಫಲಿತಾಂಶ ಪಡೆಯುವ ಅವಕಾಶ

ಈ ವರ್ಷದ ಮುಖ್ಯ ವಿಶೇಷತೆ ಎಂದರೆ ವಿಧ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು digilocker ಮೂಲಕವೂ ಪಡೆದುಕೊಳ್ಳಬಹುದು. Digilocker ಅಂದರೆ ಏನು,ಇದೊಂದು ಭಾರತ ಸರಕಾರದ ಡಿಜಿಟಲ್ ಸೇವೆ ಆಗಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳಬಹುದು. Digilockerನಲ್ಲಿ ಲಾಗ್ ಇನ್ ಆಗಿ ತಮ್ಮ ದಾಖಲಾತಿಗಳನ್ನು ಪರಿಶೀಲಿಸುವ ಮೂಲಕ ಫಲಿತಾಂಶವನ್ನು ಸುಲಭ ವಿಧಾನದಿಂದ ಪಡೆದುಕೊಳ್ಳಬಹುದು.digilocker ಬಳಸುವ ಮೂಲಕ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಎಲ್ಲಿಂದ ಬೇಕಾದರೂ ತೆಗೆದುಕೊಂಡು ಬೇಕಾದ ಕೋರ್ಸುಗಳಿಗೆ ಪ್ರವೇಶಾತಿಯನ್ನು ಪಡೆದುಕೊಳ್ಳಬಹುದು. ಇದು ವಿಶೇಷವಾಗಿ ಕಾಲೇಜು ಪ್ರವೇಶದ ಸಮಯದಲ್ಲಿ ಬಹಳ ಉಪಯುಕ್ತವಾಗುತ್ತದೆ.ಫಿಸಿಕಲ್ ಅಂಕಪಟ್ಟಿ ಕೈಯಲ್ಲಿ ಇಲ್ಲದೇ ಇದ್ದರೂ ಡಿಜಿಟಲ್ ಕಾಪಿ ಮೂಲಕವೇ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಈ ಫಲಿತಾಂಶದ ಮಹತ್ವವೇನು?

2ನೇ ಪಿಯುಸಿ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅತ್ಯಂತ ಮುಖ್ಯ ಹಾಗೂ ಇದನ್ನು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಹಾಕುವ ಮುನ್ನುಡಿ ಎನ್ನಬಹುದು.ವಿದ್ಯಾರ್ಥಿಗಳ ಇಡೀ ಜೀವನದ ಭವಿಷ್ಯವು ಪಿಯುಸಿ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.ಈ ಪಿಯುಸಿ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ಮೆಡಿಕಲ್,ಡಿಗ್ರಿ ಅಥವಾ ಅಥವಾ ಇತರ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಆದ್ದರಿಂದ ಈ ಫಲಿತಾಂಶವು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ ಎಂದು ಹೇಳಬಹುದು.

ಫಲಿತಾಂಶ ಬಂದ ಮೇಲೆ ಏನು ಮಾಡಬೇಕು?

ಫಲಿತಾಂಶ ಇನ್ನೇನು ಪ್ರಕಟವಾಗುತ್ತದೆ ಹಾಗಾದರೆ ಫಲಿತಾಂಶ ಪ್ರಕಟ ಆದ ಮೇಲೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಗೊಂದಲ ಸಹಜ. ಫಲಿತಾಂಶ ಪ್ರಕಟ ಆದ ಕೂಡಲೇ ನೀವು ನಿಮ್ಮ ಅಂಕಗಳನ್ನು ಮೊದಲು ಪರಿಶೀಲಿಸಿ ನಂತರ ಸಮಾಧಾನದಿಂದ ಮುಂದಿನ ಹಂತಗಳ ಬಗ್ಗೆ ಯೋಚನೆಯನ್ನು  ಮಾಡಬೇಕು. ಉತ್ತಮ ಅಂಕಗಳನ್ನು ಗಳಿಸಿದ ಗಳಿಸಿದ ವಿದ್ಯಾರ್ಥಿಗಳು ತಮ್ಮ ಗುರಿಯ ಕೋರ್ಸುಗಳಿಗೆ ತಕ್ಷಣವೇ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಬೇಕು.

ಅಂಕಗಳನ್ನು ಪರಿಶೀಲಿಸುವಾಗ ಯಾವುದೇ ತಪ್ಪುಗಳಿದ್ದರೆ ಗಮನಿಸಿ.ಹೆಸರು, ರಿಜಿಸ್ಟರ್ ಸಂಖ್ಯೆ, ವಿಷಯವಾರು ಅಂಕಗಳು ಸರಿಯಾಗಿವೆಯೇ? ಎಂದು ಪರಿಶೀಲಿಸುವುದು ಮುಖ್ಯ. ಯಾವುದೇ ದೋಷ ಕಂಡುಬಂದರೆ ತಕ್ಷಣವೇ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು.

ಒಂದು ವೇಳೆ ಕಡಿಮೆ ಅಂಕ ಬಂದರೆ ಏನು ಮಾಡಬೇಕು

ಬಹಳ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ತೆಗೆಯಬೇಕೆಂಬ ಕನಸು ಇರುತ್ತದೆ ಹಾಗೆ ತುಂಬ ಕಷ್ಟ ಪಟ್ಟು ಓದಿ ಎಕ್ಸಾಮ್ ಬರೆದಿರುತ್ತಾರೆ.ಆದರೆ ಕೆಲವೊಮ್ಮೆ ಅವರು ಅಂದಾಜು ಮಾಡಿದಷ್ಟು ಅಂಕಗಳು ಬರದೇ ಇರಬಹುದು ..ಇನ್ನೂ ಕೆಲವರು ಜಸ್ಟ್ ಪಾಸ್ ಆಗುವ ಆಕಾಂಕ್ಷೆಯನ್ನು ಇಟ್ಟುಕೊಂಡಿರುತ್ತಾರೆ,ಅವರ ನಿರೀಕ್ಷೆಯು ಸುಳ್ಳಾಗಿ ಫೇಲ್ ಆಗಬಹುದು.ಇಂತಹ ಸಂದರ್ಭಗಳಲ್ಲಿ  ನಿರಾಶೆ ಆಗುವುದು ಸಹಜ, ಇಂತಹ ಸಮಯದಲ್ಲಿ ಏನು ಮಾಡಬೇಕು ಹೇಗೆ ಫೇಸ್ ಮಾಡಬೇಕು ಎನ್ನುವುದು ಪೂರ್ತಿ ಮಾಹಿತಿ ತಿಳಿಯಿರಿ.ಇದು ಜೀವನದ ಅಂತ್ಯ ಅಲ್ಲ ಎಂಬುವುದನ್ನು ಮನದಲ್ಲಿ ಧೃಢ ನಿರ್ಧಾರ ಮಾಡಿಕೊಳ್ಳಬೇಕು. ಇಂದಿನ ಕಾಲದಲ್ಲಿ ಅನೇಕ ದಾರಿಗಳು ಸಿಗುತ್ತವೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲು ಇದೊಂದೇ ದಾರಿ ಅಲ್ಲ ಅನ್ನುವುದು ಮನಸಿನಲ್ಲಿ ಯೋಚನೆ ಇರಬೇಕು.

ವಿದ್ಯಾರ್ಥಿಗಳು revaluation ಅಥವಾ retotalling ಮೂಲಕ ತಮ್ಮ ಅಂಕಗಳನ್ನು ಮರು ಪರಿಶೀಲನೆ ಮಾಡಲು ಅಪ್ಲೈ ಮಾಡಬೇಕು ಯಾಕೆಂದರೆ ಕೆಲವೊಮ್ಮೆ totalling ಮಾಡುವಾಗ ತಪ್ಪಾಗಿರಬಹುದು ಮತ್ತು ಕೆಲವೊಮ್ಮೆ ಸರಿ ಉತ್ತರವನ್ನು ವಿದ್ಯಾರ್ಥಿಗಳು ಬರೆದಿದ್ದರೂ wrong consider ಮಾಡಿರಬಹುದು ಅಥವಾ ಕಡಿಮೆ ಅಂಕಗಳನ್ನು ನೀಡಿರಲುಬಹುದು. Revaluation ಗೆ ಅಪ್ಲೈ ಮಾಡುವುದರಿಂದ ಅಂಕಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.ಜೊತೆಗೆ supplimentary ಪರೀಕ್ಷೆಗಳು ಮತ್ತೊಂದು ಅವಕಾಶವನ್ನು ನೀಡುತ್ತವೆ.

ಇದನ್ನು ಓದಿ:ಭಾರತದ ಆರ್ಥಿಕತೆ 2026ರಲ್ಲಿ ಹೇಗಿರುತ್ತದೆ? ಸಾಮಾನ್ಯ ಜನರ ಜೀವನ, ಉದ್ಯೋಗ, ಬೆಲೆ ಏರಿಕೆ, ಮತ್ತು ಭವಿಷ್ಯದ ಆರ್ಥಿಕ ದಿಕ್ಕಿನ ಆಳವಾದ ವಿಶ್ಲೇಷಣೆ 

Supplimentary ಪರೀಕ್ಷೆ ಅಂದ್ರೆ ಏನು?

Supplimentary ಪರೀಕ್ಷೆ ಅಂದ್ರೆ ಈಗಿನ ಪರೀಕ್ಷೆಯಲ್ಲಿ ಕಡಿಮೆ ಅಂಕ ಅಥವಾ ಫೇಲ್ ಆದಲ್ಲಿ ಇನ್ನೊಂದು ಪರೀಕ್ಷೆಯನ್ನು ಬರೆಯಲು ಅವಕಾಶ ದೊರಕಿಸಿಕೊಡುವುದು. ಇದನ್ನು ಎರಡನೇ ಅವಕಾಶ ಎಂದು ಹೇಳಬಹುದು. ಈ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಅಂಕಗಳನ್ನು ಗಳಿಸಬಹುದು. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ತುಂಬ ಒಳ್ಳೆಯ ಯೋಜನೆ.

ಮುಂದಿನ ಶಿಕ್ಷಣದ ಆಯ್ಕೆಗಳು

ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳು ಲಭ್ಯವಿದೆ.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್ ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.ಇಂದಿನ ಕಾಲದಲ್ಲಿ ಮೆಡಿಕಲ್ ಕೋರ್ಸ್ ಗೆ ಯಾವಾಗಲೂ ಬಹಳ ಪ್ರಾಮುಖ್ಯತೆ ಇದೆ ಯಾಕೆಂದರೆ ಆರೋಗ್ಯ ತುಂಬ ಮುಖ್ಯ ಮೊದಲಿನ ಕಾಲದಲ್ಲಿ ಒಂದು ಜ್ವರ ಬಂದರೆ ಯಾರೂ ಕೂಡ ಅಸ್ವತ್ರೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ ಮನೆಯಲ್ಲಿಯೇ ಇದ್ದುಕೊಂಡು ಚೆನ್ನಾಗಿ ಆಹಾರ ಸೇವಿಸಿ ರೋಗವನ್ನು ವಾಸಿ ಮಾಡಿಕೊಳ್ಳುತ್ತಿದ್ದರು.ಆದರೆ ಇಂದಿನ ಕಾಲದಲ್ಲಿ ಜನರು ಮತ್ತು ಅವರ immunity ಪವರ್ ಬದಲಾದಂತೆ ರೋಗಗಳ ಪರಿಣಾಮಗಳು ಕೂಡ ಗಂಭೀರವಾಗುತ್ತಿದೆ.ಒಂದು ಸಣ್ಣ ಖಾಯಿಲೆ ಬಂದರು ಜನ ಗಾಬರಿಗೊಳ್ಳುತ್ತಾರೆ ಮತ್ತು ಅಸ್ವತ್ರೆಗೆ ಸೇರಿಸುತ್ತಾರೆ.ಇಂತಹ ಸಮಯದಲ್ಲಿ ಒಬ್ಬರೇ ಆ ರೋಗಿಯನ್ನು ನೋಡುವುದು ಮತ್ತು ಔಷಧಿಯನ್ನು ನೀಡುವುದು ಕಷ್ಟಕರ ಒಂದೇ ಬಾರಿಗೆ ಹತ್ತಕ್ಕಿಂತ ಹೆಚ್ಚು ರೋಗಿಗಳು ಕೂಡ ಬರಬಹುದು ಆಗ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರವಾಗಬಹುದು ಇಂತಹ ಸಮಯದಲ್ಲಿ ಮೆಡಿಕಲ್ ಸ್ಟಾಫ್ ಗಳು ಮುಖ್ಯ ಪಾತ್ರವನ್ನು ವಹಿಸುತ್ತಾರೆ.ಹಾಗೆ ಎಲ್ಲರೂ ಕೂಡ ಮೆಡಿಕಲ್ ಕೋರ್ಸ್ ಗೆ ಹೋಗಲು ಇಷ್ಟಪಡುವುದಿಲ್ಲ.ಜನರ ಸೇವೆಯನ್ನು ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡವರು ಮೆಡಿಕಲ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಕೆಲವರು ಇಂಜಿನಿಯರ್ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಹಾಗೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ  B.com ಅಥವಾ BBA ಮುಂತಾದ ಕೋರ್ಸುಗಳನ್ನು ಆಯ್ಕೆ ಮಾಡಬಹುದು. ಕಲಾ ವಿಭಾಗದವರು BA, journalism, psychology ಮುಂತಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಪೋಷಕರು ಮತ್ತು ಶಿಕ್ಷಕರ ಪಾತ್ರ

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಬರೀ ವಿದ್ಯಾರ್ಥಿಗಳ ಪಾತ್ರ ಮಾತ್ರ ಮುಖ್ಯ ಅಲ್ಲ.ಮೊದಲನೆಯದಾಗಿ ತಂದೆ ತಾಯಿಯರ ಪಾತ್ರ ಹಾಗೂ ಶಿಕ್ಷಕರ ಪಾತ್ರವು ಬಹಳ ಮುಖ್ಯ .ಪೋಷಕರು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಅವರೊಂದಿಗೆ ಸ್ನೇಹಿತರ ಹಾಗೆ ಬೆರೆತು ಓದಲು ಸಹಾಯವನ್ನು ಮಾಡಬೇಕು.ಹೇಗೆ ಸಹಾಯ ಮಾಡಬೇಕು ಅಂದರೆ ಪೋಷಕರು ಓದುವುದು ಅಲ್ಲ, ಅವರಿಗೆ ಮಾನಸಿಕವಾಗಿ ಒತ್ತಡ ಆಗದಂತೆ ಧೈರ್ಯವನ್ನು ತುಂಬಬೇಕು. ಮತ್ತು ಪೋಷಕರು ಮೊದಲು ಮಾಡುವ ತಪ್ಪು ಎಂದರೆ ತಮ್ಮ ಮಕ್ಕಳನ್ನು ಬೇರೆ ಮನೆಯವರ ಮಕ್ಕಳೊಂದಿಗೆ ಹೋಲಿಸುವುದು example ನೋಡು ಅವರ ಮಗ ಎಷ್ಟು ಚೆನ್ನಾಗಿ ಓದುತ್ತಾನೆ ನೀನು ಕೂಡ ಹಾಗೆ ಓದಬೇಕು ಅವನಕ್ಕಿಂತ ಚೆನ್ನಾಗಿ ಅಂಕಗಳನ್ನು ಪಡೆಯಬೇಕು ಎಂದು ಮಾನಸಿಕವಾಗಿ ಹಿಂಸೆ ಮಾಡಿ ಅವರು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತಾರೆ.ಈ ಕೆಲಸವನ್ನು ಯಾವ ಪೋಷಕರು ಕೂಡ ಮಾಡಬಾರದು ಯಾಕೆಂದರೆ ಅವರು ಮೊದಲೇ ಓದಿ ಒತ್ತಡವನ್ನು ಅನುಭವಿಸುತ್ತಿರುತ್ತಾರೆ ಇದರ ಮಧ್ಯೆ ನಮ್ಮವರೇ ನಮ್ಮನ್ನು ಬಿಟ್ಟು ಬೇರೆಯವರನ್ನು ಹೊಗಳುತ್ತಿದ್ದಾರೆ ಎಂಬುದು ಅವರ ಮನಸಿನ ಮೇಲೆ ಒತ್ತಡವನ್ನು ಹಾಕಿದಾಗ ಆತುರ ಪಟ್ಟು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.ಪೋಷಕರು ಪ್ರೋತ್ಸಾಹವನ್ನು ನೀಡಿದರೆ ಮಕ್ಕಳ ಭವಿಷ್ಯವು ಕೂಡ ತುಂಬ ಒಳ್ಳೆಯದಾಗುತ್ತದೆ.ಪೋಷಕರ ಹಾಗೆ ಅವರಕ್ಕಿಂತ ಹೆಚ್ಚು ಪಾತ್ರ ಶಿಕ್ಷಕರದ್ಡು ಮಕ್ಕಳು ಮನೆ ಬಿಟ್ಟು ಕಾಲೇಜಿಗೆ ಹೋದಾಗ ಬೆಳಗ್ಗಿನಿಂದ ಸಾಯಂಕಾಲದವರೆಗೆ ಶಿಕ್ಷಕರೇ ಅವರ ಜವಾಬ್ಧಾರಿಯನ್ನು ತೆಗೆದುಕೊಂಡಿರುತ್ತಾರೆ.ವಿದ್ಯಾರ್ಥಿಗಳಿಗೆ ಗುರುವಾಗಿ ಅವರ ತಪ್ಪುಗಳನ್ನು ತಿದ್ದಿ ಅವರಿಗೆ ಓದಲು ಏನು ಸಹಾಯ ಮಾಡಬೇಕೋ  ಅದನ್ನು ಮಾಡಬೇಕು ಪೋಷಕರ ಹಾಗೂ ಶಿಕ್ಷಕರ ಪಾತ್ರ ಚೆನ್ನಾಗಿದ್ದಾರೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ.ಮುಂದೆ ಏನು ಮಾಡಬೇಕು ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಅವರ ಭವಿಷ್ಯ ಚೆನ್ನಾಗಿರುತ್ತದೆ ಎಂದು ಅವರಿಗೆ ಮನಮುಟ್ಟುವಂತೆ ವಿವರಿಸಿ ಅವರನ್ನು ಸಿದ್ಧರಾಗುವಂತೆ ಮಾಡಬೇಕು

ಕೊನೆಯ ಸಲಹೆ

ಒಟ್ಟಿನಲ್ಲಿ ವಿದ್ಯಾರ್ಥಿಗಳು ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಪ್ರವೇಶಾತಿ ಪಡೆಯಲು ಪೋಷಕರ ಸಲಹೆ ಅಥವಾ ಸಪೋರ್ಟ್ ತುಂಬ ಮುಖ್ಯವಾಗಿರುತ್ತದೆ.ಬಲವಂತವಾಗಿ ನಿಮಗೆ ಇಷ್ಟ ಇದೆ ಎಂದು ನಿಮ್ಮ ಮಕ್ಕಳನು ಇಷ್ಟ ಇಲ್ಲದ ಕೋರ್ಸ್ ಗೆ ಆಯ್ಕೆ ಮಾಡಿ ನಿಮ್ಮ ಇಷ್ಟವನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಬೇಡಿ ಇಷ್ಟ ಇಲ್ಲದೆ ನೀವು ಅವರನ್ನು ಯಾವ ಕೋರ್ಸ್ ಗೆ ಜಾಯಿನ್ ಮಾಡಿಸಿದರು ಅದು ಸಮಯ ಮತ್ತು ಹಣ ವ್ಯರ್ಥವಾಗುತ್ತದೆ.ಫಲಿತಾಂಶ ಹೇಗೆ ಇದ್ದರೂ ಧೈರ್ಯ ಕಳೆದುಕೊಳ್ಳದೆ ಮುಂದಿನ ಹಂತಗಳನ್ನು ಯಶಸ್ವಿಯಾಗಿ ದಾಟಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ.ಯಾಕೆಂದರೆ ಸರಿಯಾದ ಮಾರ್ಗದರ್ಶನ ಮತ್ತು ಪರಿಶ್ರಮದಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಗುರಿಯನ್ನು ಸಾಧಿಸಬಹುದು.

ಇದನ್ನು ಓದಿ:Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ 

Prashree Gowda