AI job shocking news
What is AI
ಹೌದು AI ಈಗ ಎಲ್ಲೆಡೆ ಸದ್ದು ಮಾಡಿ ತನ್ನದೇ ಆದ ಹವಾ ಸೃಷ್ಟಿಸಿದೆ ಎಷ್ಟರ ಮಟ್ಟಿಗೆ ಅಂದರೆ ಇಂದು AI ಎಷ್ಟೋ ಜನ ಮಾಡಬೇಕಾದ ಕೆಲಸವನ್ನು ಒನ್ ಮಿನಿಟ್ನಲ್ಲಿ ಎಲ್ಲಾ ಕೆಲಸವನ್ನು ಮಾಡಿಕೊಡುತ್ತದೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. AI ಅಂದರೆ artificial intelligence( ಕೃತಕ ಬುದ್ಕೆದಿಮತ್ತೆ ) ಅಂದರೆ ಮಾನವನಂತೆ ಯೋಚಿಸುವ, ಕಲಿಯುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಯಂತ್ರಗಳು ಅಥವಾ ಸಾಫ್ಟ್ವೇರ್ ಗಳನ್ನು ನಿರ್ಮಿಸುವ ತಂತ್ರಜ್ಞಾನ. ಸರಳವಾಗಿ ಹೇಳುವುದಾದರೆ AI ಅಂದರೆ ಮನುಷ್ಯನ ಬುದ್ಧಿ ತರ ಯಂತ್ರಗಳು ಕೆಲಸ ಮಾಡುವುದು. ಕೆಲವು ಕಡೆ AI coaching ಸೆಂಟರ್ ಗಳು ಕೂಡ ತಲೆ ಎತ್ತಿವೆ.ಈಗ ಯಾರೇ ಕಂಪನಿಗಳಿಗೆ ಜಾಬ್ ಅಪ್ಲಿಕೇಶನ್ ಹಾಕಬೇಕಾದರೆ AI skills ಅನ್ನು ಕಡ್ಡಾಯವಾಗಿ ಕೇಳುತ್ತಾರೆ ಮತ್ತು AI ಸ್ಕಿಲ್ಸ್ ಇದ್ದರೆ ಒಳ್ಳೆಯ ಗ್ರೋಥ್ ಕೂಡ ಸಿಗುತ್ತದೆ.AI ಪರಿಣಾಮವಾಗಿ ಎಷ್ಟೋ ಜನರನ್ನು ಕಂಪನಿ ಇಂದ layoff ಕೂಡ ಮಾಡುತ್ತಿದ್ದಾರೆ.
ಏನಿದು AI job ಗೆ ಅಪ್ಲೈ ಮಾಡಿದ ಯುವತಿಗೆ ಕಾದಿತ್ತು ಶಾಕಿಂಗ್ ಸುದ್ದಿ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ
ಬ್ರಿಟನ್‌ನಲ್ಲಿ ಒಬ್ಬ ಭಾರತೀಯ ಮೂಲದ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿರುತ್ತಾಳೆ ಈ ಭಾರತೀಯ ಮೂಲದ ವಿದ್ಯಾರ್ಥಿನಿ, ಉದ್ಯೋಗ ನೇಮಕಾತಿಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅತಿಯಾದ ಬಳಕೆಯ ಕುರಿತು ತೀವ್ರ ಅಸಮಾಧಾನವನ್ನು ಹೊರ ಹಾಕಿದ್ದಾಳೆ. ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಸಿನೆಸ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿರುವ 20 ವರ್ಷದ ಭುವನಾ ಚಿಲುಕುರಿ ಎಂಬ ವಿದ್ಯಾರ್ಥಿನಿ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಎಲ್ಲಾ ಯುವಜನರು ಎದುರಿಸುತ್ತಿರುವ ತೊಂದರೆಗಳನ್ನು ಬಿಬಿಸಿ ವಾಹಿನಿಯು ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಈ ಭುವನ ಎಂಬ ವಿದ್ಯಾರ್ಥಿನಿ ಅವರು ಇದುವರೆಗೆ 100ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕೆಂದು ಅರ್ಜಿಯನ್ನು ಹಾಕಿರುತ್ತಾರೆ. ಆದರೂ ಅವರಿಗೆ ಇದುವರೆಗೂ ಒಂದೇ ಒಂದು ಕಂಪನಿ ಇಂದ ಆಫರ್ ಲೆಟರ್ ಅಥವಾ joining letter ಕೂಡ ಬಂದಿರುವುದಿಲ್ಲ. ನಾನು ಕೆಲವು ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಕೇವಲ ಎರಡು ಮೂರು ನಿಮಿಷಗಳು ಕೂಡ ಆಗಿರುವುದಿಲ್ಲ ಆಗಲೇ ನನ್ನ ಅರ್ಜಿಯನ್ನು ಅವರು ರಿಜೆಕ್ಟ್ (ತಿರಸ್ಕೃತ) ಮಾಡಿದ ಮೆಸೇಜ್ ಬಂದಿರುತ್ತದೆ. ಇದು ನಿಜವಾಗಿಯೂ ನನಗೆ ತುಂಬ ಬೇಸರದ ಮತ್ತು ಶಾಕಿಂಗ್ ಸುದ್ದಿ ಎಂದು ಭಾರತದ ಮೂಲ ವಿದ್ಯಾರ್ಥಿನಿ ತನ್ನ ಅಂತರಾಳದ ಅಳಲನ್ನು ವಾಹಿನಿಯ ಮುಂದೆ ಬಿಚ್ಚಿಟ್ಟಿದ್ದಾರೆ.
ಮನುಷ್ಯರು ಮಾಡೋ ಪರಿಶೀಲನೆ ಯಂತ್ರಗಳ ಕೈನಲ್ಲಿ
ಇತ್ತೀಚಿನ ದಿನಗಳಲ್ಲಿ ತುಂಬ ಕಂಪನಿಗಳು ಅಭ್ಯರ್ಥಿಗಳನ್ನು ಹೇಗೆ ಶಾರ್ಟ್ ಲಿಸ್ಟ್ ಮಾಡ್ತಾರೆ ಅಂದರೆ ಮೊದಲೆಲ್ಲ ಜಾಬ್ ಇಂಟರ್ವ್ಯೂ ಅಥವಾ resume ಚೆಕ್ ಮಾಡಿ (HR ) ಮ್ಯಾನೇಜರ್ ಮಾಡುತ್ತಿದ್ದರು ಆದರೆ ಈಗ ಕಾಲ ಮತ್ತು ತಂತ್ರಜ್ಞಾನ ಸಂಪೂರ್ಣವಾಗಿ ಬದಲಾಗಿದೆ ಎಷ್ಟರ ಮಟ್ಟಿಗೆ ಅಂದರೆ ಮೊದಲು (HR) ಮಾಡುತ್ತ ಇದ್ದ ಕೆಲಸಗಳನ್ನೆಲ್ಲ ಈಗ ಸಂಪೂರ್ಣವಾಗಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ. ಭುವನಾ ಅವರು ಹೇಳುವ ಪ್ರಕಾರ, ಅವರು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ಯಾವ ಕಂಪನಿಯಲ್ಲಿ ಕೂಡ ಮಾನವ ಸಂಪನ್ಮೂಲ ಅಧಿಕಾರಿ ನೋಡಿಯೇ ಇರಲ್ಲ.ಯಾಕೆಂದರೆ ಮೊದಲ ಹಂತದಲ್ಲಿ ನಮ್ಮ ಸಿವಿಯನ್ನು (CV) ಅಥವಾ ರೆಸ್ಯೂಮ್ ಅನ್ನು ಪರಿಶೀಲನೆ ಮಾಡುವ ಕೆಲಸವನ್ನು ಈ AI ಮಾಡುತ್ತದೆ. ಹಾಗಾಗಿ ಮೊದಲ ಹಂತದಲ್ಲಿ ಅಷ್ಟು ಬೇಗನೆ ನಮ್ಮ resume ರಿಜೆಕ್ಟ್ ಆಗುತ್ತದೆ. ಒಂದು ಪಕ್ಷ ನಾವು ಅಲ್ಲಿ ಆಯ್ಕೆಯಾದರೂ ಸಹ, ಮುಂದಿನ ಹಂತ ವಿಡಿಯೋ ಸಂದರ್ಶನ ದ ಮೂಲಕ ಆಗಿರುತ್ತದೆ. ಅದನ್ನು ನಾವು ಎದುರಿಸ ಬೇಕಾಗುತ್ತದೆ ಎಂದಿದ್ದಾರೆ ಭುವನ ಅವರು.
ಭುವನ ಅವರು ಹೇಳುವ ಪ್ರಕಾರ ಇವರು ಹಲವಾರು ಇಂಟರ್ನ್‌ಶಿಪ್‌ಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ, ಕೆಲಸದ ಅನುಭವ ಇವರಿಗೆ ಇದ್ದರೂ ಕೂಡ ಈ ಬೇಸಿಗೆಯಲ್ಲಿ ಪದವಿಯನ್ನು ಮುಗಿಸಿಕೊಳ್ಳುವ ಮೊದಲು ಅವರಿಗೆ ಉದ್ಯೋಗವನ್ನು ಪಡೆಯಲು ಸಾಧ್ಯವೇ ಆಗಲಿಲ್ಲ ಅನ್ನುವುದು ಅವರಿಗೆ ಬೇಸರವನ್ನು ಅಥವಾ ನಿರಾಶೆಯನ್ನು ಉಂಟುಮಾಡಿದೆ. ಈ ವಿಷಯದ ಬಗ್ಗೆ ವಿವರಿಸಿದ ಭುವನ ಅವರು, ಇವೆಲ್ಲವನ್ನು ಗಮನಿಸಿದರೆ ನಾನೊಬ್ಬಳು ರೋಬೋಟ್ ಎನ್ನುವ ಭಾವನೆ ನನ್ನಲ್ಲಿ ಮೂಡುತ್ತದೆ ಎಂದಿದ್ದಾರೆ. ಸರಿ ಸುಮಾರು 20 ನಿಮಿಷಗಳ ಕಾಲ ಸ್ಕ್ರೀನ್ ನ ಮೇಲೆ ನಮ್ಮನ್ನು ನಾವೇ ನೋಡಿಕೊಳ್ಳುತ್ತಾ, ಬರೀ ಒಂದು ಯಂತ್ರ ಕೇಳುವ ಎಲ್ಲ ಪ್ರಶ್ನೆಗಳಿಗೆ ನಾವು ಯಾಂತ್ರಿಕವಾಗಿ ಉತ್ತರ ನೀಡಬೇಕು. ಆ ಸಮಯದಲ್ಲಿ ನಮ್ಮ ಜೊತೆ ಮಾತನಾಡಲು ಕೂಡ ಯಾರೂ ಅಲ್ಲಿ ಇರುವುದಿಲ್ಲ. ಇದು ಒಂದು ಕ್ಷಣ ನಮ್ಮ ಪೂರ್ತಿ ವ್ಯಕ್ತಿತ್ವವನ್ನೇ ಕಿತ್ತುಕೊಂಡಂತೆ ಭಾಸವಾಗುತ್ತದೆ. ಇದು ನಿಜವಾಗಿಯೂ ನನಗೆ ಮಾತ್ರ ಅಲ್ಲ ನನ್ನ ತರ ಕೆಲಸ ಹುಡುಕುತ್ತಿರುವ ಎಲ್ಲ ಅಭ್ಯರ್ಥಿಗಳಿಗೆ ಬೇಸರ ತರುವಂತಹ ಸಂಗತಿ ಎಂದು ಹೇಳಿದ್ದಾರೆ.
ಇದನ್ನು ಓದಿ:ಕೋಟ್ಯಂತರ ರೂಪಾಯಿ ಆದಾಯ:ಅಭಿವೃದ್ಧಿ ಮಾತ್ರ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಕುಕ್ಕೆಯ ವಾಸ್ತವ ಸ್ಥಿತಿ ಪೂರ್ತಿ ಮಾಹಿತಿ – KPworld365 https://share.google/DmOSLhAiPS2li4lG3
ಉದ್ಯೋಗವು ಕಡಿಮೆ,ಸ್ಪರ್ಧೆಯು ಕಡಿಮೆ
ಭುವನಾ ಅವರು ಹೇಳುವ ಪ್ರಕಾರ ಈ AI ನಿಂದ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಇಂದಿನ ಪರಿಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಕರೋನಾ ಸಾಂಕ್ರಾಮಿಕ ರೋಗದ ನಂತರ ಉದ್ಯೋಗಾವಕಾಶಗಳು ಕೂಡ ತುಂಬಾ ಕಡಿಮೆಯಾಗ ತೊಡಗಿತ್ತು. ಆದರೆ ಈಗ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚುತ್ತಿರುವ ವೆಚ್ಚಗಳು ಮತ್ತು ಉದ್ಯೋಗಿಗಳಿಗೆ ಸಿಗುತ್ತಿರುವ ಬಲವಾದ ರಕ್ಷಣೆಗಳಿಂದಾಗಿ ಕಂಪನಿಗಳು ಹೊಸ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ. ಇದೇ ಸಂದರ್ಭದಲ್ಲಿ, ದಿನನಿತ್ಯ ಸಾಲು ಸಾಲಾಗಿ ಒಂದರ ಮೇಲೊಂದರಂತೆ ಬರುವ ಸಾವಿರಾರು ಅರ್ಜಿಗಳನ್ನು ನಿರ್ವಹಿಸುವಲ್ಲಿ ಅತ್ಯಧಿಕ ಕಂಪನಿಗಳು ಬೇರೆ ದಾರಿ ಇಲ್ಲದೆ ಎಐ ನ ಮೊರೆ ಹೋಗುವಂತೆ ಆಗಿದೆ.
ಈ ನೇಮಕಾತಿಯಲ್ಲಿ ಎಲ್ಲ ಅಭ್ಯರ್ಥಿಗಳ ಪೂರ್ಣ ಪರಿಶೀಲನೆಗೆ ಎಐ ಅನ್ನು ಬಳಸುವ ಅಡೆಕ್ಕೊ ಗ್ರೂಪ್‌ನ ಸಿಇಒ ಡೆನಿಸ್ ಮ್ಯಾಚುಯೆಲ್ ಅವರು ಹೇಳುವ ಪ್ರಕಾರ, ನೇಮಕಾತಿ ಮಾಡಿಕೊಳ್ಳುವಂತಹ ಪ್ರಕ್ರಿಯೆಯೇ ಈಗ ಸಂಪೂರ್ಣವಾಗಿ ಬದಲಾಗಿದೆ. “ಪ್ರಸ್ತುತ ಸಮಯದಲ್ಲಿ ಒಂದು ಉದ್ಯೋಗ ಪಡೆಯಬೇಕಾದರೆ ಅಭ್ಯರ್ಥಿಗಳು ಸರಿ ಸುಮಾರು 200 ಅರ್ಜಿಗಳನ್ನು ಸಲ್ಲಿಸಬೇಕಾದಂತಹ ಅನಿವಾರ್ಯತೆ ಬಂದಿದೆ. ಎಐ ತಂತ್ರಜ್ಞಾನ ಈಗ ದೊಡ್ಡ ಮಟ್ಟದಲ್ಲಿ ಕೆಲಸವನ್ನು ಮಾಡುತ್ತದೆ. ಮೊದಲಿನ ತಂತ್ರಜ್ಞಾನದಲ್ಲಿ ಸರಾಸರಿಯಾಗಿ 50 ಅಭ್ಯರ್ಥಿಗಳನ್ನು ಪರಿಶೀಲಿಸಿ ಕೊನೆಗೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದ್ದರು,ಮತ್ತು ಉಳಿದಂತಹ 49 ಜನರಿಗೆ ನಿರಾಸೆ ತರುತ್ತಿತ್ತು. ಆದರೆ ಈಗಿನ AI ತಂತ್ರಜ್ಞಾನದಿಂದಾಗಿ 500 ಜನರನ್ನು AI ಪರಿಶೀಲನೆ ನಡೆಸಿ ,ಉಳಿದಂತಹ 499 ಜನರಿಗೆ ನಿರಾಸೆಯನ್ನು ಉಂಟುಮಾಡಲಾಗುತ್ತಿದೆ ಇದು ತುಂಬ ಆಘಾತಕಾರಿ ಸಂಗತಿಯಾಗಿದೆ” ಎಂದು ಭುವನ ಅವರು ಇಂದಿನ ಪರಿಸ್ಥಿತಿಯನ್ನು ವಾಹಿನಿಯ ಮುಂದೆ ಮುಕ್ತವಾಗಿ ವಿವರಿಸಿದ್ದಾರೆ.
ಎಐ ಗೆ ಸ್ಪರ್ಧಾತ್ಮಕವಾಗಿ ಎಐ
ಹೌದು ನೀವು ಓದುತ್ತಿರುವುದು ಸರಿಯಾಗಿ ಇದೆ AI ಟೂಲ್ ಗಳನ್ನೇ ಕಂಪನಿಗಳು ಏಕೆ ಬಳಸುತ್ತಿವೆ ಎಂಬುದು ನಮಗೆ ಕೂಡ ಅರ್ಥವಾಗುತ್ತದೆ ಆದರೆ ಅಭ್ಯರ್ಥಿಗಳು ಕೂಡ ಸಂಧರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಇದ್ದಾರೆ ಎನ್ನುತ್ತಿದ್ದಾರೆ ಭುವನ. ಕಂಪನಿಗಳಿಗೆ ಅರ್ಜಿಗಳು ಸಾಲು ಸಾಲಾಗಿ ಬರುತ್ತಿವೆ. ಹೀಗಾಗಿ ನಾನು ಕಂಪನಿಯವರನ್ನು ಎಂದಿಗೂ ನಿಂದಿಸುವುದಿಲ್ಲ. ಆದರೆ ಈ AI ಟೂಲ್ಸ್ ಗಳಿಂದಾಗಿ ವಿಧ್ಯಾರ್ಥಿಗಳು ಉದಾಸೀನರಾಗುತ್ತಿದ್ದಾರೆ. ‘ನೀವು ಎಐ ಟೂಲ್ ನಾ ಮುಖಾಂತರ ನಮ್ಮನ್ನು ಸ್ಕ್ರೀನಿಂಗ್ ಮಾಡಿದರೆ, ನಾವು AI ಮೂಲಕವೇ ಅರ್ಜಿ ಯನ್ನು ಸಲ್ಲಿಸುತ್ತೇವೆ’ ಎಂಬ ನಿರ್ಧಾರ ತೆಗೆದುಕೊಳ್ಳುತ್ತಾರೆ . ಅವರು ತಮ್ಮ resume ಗಳನ್ನ ಮಾಡಲು ಸಹ ಎಐ ಟೂಲ್ಸ್ ಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಯಾರನ್ನೇ ಆಗಲಿ ದೂರಲು ಸಾಧ್ಯವಿಲ್ಲ. ಈ ಹೊಸ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಳ್ಳಲು ತುಂಬ ಪ್ರಯತ್ನ ಪಡುತ್ತಿದ್ದಾರೆ ಎಂದು ಭುವನ ರವರು ಹೇಳಿದ್ದಾರೆ.
ನೇಮಕಾತಿಗಳಲ್ಲಿ ಹೆಚ್ಚಾಗುತ್ತಿರುವ ಈ ಆಟೋಮೇಷನ್ ಬಗ್ಗೆ ಭುವನಾ ಅವರಿಗೆ ಚಿಂತೆ ಕಾಡಿದೆ. “ನಾನು ಪೂರ್ತಿಯಾಗಿ ಎಐ ಅನ್ನು ನಂಬುವುದಿಲ್ಲ, ನಾನು ಮನುಷ್ಯರನ್ನು ಮೊದಲು ನಂಬುತ್ತೇನೆ, ಒಬ್ಬ ಅಧಿಕಾರಿಯನ್ನು ಎದುರುಬದುರಾಗಿ ನೋಡುವ ಅವಕಾಶವನ್ನು ಪಡೆದುಕೊಳ್ಳುವುದೇ ಈಗ ಕಷ್ಟಕರವಾಗಿದೆ” ಎಂದು ಭುವನ ಅವರು ಮನಸು ಬಿಚ್ಚಿ ಅವರ ಮನಸ್ಸಿನ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:Railway requirement 2026: ಎಕ್ಸಾಮ್ ಇಲ್ಲದೇ ರೇಲ್ವೇ ಜಾಬ್.ಹತ್ತನೇ ತರಗತಿ ಪಾಸ್ ಆಗಿದ್ರೆ ಸಾಕು – KPworld365 https://share.google/tP8kw5x0BXL4JhWEl
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026