ಕೋಟ್ಯಂತರ ರೂಪಾಯಿ ಆದಾಯ:ಅಭಿವೃದ್ಧಿ ಶೂನ್ಯ
ನಮ್ಮ ಕರ್ನಾಟಕದಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳು ಇವೆ.ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಪ್ರತಿದಿನ ಸಾವಿರಾರು ಭಕ್ತರನ್ನು ತನ್ನ ಬಳಿಗೆ ಕರೆಸಿಕೊಳ್ಳುವ ನಮ್ಮ ಕುಕ್ಕೆ ಸುಬ್ರಹ್ಮಣ್ಯನ ಕ್ಷೇತ್ರದಲ್ಲಿ ಪ್ರತಿನಿತ್ಯ ಭಕ್ತರುಗಳಿಂದ ಸಾವಿರಾರು ಅಲ್ಲ ಕೋಟ್ಯಂತರ ರೂಪಾಯಿಗಳ ಆದಾಯವನ್ನು ಪಡೆಯುತ್ತಾ ಅತ್ಯಂತ ಶ್ರೀಮಂತ ಕ್ಷೇತ್ರದಲ್ಲಿ ಒಂದಾಗಿರುವ ಕುಕ್ಕೆಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಾದರೆ ಏನಿದು ಸಮಸ್ಯೆ ಎಂದು ತಿಳಿಯಲು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ
ಅಂದರೆ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಬಗೆಹರಿಯದಿರುವುದು ಅಸಮಾಧಾನವನ್ನು ಉಂಟು ಮಾಡಿದೆ.
ದೇವಸ್ಥಾನದ ಮಹತ್ವವೇನು? ಮತ್ತು ಈ ದೇವಸ್ಥಾನ ಎಲ್ಲಿದೆ?
ನಮ್ಮ ಭಾರತದ, ಕರ್ನಾಟಕ ರಾಜ್ಯದ, ದಕ್ಷಿಣಕನ್ನಡ ಜಿಲ್ಲೆಯ,ಕಡಬ ತಾಲೂಕಿನಲ್ಲಿರುವ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರ.
ಈ ದೇವಸ್ಥಾನ ಯಾಕೆ ಇಷ್ಟು ಹೆಸರುವಾಸಿ ಮತ್ತು ಈ ದೇವಸ್ಥಾನದ ವಿಶೇಷತೆಗಳೇನು
ಈ ದೇವಸ್ಥಾನ
- ನಾಗಪೂಜೆಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ
- ಸರ್ಪ ಸಂಸ್ಕಾರ ಪೂಜೆಗಳಿಗೂ ಪ್ರಸಿದ್ಧಿಯಾಗಿದೆ
- ಆಶ್ಲೇಷಾ ಬಲಿ ಪೂಜೆ ಇಲ್ಲಿ ನಡೆಯುತ್ತದೆ
- ಧಾರ್ಮಿಕ ನಂಬಿಕೆ ಮತ್ತು ಮರಂಪರೆಗೆ ಹೆಸರುವಾಸಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ
ಇಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರುಗಳು ಸೇರುತ್ತಾರೆ.ಮತ್ತು ಹಬ್ಬಗಳ ದಿನಗಳಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಾರೆ.
ಯಾರಿಗಾದರೂ ಸರ್ಪದೋಷ ಕಾಣಿಸಿಕೊಂಡರೆ ಅಥವಾ ಚರ್ಮರೋಗಗಳು ಮುಂತಾದ ಸಮಸ್ಯೆಗಳಿಗೆ ಸುಬ್ರಹ್ಮಣ್ಯನಲ್ಲಿ ಆಶ್ಲೇಷಾ ಬಲಿ ಅಥವಾ ಮುಂತಾದ ಸೇವೆಗಳನ್ನು ಮಾಡಿಸಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬುದು ಭಕ್ತಾದಿಗಳ ಗಾಢ ನಂಬಿಕೆ.
ಕೋಟ್ಯಂತರ ರೂಪಾಯಿ ಆದಾಯ ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಯಾಕೆ
ಈ ದೇವಸ್ಥಾನದ ವಾರ್ಷಿಕ ಆದಾಯ ಸುಮಾರು ₹150ಕೋಟಿಗೂ ಹೆಚ್ಚು
ಸುಮಾರು 600ಕೋಟಿಯಷ್ಟು FD
ಇಷ್ಟೆಲ್ಲಾ ಆದಾಯ ಬರುತ್ತಿದ್ದರೂ ಕೂಡ ಮೂಲ ಸೌಲಭ್ಯದ ಕೊರತೆ ಉಂಟಾಗುತ್ತಿದೆ
ವ್ಯವಸ್ಥೆಗಳ ದೌರ್ಬಲ್ಯ
ಪ್ರತಿನಿತ್ಯ ಭಕ್ತರುಗಳ ಪರದಾಟ
ಎಲ್ಲರೂ ಇದನ್ನು ವಿರೋಧಿಸುವಂತಾಗಿದೆ
ಹಾಗಾದ್ರೆ ಭಕ್ತರ ಪ್ರಮುಖ ಸಮಸ್ಯೆಗಳೇನು
ವಸತಿಯ ವ್ಯವಸ್ಥೆ
ಸೀಸನ್ ಗಳ ಸಮಯದಲ್ಲಿ ದೂರದ ಊರುಗಳಿಂದ ಕುಕ್ಕೆಗೆ ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ವಸತಿಯ ವ್ಯವಸ್ಥೆಯ ಕೊರತೆ ಉಂಟಾಗುತ್ತದೆ ರೂಮುಗಳು ಸಿಗುವುದಿಲ್ಲ.
ಭೋಜನದ ವ್ಯವಸ್ಥೆ
ಭೋಜನ ಶಾಲೆಯ ಬಗ್ಗೆ ಹೇಳಬೇಕಾದರೆ ಇನ್ನೂ ಹಳೆಯ ಭೋಜನ ಶಾಲೆಯಲ್ಲೇ ಭೋಜನದ ವ್ಯವಸ್ಥೆ ನಡೆಯುತ್ತಿದೆ.ಮತ್ತು ಅಲ್ಲಿಗೆ ಬರುವ ಜನಸಂಖ್ಯೆಗೆ ಸರಿ ಹೊಂದುವ ವ್ಯವಸ್ಥೆಗಳಿಲ್ಲ.
ಶೌಚಾಲಯದ ಕೊರತೆ
ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಕಂಡು ಬರುತ್ತಿದೆ
ಇದರಿಂದಾಗಿ ಪ್ರತಿನಿತ್ಯ ಬರುವ ಸಾವಿರಾರು ಭಕ್ತರಿಗೆ ತೊಂದರೆಯಾಗುತ್ತಿದೆ.
ಸೇವೆಗಳಲ್ಲಿ ವ್ಯತ್ಯಯ
ಕುಕ್ಕೆ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಸೇವೆಗಳು ಲಿಮಿಟೆಡ್ ಆಗಿವೆ ಇದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ.ಕೆಲವೊಮ್ಮೆ ತಿಂಗಳವರೆಗೆ ಕಾಯಬೇಕಾಗುತ್ತದೆ.
ಇದನ್ನು ಓದಿ:ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಉಚಿತ NEET ತರಬೇತಿ ಸರ್ಕಾರದ ಹೊಸ ಯೋಜನೆ – ಯಾರು ಅರ್ಹರು? ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. – KPworld365 https://share.google/eJTA0TvmFnTSxUXOq
ಇವೆಲ್ಲ ಸಮಸ್ಯೆಗಳಿಗೆ ಮಾಸ್ಟರ್ ಪ್ಲಾನ್ ಹಾಕಿ – 17 ವರ್ಷಗಳು ಕಳೆದರು ಇನ್ನೂ ವಿಳಂಬ
👉 ದೇವಸ್ಥಾನದ ಅಭಿವೃದ್ಧಿಗೊಳಿಸಲು ಸುಮಾರು ₹604 ಕೋಟಿ ಮಾಸ್ಟರ್ ಪ್ಲ್ಯಾನ್ ಅನ್ನು ರೂಪಿಸಲಾಗಿದೆ.
ಏನೇನಿದೆ ಈ ಮಾಸ್ಟರ್ ಪ್ಲಾನ್ ನಲ್ಲಿ
- 800 ರೂಮ್ಸ್ ವ್ಯವಸ್ಥೆ
- ದೊಡ್ಡದಾದ ಭೋಜನ ಶಾಲೆ
- ಪೂಜಾ ಮಂದಿರ
- ಎಲ್ಲಾ ಮೂಲಭೂತ ಸೌಕರ್ಯಗಳು
ಆದರೆ ಮಾಸ್ಟರ್ ಪ್ಲಾನ್ ರೆಡಿ ಆಗಿ 17 ವರ್ಷಗಳು ಕಳೆದರು ಇನ್ನೂ ಕುಕ್ಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಕಾಣಿಸುತ್ತಿಲ್ಲ ಎನ್ನುವುದು ಬೇಸರದ ಸಂಗತಿ.
ಈ ವಿಳಂಬಕ್ಕೆ ಕಾರಣವೇನು?
✔️ ಸರ್ಕಾರದಿಂದ ಅನುಮೋದನೆಯ ಸಮಸ್ಯೆ
ಹಣವನ್ನು ಬಳಕೆ ಮಾಡಲು ಸರ್ಕಾರದಿಂದ approval ಬೇಕು
✔️ ಆಡಳಿತದ ಇಚ್ಛಾಶಕ್ತಿ ಕೊರತೆ ಇದೆ
ಯೋಜನೆಗಳು ಎಲ್ಲಾ pending ಇದೆ
✔️ ವ್ಯವಸ್ಥೆಯು ನಿಧಾನಗತಿಯಲ್ಲಿ ಸಾಗುತ್ತಿರುವುದು
ಫೈಲ್ process slow ಆಗುತ್ತಿರುವುದು
🛕 ನಮಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳು ಯಾವುವು?
👉 ಈ ಕೆಳಗಿನ ಕೆಲಸಗಳು ಆಗಬೇಕಿವೆ:
ಹೊಸ ಯಾಗಶಾಲೆಯನ್ನು ನಿರ್ಮಿಸುವುದು
5000 ಜನರನ್ನು ಒಮ್ಮೆಲೇ ಕುಳಿತುಕೊಳ್ಳುವ ಹಾಗೆ ಮಾಡಿ ಭೋಜನ ಕೊಡಲು 5000 seating ಭೋಜನಶಾಲೆ
ದೂರದ ಊರುಗಳಿಂದ ಕುಕ್ಕೆಗೆ ಬರುವ ಭಕ್ತಾದಿಗಳಿಗೆ ಉಳಿದುಕೊಳ್ಳಲು ವಸತಿ 800 rooms
ಆದುನಿಕ ಯುಗದಲ್ಲಿರುವ ನಮಗೆ modern facilities
🌍 ಕುಕ್ಕೆಗೆ ಭೇಟಿ ನೀಡಿದ ಭಕ್ತರ ಅನುಭವ ಹೇಗಿದೆ ಏನು ಹೇಳುತ್ತಾರೆ?
👉 ಭಕ್ತರು ಹೇಳೋದು
ನಮಗೆ “ದೇವರ ದರ್ಶನ ಸಿಗುತ್ತದೆ ಆದರೆ ಸೌಲಭ್ಯಗಳು ಇಲ್ಲಿ ಯಾವುದು ಇಲ್ಲ”
“ಹಣ ಬೇಕಾದಷ್ಟು ಇದೆ ಆದರೆ ವ್ಯವಸ್ಥೆಗಳೇ ಇಲ್ಲ”
“ಪ್ಲ್ಯಾನ್ ಇದೆ ಆದರೆ implementation siguttilla
🏛ಇದರಲ್ಲಿ ಸರ್ಕಾರದ ಪಾತ್ರ
👉 ಸರ್ಕಾರ:
ದೇವಸ್ಥಾನದ ನಿಯಂತ್ರಣ ಕೆಲಸ
ಹಣ ಬಳಕೆ control ಮಾಡುವುದು
👉 ಆದ್ದರಿಂದ:
➡️ ಸರ್ಕಾರದ approval ಇಲ್ಲದೇ ಯಾವ ಕೆಲಸ ಆಗೋದಿಲ್ಲ ಅದಕ್ಕೆ ಅಭಿವೃದ್ಧಿಯು ಆಗುತ್ತಿಲ್ಲ.
ಭಕ್ತರು ಯಾವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ
ಈ ವರ್ಷದ ಬಜೆಟ್ನಲ್ಲಿ ಆದರೂ ದೇವಸ್ಥಾನಕ್ಕೆ authority ಘೋಷಣೆ ಆಗುತ್ತದೋ ಇಲ್ಲವೋ ಎಂದು ಕಾದು ನೋಡಬೇಕಿದೆ ಇದರಿಂದಾಗಿ ಆದರೂ ದೇವಸ್ಥಾನದ ಅಭಿವೃದ್ಧಿ ಕಾರ್ಯ ಆಗಬಹುದೇನೋ ನೋಡಬೇಕಿದೆ.
ಅಭಿವೃದ್ಧಿ ಆದರೆ ಭವಿಷ್ಯದಲ್ಲಿ ಕುಕ್ಕೆಗೆ ಟೂರಿಸಂ ಹೆಚ್ಚಾಗಿ ಬರುತ್ತಾರೆ ಮತ್ತು ಆದಾಯ ಇನ್ನೂ ಎರಡು ಪಟ್ಟು ಹೆಚ್ಚಾಗಬಹುದು.ಇದರಿಂದಾಗಿ ಭಕ್ತರಿಗೂ satisfaction ಸಿಗಬಹುದು.
ಈಗ ಎಲ್ಲರಲ್ಲಿ ಮೂಡಿರುವ ಪ್ರಶ್ನೆ ಇಷ್ಟು ಆದಾಯ ಇದ್ದರೂ ಅಭಿವೃದ್ಧಿ ಯಾಕೆ ಆಗುತ್ತಿಲ್ಲ ಎನ್ನೋದು ಒಂದೇ!
ಇದೆಲ್ಲದಕ್ಕೂ ಪರಿಹಾರ
ವೇಗವಾಗಿ ಅಪ್ರೂವಲ್ ಆಗಬೇಕು
Direct fund ಯೂಸ್ ಮಾಡಿಕೊಳ್ಳುವ ಹಾಗೆ ಆಗಬೇಕು
ಮಾನಿಟರಿಂಗ್ ನಡೆಯುತ್ತಿರಬೇಕು
ವರ್ಷ ಪೂರ್ತಿ ಭಕ್ತರಿಂದ ತುಂಬಿರುವ ಪ್ರಸಿದ್ಧ ದೇವಾಲಯ ಇದಾಗಿರುವುದರಿಂದ ಅನೇಕ ಧಾರ್ಮಿಕ ನಂಬಿಕೆಯನ್ನಿಟ್ಟುಕೊಂಡು ಇಲ್ಲಿಗೆ ಭೇಟಿ ನೀಡುವ ಭಕ್ತರ ಸಮಸ್ಯೆ ಯನ್ನು ಹೇಳಿಕೊಂಡಿದ್ದಾರೆ. ಭಕ್ತರು ಮುಖ್ಯವಾಗಿ ಹೇಳುತ್ತಿರುವುದು ನಾವಿಂದು ಆಧುನಿಕ ಯುಗದಲ್ಲಿದ್ದೇವೆ ದೇವಸ್ಥಾನದ ವ್ಯವಸ್ಥೆಗಳು ಯಾವುದು ಕೂಡ ಇಂದಿನ ಕಾಲಕ್ಕೆ ತಕ್ಕಂತೆ ಸುಧಾರಿಸಿಲ್ಲ. ವಿಶೇಷವಾಗಿ ಪೀಕ್ ಸಮಯಗಳಲ್ಲಿ ಜನರ ಕ್ರೌಡ್ ಸರಿಯಾಗಿ ಹ್ಯಾಂಡಲ್ ಮಾಡಲಾಗದಿರುವುದು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.ದೀರ್ಘವಾದ ಸಾಲುಗಳು ನಿರ್ವಹಣಾ ವ್ಯವಸ್ಥೆಯ ಅಸಮರ್ಪಕತೆ ಮತ್ತು ಸ್ಪಷ್ಟ ಮಾರ್ಗದರ್ಶನ ನೀಡುವವರ ಕೊರತೆ ಕೂಡ ಭಕ್ತರ ಅನುಭವವನ್ನು ಹದಗೆಡಿಸುವಂತೆ ಮಾಡಿದೆ.
ಇಷ್ಟು ಮಾತ್ರವಲ್ಲದೆ ಸೇವೆಗಳ ವ್ಯವಸ್ಥೆಯಲ್ಲಿಯೂ ಕೂಡ ಒತ್ತಡ ಕಂಡುಬರುತ್ತಿದೆ.ಕೆಲವೊಂದು ಪ್ರಮುಖ ಪೂಜೆಗಳಿಗೆ ಮಾತ್ರ ಸೀಮಿತ ಅವಕಾಶಗಳನ್ನು ನೀಡಲಾಗಿರುವುದರಿಂದ ಭಕ್ತರು ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳುವಂತೆ ಆಗುತ್ತದೆ. ಇದು ಹಣ ಮತ್ತು ಸಮಯ ಎರಡರ ವ್ಯಯಕ್ಕೂ ಕಾರಣವಾಗುತ್ತದೆ.ಶ್ರೀಮಂತ ದೇಗುಲದಲ್ಲಿ ಸಾಮಾನ್ಯ ಸೌಕರ್ಯ ಎಂಬ ದೂರುಗಳು ಭಕ್ತಾದಿಗಳಿಂದ ಕೇಳಿ ಬರುತ್ತಿವೆ.
ಈ ಯೋಜನೆಯ ಅಭಿವೃದ್ಧಿ ಕಾರ್ಯ ಬರೀ ಕಾಗದಕ್ಕೆ ಸೀಮಿತವಾಗಿದೆ.ಯೋಜನೆಗಳನ್ನು ರೂಪಿಸುವುದು ಸುಲಭ ಆದರೆ ಅದನ್ನು ಜಾರಿಗೊಳಿಸುವುದು ದೊಡ್ಡ ಸವಾಲಾಗಿದೆ.ದರ್ಶನ ವ್ಯವಸ್ಥೆ ಸರಳವಾಗಿರಬೇಕು ಮಾಹಿತಿಯು ಸ್ಪಷ್ಟವಾಗಿರಬೇಕು.ಮತ್ತು ನಿರ್ವಹಣೆ ಪಾರದರ್ಶಕವಾಗಿರಬೇಕು ಇವುಗಳ ಕೊರತೆ ಉಂಟಾದರೆ ಭಕ್ತರಿಗೆ ಕ್ಷೇತ್ರದ ಮೇಲಿನ ನಂಬಿಕೆ ಕೂಡ ಕಳೆದುಕೊಳ್ಳುವಂತೆ ಆಗುತ್ತದೆ.
ಇಂದಿನ ಕಾಲದಲ್ಲಿ ದೇವಸ್ಥಾನಗಳ ಅಭಿವೃದ್ಧಿ ಅಂದರೆ ಬರಿ ಗೋಡೆಗಳನ್ನು ಅಥವಾ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಮಾತ್ರ ಸೀಮಿತವಾಗಿರಬಾರದು.ಬದಲಾಗಿ ಅದು ಭಕ್ತರಿಗೆ ಉತ್ತಮ ಅನುಭವಗಳನ್ನು ನೀಡುವ ವ್ಯವಸ್ಥೆಗಳ ನಿರ್ಮಾಣವಾಗಬೇಕು.
ಸಮರ್ಪಕ ಯೋಜನೆಯಿಂದ ಮತ್ತು ಜವಾಬ್ದಾರಿಯುತ ನಿರ್ವಹಣೆಯಿಂದ ಯಾವುದೇ ಭಕ್ತರಿಗೂ ನಿರಾಶೆಯಾಗುವುದಿಲ್ಲ.ಮತ್ತು ಅತ್ಯುತ್ತಮ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.ಇಲ್ಲವಾದರೆ ಆದಾಯ ಹೆಚ್ಚಾಗುತ್ತದೆ ಅಸಮಾಧಾನವೂ ಹೆಚ್ಚಾಗುತ್ತಾ ಹೋಗುತ್ತದೆ. ಕಾದು ನೋಡಬೇಕಿದೆ ಇನ್ನಾದರೂ ಕುಕ್ಕೆ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತದೆಯೋ ಎಂದು.
ಇದನ್ನು ಓದಿ:ರೇಲ್ವೇ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ದಲ್ಲೇ ನಡೆಸಬೇಕು: ಸಂಸದರಿಗೆ ಪತ್ರ ಬರೆದ ಡಾ. ಪುರುಷೋತ್ತಮ ಬಿಳಿಮಲೆ – ಸಂಪೂರ್ಣ ವರದಿ ಓದಿ ತಿಳಿದುಕೊಳ್ಳಿ – KPworld365 https://kpworld365.in/railway-exam-kannada-language-demand-bilimale-letter/
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026