AYUSH Recruitment 2026:ಸರ್ಕಾರಿ ಕೆಲಸ ಬೇಕಾ? ಆಯುಷ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಅವಕಾಶ

AYUSH Recruitment 2026

ನೀವು  ಈಗ ತಾನೇ ಬಿ.ಕಾಂ, ಬಿಬಿಎ ಮುಗಿಸಿದ್ದೀರಾ? ಅಥವಾ ಮೊದಲೇ ಮುಗಿಸಿ ಕೆಲಸ ಸಿಗದೆ ಖಾಲಿ ಕುಳಿತಿದ್ದೀರಾ? ಹಾಗಾದ್ರೆ ನಿಮಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ! ಅದೇನೆಂದು ಪೂರ್ತಿ ಓದಿ ಮಾಹಿತಿಯನ್ನು ಪಡೆದುಕೊಳ್ಳಿ ಬೆಂಗಳೂರಿನಲ್ಲಿ  ಭರ್ಜರಿ ಸರ್ಕಾರಿ  ಉದ್ಯೋಗಾವಕಾಶ

ಬೆಂಗಳೂರು: ಉದ್ಯೋಗಕ್ಕಾಗಿ ಕಾಯುತ್ತಿರುವ ನಮ್ಮ ಕರ್ನಾಟಕದ ಮತ್ತು ಇತರ  ಯುವಕರಿಗೆ ಕರ್ನಾಟಕ ಸರಕಾರದ ಆಯುಷ್ ಇಲಾಖೆಯಿಂದ ಭರ್ಜರಿ ಅವಕಾಶ ದೊರಕಿದೆ.ವಿಶೇಷವಾಗಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದಿರುವಂತಹ ಅಭ್ಯರ್ಥಿಗಳಿಗೆ(B.Com/BBA/BBM) ಇದು ಒಂದು ಸುವರ್ಣಾವಕಾಶ ಆಗಿದೆ ಎಂದು ಹೇಳಬಹುದು.ಬನ್ನಿ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ.

ಕರ್ನಾಟಕದ ಆಯುಷ್ ನಿರ್ದೇಶನಾಲಯದಲ್ಲಿ ಖಾಲಿ ಇರುವ ಖಾತೆ ಯಾವುದು ಅಂದರೆ ಖಾತೆ ಸಹಾಯಕ  (accounts assistant) ಈ ಹುದ್ದೆಗಳನ್ನು ಭರ್ತಿ ಮಾಡಲು ಆಯುಷ್ ಇಲಾಖೆಯಿಂದ  ಅರ್ಜಿಯನ್ನು ಆಹ್ವಾನಿಸಲಾಗಿದ್ದು,ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರ ಸಂದರ್ಶನದ ಮೂಲಕ ಆಯ್ಕೆಯನ್ನು ಮಾಡಲಾಗುತ್ತದೆ.

🟢ಮೊದಲು ಆಯುಷ್ ಇಲಾಖೆ ಬಗ್ಗೆ ತಿಳಿದುಕೊಳ್ಳಿ

ಆಯುಷ್ ಇಲಾಖೆ ಅಂದರೆ ಏನು?

ಆಯುಷ್  ಇಲಾಖೆಯು ಭಾರತ ಸರ್ಕಾರದ ಪ್ರಮುಖ ಆರೋಗ್ಯ ವಿಭಾಗವಾಗಿದ್ದು,ಕೆಳಗಿನ ಪರಂಪರಾ ಚಿಕಿತ್ಸಾ ಪದ್ಧತಿಗಳನ್ನು ಒಟ್ಟಾಗಿ ಆಯುಷ್ ಎಂದು ಕರೆಯಲಾಗುತ್ತದೆ ಹಾಗಾದರೆ ಆ ಐದು ವಿಧಾನಗಳು ಯಾವುದು ಮಾಹಿತಿ ಇಲ್ಲಿದೆ.

ಆಯುರ್ವೇದ

ಆಯುರ್ವೇದ ಅಂದರೆ ಪ್ರಾಚೀನ ಭಾರತೀಯ ವೈದ್ಯ ಪದ್ಧತಿ ಇದಾಗಿದೆ.ಸುಮಾರು ಐದು ವರ್ಷಗಳ ಕಾಲ ಹಳೆಯದು ಎಂದು ಹೇಳಬಹುದು

ಅರ್ಥ:”ಆಯು”=ಜೀವನ,”ವೇದ”=ಜ್ಞಾನ, ಜೀವನದ ವಿಜ್ಞಾನ

ಮುಖ್ಯ ತತ್ವಗಳು:ಮೂರು ದೋಷಗಳು ವಾತ,ಪಿತ್ತ,ಕಫ. ಈ ಮೂರು ಸಮತೋಲನದಲ್ಲಿದ್ದರೆ  ಆರೋಗ್ಯ ಉತ್ತಮ.ದೇಹ ಮತ್ತು ಮನಸ್ಸಿನ ಸಮತೋಲನ ಮುಖ್ಯ. ಆಯುರ್ವೇದದಲ್ಲಿ ಸಸ್ಯಗಳಿಂದ ಚಿಕಿತ್ಸೆ ನೀಡಲಾಗುವುದು

ಯೋಗ

ಅರ್ಥ; ದೇಹ ಮತ್ತು ಮನಸ್ಸುಗಳ ಏಕೀಕರಣ

ಮುಖ್ಯ ಭಾಗಗಳು:

  • ಆಸನಗಳು(aasanas)
  • ಪ್ರಾಣಾಯಾಮ(breathing)
  • ಧ್ಯಾನ (meditation)

ಪ್ರಯೋಜನಗಳು:

  • ಮಾನಸಿಕ ಶಾಂತಿ
  • ಒತ್ತಡ ಕಡಿಮೆ
  • ದೇಹದ ಲವಚಿಕತೆ (flexibility)
  • ತೂಕ ನಿಯಂತ್ರಣ

ಯುನಾನಿ

ಮೂಲ; ಗ್ರೀಕ್ ಪದ್ಧತಿ(ಹಿಪ್ಪೊಕ್ರೇಟ್ಸ್ ಕಾಲದಿಂದ) ಭಾರತದಲ್ಲಿ ಮೊಘಲ್ ಕಾಲದಲ್ಲಿ ಪ್ರಸಾರ

ಮುಖ್ಯ ತತ್ವಗಳು;

ನಾಲ್ಕು ಹ್ಯೂಮರ್ಸ್ 

  1. Blood(ರಕ್ತ)
  2. Phlegm(ಶ್ಲೇಷ್ಮ)
  3. Yellow bile (ಪಿತ್ತ)
  4. Black bile(ಕಪ್ಪು ಪಿತ್ತ)

ಸಿದ್ಧ

ಮೂಲ; ದಕ್ಷಿಣ ಭಾರತ(ತಮಿಳುನಾಡು)

ಮುಖ್ಯ ತತ್ವಗಳು:

ಐದು ಭೂತಗಳು – ಭೂಮಿ,ಜಲ, ಅಗ್ನಿ, ವಾಯು,ಆಕಾಶ

3ದೋಷಗಳು – ವಾತ,ಪಿತ್ತ,ಕಫ

ಹೋಮಿಯೋಪತಿ

ತತ್ವ: “like cures like”( ಸಮಾನವು ಸಮಾನವನ್ನುಗುಣಪಡಿಸುತ್ತದೆ)

ಮುಖ್ಯ ಅಂಶಗಳು:

  • ಅತೀ ಕಡಿಮೆ ಡೋಸ್ ಔಷಧಿ
  • ವ್ಯಕ್ತಿಯ ಸಂಪೂರ್ಣ ಲಕ್ಷಣಗಳನ್ನು ಗಮನಿಸುವುದು

ಈ ಕ್ಷೇತ್ರದಲ್ಲಿ ನೀವು ಕೆಲಸ ಮಾಡುವುದರಿಂದ ನಿಮಗೆ ಉತ್ತಮ ಅನುಭವ ಮತ್ತು ಸ್ಥಿರ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಉಳ್ಳಂತಹ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ಆಯುಷ್ ಇಲಾಖೆ ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಭಾಗದಲ್ಲಿ ಕೆಲಸ ಮಾಡುವುದರಿಂದ ಸಮಾಜಕ್ಕೆ ಸೇವೆ ಮಾಡುವ ಜೊತೆಗೆ ಭದ್ರ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.ಮುಖ್ಯವಾಗಿ ಇದರಿಂದ  ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚು ಲಾಭ.

ಹುದ್ದೆಯ ವಿವರಗಳು

  • ಹುದ್ದೆಯ ಹೆಸರು: ಖಾತೆ ಸಹಾಯಕ(Accounts assistant)
  • ಕೆಲಸದ ಸ್ಥಳ: ಬೆಂಗಳೂರು
  • ಇಲಾಖೆ: ಕರ್ನಾಟಕ ಆಯುಷ್ ನಿರ್ದೇಶನಾಲಯ
ಶೈಕ್ಷಣಿಕ ಅರ್ಹತೆ(Eligibility)

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು

  • UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.com/BBA/BBM ಪದವಿಯನ್ನು ಪೂರ್ಣಗೊಳಿಸಿರಬೇಕು
  • ಕಂಪ್ಯೂಟರ್ ಜ್ಞಾನ(Ms Office) ಅನ್ನು ಹೊಂದಿರಬೇಕು
  • Tally ಅಥವಾ Accounting software ತಿಳಿದಿದ್ದರೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ
  • ಹೊಸದಾಗಿ ಪದವಿಯನ್ನು ಮುಗಿಸಿದ ಅಭ್ಯರ್ಥಿಗಳು ಕೂಡ ಇಂಟರ್ವ್ಯೂ ಅಟೆಂಡ್ ಮಾಡಬಹುದು

👉ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ಕೂಡ ಇರುತ್ತದೆ

💰ವೇತನ(Salary)
  • ಮಾಸಿಕ ವೇತನ:ಸುಮಾರು ₹25,000 ಇರುತ್ತದೆ
  • ಅನುಭವ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ಹೆಚ್ಚಳ ಸಾಧ್ಯತೆ ಇದೆ
  • ಇದಲ್ಲದೆ ಸರ್ಕಾರದ ನಿಯಮದ ಪ್ರಕಾರ ಇತರ ಸೌಲಭ್ಯಗಳು ಸಹ ದೊರೆಯುತ್ತದೆ

ನೀವು freshers ಆಗಿದ್ದರೆ

👉 ಫ್ರೆಷರ್ಸ್ ಗೂ ಕೂಡ ಉತ್ತಮ ಆರಂಭಿಕ ವೇತನ ನೀಡಲಾಗುತ್ತದೆ👍

ಆಯ್ಕೆ ಪ್ರಕ್ರಿಯೆ(selection process) ಹೇಗಿರುತ್ತದೆ

ಈ ನೇಮಕಾತಿಯ ಮುಖ್ಯ ವಿಶೇಷತೆ ಏನೆಂದರೆ :

❌ಲಿಖಿತ ಪರೀಕ್ಷೆ ಇಲ್ಲವೇ ಇಲ್ಲ

✅ ನೇರ ಸಂದರ್ಶನದ ಮೂಲಕ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು(Walk-In-interview)

👉 ಸಂದರ್ಶನದಲ್ಲಿ ಗಮನಿಸುವ ಅಂಶಗಳು ಯಾವುವು:

  • Accounting knowledge
  • Computer skills
  • Communication skills

ಇದನ್ನು ಓದಿ;Railway requirement 2026: ಎಕ್ಸಾಮ್ ಇಲ್ಲದೇ ರೇಲ್ವೇ ಜಾಬ್.ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು – KPworld365 https://share.google/4IzwMDi2S6VSdsc3D

🗓️ ಪ್ರಮುಖ ದಿನಾಂಕ

  • ಸಂದರ್ಶನ ದಿನಾಂಕ:ಮಾರ್ಚ್ 25,2026 ತಪ್ಪದೆ ಸಂದರ್ಶನವನ್ನು ಅಟೆಂಡ್ ಮಾಡಿ

ಸಂದರ್ಶನ ಸ್ಥಳ:

ಆಡಿಟೋರಿಯಂ , 1ನೇ ಮಹಡಿ

ಆಯುಷ್ ನಿರ್ದೇಶನಾಲಯ

ಧನ್ವಂತರಿ ರಸ್ತೆ(ಮೆಜೆಸ್ಟಿಕ್ ಹತ್ತಿರ)

ಬೆಂಗಳೂರು 560009 ಇದು ಸಂದರ್ಶನ ನಡೆಯುವ ಸ್ಥಳದ ಪೂರ್ತಿ ಮಾಹಿತಿ

👉 ಆದಷ್ಟು ಅಭ್ಯರ್ಥಿಗಳು ಬೆಳಿಗ್ಗೆ  10:೦೦ ಗಂಟೆಗೆ  ಮುಂಚಿತವಾಗಿ ಹಾಜರಾಗುವುದು ಉತ್ತಮ

📄 ಅಗತ್ಯ ದಾಖಲೆಗಳು 

ಸಂದರ್ಶನಕ್ಕೆ ಹೋಗುವಾಗ ಈ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ

  • Resume/CV
  • Sslc/Degree/Puc ಅಂಕ ಪಟ್ಟಿಗಳು
  • ಆಧಾರ್ ಕಾರ್ಡ್/ಪಾನ್/ವೋಟರ್ ಐಡಿ
  • 2 ಪಾಸ್ಪೋರ್ಟ್ ಸೈಜ್ ಫೋಟೋಗಳು
  • ಅನುಭವ ಪ್ರಮಾಣ ಪತ್ರಗಳು(ಇದ್ದರೆ)
  • Self-attested Xerox copies

💡ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು

  • Basic accounting concepts revise  ಮಾಡಿಕೊಳ್ಳಿ
  • Resume clean & proffessional ಆಗಿರಲಿ ಎಲ್ಲವನ್ನೂ ಹೋಗುವ ಮೊದಲು ಪರಿಶೀಲಿಸಿ
  • Formal dress code  ಅನ್ನು ಪಾಲಿಸಿ ಯಾಕೆಂದರೆ ಕೆಲವೊಂದು ಕಚೇರಿಗಳಲ್ಲಿ ಅದರಲ್ಲೂ ಸರ್ಕಾರಿ ಕಚೇರಿಗಳಲ್ಲಿ ಶಿಸ್ತು ತುಂಬ ಮುಖ್ಯವಾಗಿರುತ್ತದೆ
  • Confidence jote ಮಾತನಾಡಿ ಹೆದರಬೇಡಿ ನಿಮ್ಮಿಂದ ಸಾಧ್ಯ ಎನ್ನುವ ಪಾಸಿಟಿವ್ ಥಿಂಕ್ ಮಾಡಿ ಹೋಗಿ

ಯಾಕೆ ಈ ಅವಕಾಶ ಮಿಸ್ ಮಾಡಬಾರದು

  • ಸರ್ಕಾರಿ ವಲಯದಲ್ಲಿ ಕೆಲಸ
  • ಯಾವುದೇ ಪರೀಕ್ಷೆ ಇಲ್ಲ
  • ನೇರವಾಗಿ ಆಯ್ಕೆ
  • ಬೆಂಗಳೂರಲ್ಲಿ ಕೆಲಸ

👉Career start ಮಾಡುವವರಿಗೆ ಇದು ಬೆಸ್ಟ್ ಚಾನ್ಸ್ 💯

❓ಸಾಮಾನ್ಯ ಪ್ರಶ್ನೆಗಳು(FAQs)

  1. ಈ ಜಾಬ್ ಗೆ experience ಬೇಕಾ?           ಅಗತ್ಯವಿಲ್ಲ ,freshers ಕೂಡಾ aply ಮಾಡಬಹುದು ಆದರೆ experience ಇದ್ದರೆ ಹೆಚ್ಚುವರಿ ಆದ್ಯತೆ ಸಿಗುತ್ತದೆ
  2. ಸ್ಯಾಲರಿ ಎಷ್ಟು ಸಿಗುತ್ತದೆ?                           ಸುಮಾರು ₹25,000 ಮಾಸಿಕ ವೇತನ ಸಿಗುತ್ತದೆ
  3. ಸೆಲೆಕ್ಷನ್ ಹೇಗೆ ನಡೆಯುತ್ತದೆ?                                    ಕೇವಲ ವಾಕ್-ಇನ್ ಇಂಟರ್ವ್ಯೂ ಮೂಲಕ ನಡೆಯುತ್ತದೆ.
  4. ಯಾವ ಸ್ಕಿಲ್ಸ್ ಮುಖ್ಯ?                                             Accounting knowledge,computer skills mattu communication skills mukhya
  5. ಹೇಗೆ apply ಮಾಡಬೇಕು?                                       ನಿಗದಿತ ದಿನಾಂಕದಲ್ಲಿ ನೇರವಾಗಿ ಸಂದರ್ಶನಕ್ಕೆ ಹಾಜರಾಗಬೇಕು.

 

Career growth 📈 ಮತ್ತು ಫ್ಯೂಚರ್ opportunuties 

ಆಯುಷ್ ಇಲಾಖೆಯಲ್ಲಿ ಖಾತೆ ಸಹಾಯಕನಾಗಿ ಕೆಲಸ ಮಾಡುವುದರಿಂದ ನಿಮ್ಮ ವೃತ್ತಿ ಜೀವನಕ್ಕೆ ಉತ್ತಮ ಆರಂಭ ಸಿಗುತ್ತದೆ.ಆರಂಭಿಕ ಹಂತದಲ್ಲಿ ಸಣ್ಣ ಜವಭಾರಿಗಳಿಂದ ಶುರುವಾದರೂ ಸಹ ಅನುಭವ ಹೆಚ್ಚಾದಂತೆ ಹೆಚ್ಚಿನ ಹೊಣೆಗಾರಿಕೆಗಳನ್ನು ನಿರ್ವಹಿಸುವ ಅವಕಾಶಗಳು ಸಿಗುತ್ತದೆ.ಕೆಲಸ ಮಾಡುತ್ತಾ experience ಹೆಚ್ಚಾದ ಹಾಗೇ ಅವಕಾಶಗಳು ಕೂಡ ಹೆಚ್ಚಾಗಿ ಸಿಗುತ್ತವೆ.

ಈ ಹುದ್ದೆಯಲ್ಲಿ ಕೆಲಸ ಮಾಡುವವರು ಲೆಕ್ಕ ಪತ್ರಗಳ ನಿರ್ವಹಣೆ,ಹಣಕಾಸು ವರದಿ ತಯಾರಿ,ಬಿಲ್ ಪ್ರೊಸೆಸಿಂಗ್ ಮತ್ತು ದಾಖಲೆ ಸಂಗ್ರಹಣೆ ಮೊದಲಾದ ಪ್ರಮುಖ ಕೆಲಸಗಳನ್ನು ಕಲಿಯುತ್ತಾರೆ.ಈ ಕೌಶಲ್ಯಗಳು ಭವಿಷ್ಯದಲ್ಲಿ ದೊಡ್ಡ ಸಂಸ್ಥೆಗಳಲ್ಲಿ ಉತ್ತಮ ಹುದ್ದೆಗಳಿಗೆ ಹೋಗಲು ಸಹಾಯ ಮಾಡುತ್ತವೆ.

👉ಮುಂದೆ ಸೀನಿಯರ್ accountant,Accounts officer ಅಥವಾ finance executive ಹುದ್ದೆಗಳಿಗೂ  ಬೆಳೆಯುವ ಅವಕಾಶ ಇದೆ.

ಅಗತ್ಯ ಕೌಶಲ್ಯಗಳು(required skills)

  • ಲೆಕ್ಕಪತ್ರಗಳ ಮೂಲಭೂತ ಜ್ಞಾನ(Accounting basics)
  • Ms Excel ಮತ್ತು tally ಬಳಕೆ
  • ಡೇಟಾ ಎಂಟ್ರಿ ಮತ್ತು ದಾಖಲೆ ನಿರ್ವಹಣೆ
  • ಸಮಯ ಪಾಲನೆ(ಟೈಮ್ ಮ್ಯಾನೇಜ್ಮೆಂಟ್)
  • ಸಂವಹನ ಕೌಶಲ್ಯ(communication skills)

👉 ಈ ಸ್ಕಿಲ್ಸ್ ಇದ್ದರೆ ಸೆಲೆಕ್ಷನ್ ಚಾನ್ಸಸ್ ಹೆಚ್ಚಾಗಿರುತ್ತದೆ.

ಕೆಲಸದ ಜವಾಬ್ದಾರಿಗಳು(Job responsibilities)

ಖಾತೆ ಸಹಾಯಕನಾಗಿ ಆಯ್ಕೆಯಾದ ನಂತರ ಕೆಳಗಿನ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ.

  • ದಿನನಿತ್ಯದ ಲೆಕ್ಕಪತ್ರಗಳ ದಾಖಲಾತಿ
  • ಬಿಲ್ ಮತ್ತು ಪಾವತಿ ವಿವರಗಳ ನಿರ್ವಹಣೆ
  • ಬ್ಯಾಂಕ್ ವ್ಯವಹಾರಗಳ  ಪರಿಶೀಲನೆ
  • ಹಣಕಾಸು ವರದಿ ತಯಾರಿ
  • ದಾಖಲೆಗಳನ್ನು ಸರಿಯಾಗಿ ಸಂಗ್ರಹಿಸುವುದು

👉ಈ ಕೆಲಸಗಳು ನಿಮ್ಮ ಪ್ರಾಕ್ಟಿಕಲ್ knowledge ಹೆಚ್ಚಿಸಲು ಸಹಾಯಕವಾಗುತ್ತದೆ.

ಗಮನಿಸಬೇಕಾದ ವಿಷಯಗಳು

ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು

ಎಲ್ಲ ಮೂಲ ದಾಖಲೆಗಳನ್ನು ನೆನಪಿನಲ್ಲಿ ತೆಗೆದುಕೊಂಡು ಹೋಗಿ

ತಪ್ಪು ಮಾಹಿತಿಯನ್ನು ನೀಡಬಾರದು

ಮತ್ತೊಮ್ಮೆ ಡ್ರೆಸ್ ಕೋಡ್ ಪ್ರೊಫೆಷನಲ್ ಆಗಿ ಇದ್ದರೆ ಒಳ್ಳೆಯದು

ಇದು ಚಿಕ್ಕ ಚಿಕ್ಕ ವಿಷಯಗಳಾಗಿ ಕಂಡರೂ ಕೂಡ ಈ ಸ್ಮಾಲ್ ಮಿಸ್ಟೇಕ್  ಇಂಟರ್ವ್ಯೂ ನಲ್ಲಿ ಸೆಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ

ಇಂಟರ್ವ್ಯೂನಲ್ಲಿ ಕೇಳಬಹುದಾದ ಪ್ರಶ್ನೆಗಳು

ಇಂಟರ್ವ್ಯೂ ನಲ್ಲಿ ಇಂತಹದೇ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ಗ್ಯಾರೆಂಟಿ ಇರುವುದಿಲ್ಲ

ಸಾಮಾನ್ಯವಾಗಿ ಈ ಕೆಳಗಿನ ಪ್ರಶ್ನೆಗಳನ್ನು ಕೂಡ ಕೇಳಬಹುದು

  1. Accounting ಎಂದರೆ ಏನು?
  2. Journal ಮತ್ತು Ledger ನಡುವಿನ ವ್ಯತ್ಯಾಸವೇನು?
  3. Tally ಬಳಸಿದ ಅನುಭವ ನಿಮಗೆ ಇದೆಯಾ?
  4. ನಿಮ್ಮ strength ಮತ್ತು weakness ಗಳು ಏನು?
  5. ಈ job ನಿಮಗೆ ಏಕೆ ಬೇಕು?

👉ಇವುಗಳನ್ನು ನೀವು ಪ್ರಿಪೇರ್ ಮಾಡಿಕೊಂಡು ಹೋದರೆ ನಿಮಗೆ ನಿಮ್ಮ ಮೇಲೆ confidence ಹೆಚ್ಚಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಗವರ್ನಮೆಂಟ್ ಜಾಬ್ ಆಗ್ಲಿ ಪ್ರೈವೇಟ್ ಜಾಬ್ ಆಗಲಿ ತುಂಬ ಕಾಂಪಿಟೇಶನ್ ಇದೆ.ಕೆಲಸ ಸಿಗುವುದೇ ಕಷ್ಟಕರವಾಗಿದೆ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪಾಪ್ಯುಲೇಷನ್ ಕೂಡ ಜಾಸ್ತಿಯಾಗುತ್ತಿದೆ ಎಷ್ಟೋ ಅಭ್ಯರ್ಥಿಗಳು ತಾವು ಓದಿರುವ ವಿಧ್ಯಾಭ್ಯಾಸಕ್ಕೆ ತಕ್ಕಂತೆ ಕೆಲಸಗಳು ಸಿಗದೆ ನಿರಾಶೆಯಾಗಿದ್ದಾರೆ.ಸರ್ಕಾರಿ ಕೆಲಸ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.ಪರೀಕ್ಷೆಗಳು ಬರೆದು ಮೆರಿಟ್ ಗಳಿಸಿ ಸರ್ಕಾರಿ ಕೆಲಸ ಗಳಿಸುವುದು ತೀರ ಕಷ್ಟಕರ ಹಗಲು ರಾತ್ರಿ ಕಷ್ಟ ಪಟ್ಟರು ಸಹ ಕೆಲವೊಬ್ಬರಿಗೆ ಅವಕಾಶ ಸಿಗುವುದಿಲ್ಲ ಅಂತಹುದರಲ್ಲಿ ಇಂತಹ ನೇರ ಸಂದರ್ಶನದ ಸರ್ಕಾರಿ ಕೆಲಸಗಳ ಅವಕಾಶ ಸಿಗುವುದು ಬಹಳ ಅಪರೂಪ. ಆದ್ದರಿಂದ ಈ ಕೆಲಸದ ಅವಶ್ಯಕತೆ ಇರುವಂತಹ ಅರ್ಹ ಅಭ್ಯರ್ಥಿಗಳು ತಡ ಮಾಡದೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಿ ಇದು ನಿಮಗೆ ಗೋಲ್ಡನ್ ಚಾನ್ಸ್ ಅಂತಾನೆ ಹೇಳಬಹುದು ಅವಕಾಶ ಕೈತಪ್ಪಿ ಹೋದರೆ ಮತ್ತೆ ಬರುವುದಿಲ್ಲ.

ಹಾಗೂ ಇದನ್ನು ನಿಮಗೆ ಕೆಲಸದ ಅವಶ್ಯಕತೆ ಇಲ್ಲವಾದರೆ ಅವಶ್ಯಕತೆ ಇರುವವರಿಗೆ ಶೇರ್ ಮಾಡಿ ನಿಮ್ಮ friends ಅಥವಾ family ಗ್ರೂಪ್ ಗಳಿದ್ದರೆ ಇದನ್ನು ಹಂಚಿಕೊಳ್ಳಿ ಕೆಲಸಕ್ಕಾಗಿ ಪರದಾಡುತ್ತಿರುವ ಅಭ್ಯರ್ಥಿಗಳಿಗೆ ನಿಮ್ಮಿಂದ ಸಹಾಯವಾಗಲಿ

ಸರಿಯಾದ ನಿಷ್ಠೆ ಮತ್ತು ಆತ್ಮವಿಶ್ವಾಸವನ್ನು ಇಟ್ಟುಕೊಂಡು ನಾನು ಸರ್ಕಾರಿ ಕೆಲಸವನ್ನು ಪಡೆದುಕೊಂಡೆ ಪಡೆದುಕೊಳ್ಳುತ್ತೇನೆ ಎಂದು ಪ್ರಯತ್ನಿಸಿ.ಪ್ರಯತ್ನ ಪಡುವುದು ನಿಮ್ಮ ಕೆಲಸ ಪ್ರಯತ್ನ ಪಟ್ಟರೆ ಫಲ ಖಂಡಿತ ಸಿಗುತ್ತದೆ.ಈ ಸರ್ಕಾರಿ ಕೆಲಸವು ನಿಮ್ಮದಾಗಲಿ ಎನ್ನುವುದು ನಮ್ಮ ಆಶಯ ಮತ್ತು ನಿಮ್ಮಿಂದ ಬೇರೆಯವರಿಗೂ ಸಹಾಯವಾಗಲಿ ಈ ಅವಕಾಶವನ್ನು ಕೈಚೆಲ್ಲಬೇಡಿ ಯಾಕಂದ್ರೆ ಇದು ನಿಮ್ಮ ಸರ್ಕಾರಿ ಉದ್ಯೋಗದ ಕನಸಿಗೆ ಮೊದಲ ಹೆಜ್ಜೆಯೂ ಆಗಿರಬಹುದು ಅಲ್ಲವೇ?ಇಂತಹ ಅವಕಾಶಗಳು ಪದೇ ಪದೇ ಬರುವುದಿಲ್ಲ.ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಸರಳ ಆಯ್ಕೆ ಪ್ರಕ್ರಿಯೆ ಇರುವುದರಿಂದ ಆದಷ್ಟು ಬೇಗ ಈ ಅವಕಾಶವನ್ನು ಉಪಯೋಗಿಸಿಕೊಂಡು ಸರ್ಕಾರಿ ಉದ್ಯೋಗವನ್ನು ನಿಮ್ಮದಾಗಿಸಿಕೊಂಡು ನಿಮ್ಮ ಹಾಗೂ ನಿಮ್ಮ ಕುಟುಂಬದ ಕನಸನ್ನು ನನಸಾಗಿಸಿ ಎಂಬುವುದು ನಮ್ಮ ಆಶಯ.