DHFWS Uttara Kannada Recruitment 2026 – ವೈದ್ಯಕೀಯ ಶಿಕ್ಷಣ ಮುಗಿಸಿದವರಿಗೆ ಇದೊಂದು ಸುವರ್ಣಾವಕಾಶ, ತಜ್ಞ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ

DHFWS Uttara Kannada Recruitment 2026

ನಮ್ಮ ಕರ್ನಾಟಕ ರಾಜ್ಯದಲ್ಲಿ  ಸರ್ಕಾರಿ ಉದ್ಯೋಗ ಯಾರಿಗೆ ಬೇಡ ಹೇಳಿ, ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು  ಒಂದು ಒಳ್ಳೆಯ ಅವಕಾಶವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕಡೆಯಿಂದ  ಉತ್ತರ ಕನ್ನಡ ಜಿಲ್ಲೆಯಲ್ಲಿ ನುರಿತ ವೈದ್ಯರ ಹುದ್ದೆಗಳಿಗೆ ಅಧಿಕೃತ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ನೀವೇನಾದರೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂಬ ಕನಸು ಹೊಂದಿದ್ದೀರಾ? ಹಾಗಾದರೆ ನಿಮಗೊಂದು ಸಿಹಿಸುದ್ದಿ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ಈ ನೇಮಕಾತಿಯ ಮೂಲಕ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ, ಅರ್ಹ ಅಭ್ಯರ್ಥಿಗಳು ಕಚೇರಿಗೆ ಹೋಗಿ ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ನೀವು ಇಟ್ಟುಕೊಂಡಿದ್ದರೆ ಇದು ನಿಮಗೆ  ಭದ್ರತೆ, ಮಾನ್ಯತೆ ಮತ್ತು ಉತ್ತಮ ಸಂಬಳ ಒದಗಿಸುವ ಉತ್ತಮ ಅವಕಾಶವಾಗಿದೆ.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಂಘ (DHFWS) ಜನರಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ಸೇವೆಗಳನ್ನು ಗ್ರಾಮೀಣ  ಮತ್ತು ನಗರ ಪ್ರದೇಶಗಳಲ್ಲಿ ಸರಿಯಾಗಿ  ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಸಂಸ್ಥೆಯ ಮುಖ್ಯ  ಉದ್ದೇಶ ಜನಸಾಮಾನ್ಯರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಬಹಳ  ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವುದು ಆಗಿದೆ. ಉತ್ತರ ಕನ್ನಡ ಜಿಲ್ಲೆಯಂತಹ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಅಗತ್ಯ ಹೆಚ್ಚಾಗಿ ಇದೆ. ಅದರಲ್ಲೂ ತಜ್ಞ ವೈದ್ಯರ ನೇಮಕಾತಿ ತುಂಬ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕಟಣೆ ಮಾಡಿದ್ದು, ಆರೋಗ್ಯ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಇದು ಪ್ರಮುಖ ಹೆಜ್ಜೆ ಇದಾಗಿದೆ.

ಈ ನೇಮಕಾತಿಯ ಪ್ರಮುಖ ವೈಶಿಷ್ಟ್ಯ ಏನು ಗೊತ್ತಾ, ಉತ್ತಮವಾದ  ಸಂಬಳ  ಹಾಗೂ ಪರ್ಮನೆಂಟ್ ಉದ್ಯೋಗ. Physician ಹಾಗೂ Pediatrician ಹುದ್ದೆಗಳಿಗೆ  ಸುಮಾರು ಪ್ರತಿ ತಿಂಗಳಿಗೆ  ₹1,30,000 ವರೆಗೆ ಮಾಸಿಕ ವೇತನವನ್ನು  ನೀಡಲಾಗುತ್ತದೆ. ಇದು ಸರ್ಕಾರಿ ಕ್ಷೇತ್ರದಲ್ಲಿ ವೈದ್ಯರಿಗೆ ನೀಡಲಾಗುವ ಉತ್ತಮ ವೇತನಗಳಲ್ಲಿ  ಒಂದಾಗಿದೆ ಅಂತ ಹೇಳಬಹುದು. Emergency Medical Officer ಹುದ್ದೆಗೆ ₹60,000 ಮಾಸಿಕ ವೇತನ ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ನೀವು ಯಾವುದೇ ಅನುಭವ ಹೊಂದಿರಬೇಕು ಎನ್ನುವ ನಿಯಮ ಇಲ್ಲಿ ಇಲ್ಲ. ಇದು ಕೂಡ ಒಂದು ಧನಾತ್ಮಕ ವಿಷಯವಾಗಿದೆ. ಹೊಸದಾಗಿ MBBS ಪದವಿ ಮುಗಿಸಿದ  ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದ್ದು, ಪ್ರಾಕ್ಟಿಕಲ್ ಆಗಿ ಅನುಭವ ಪಡೆದುಕೊಳ್ಳಲು  ಸಹ  ಇದು ಸಹಕಾರಿ ಆಗಲಿದೆ. ಇದರ ಜೊತೆಗೆ, ಸರ್ಕಾರಿ ಸೇವೆ ಮಾಡುವುದರಿಂದ ಉತ್ತಮ ಅನುಭವವು ದೊರೆಯುತ್ತದೆ ಮತ್ತು  ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳನ್ನು ತೆರೆದಿಡಲುಸಹಾಯವಾಗುತ್ತದೆ.

ವಿದ್ಯಾರ್ಹತೆ ಬಗ್ಗೆ  ವಿವರವಾಗಿ ಗಮನಿಸಿದರೆ, Physician ಅಥವಾ Pediatrician ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಇದಕ್ಕೆ ಸಂಬಂಧಿತ ವಿಷಯದಲ್ಲಿ ಮಾಸ್ಟರ್ಸ್ ಪದವಿ ಅಗತ್ಯವಿರುತ್ತದೆ. ಅಂದರೆ MD ಅಥವಾ MS ಪದವಿಯನ್ನು ನೀವು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರಬೇಕು. Pediatrician ಹುದ್ದೆಗೆ ಮಕ್ಕಳ ವೈದ್ಯಕೀಯ ಶಿಕ್ಷಣದಲ್ಲಿ  ಪರಿಣತಿಯನ್ನು ಹೊಂದಿರಬೇಕು. Emergency Medical Officer ಹುದ್ದೆಗೆ MBBS ಪದವಿಯು ಕಡ್ಡಾಯ ಆಗಿರುತ್ತದೆ. ಜೊತೆಗೆ, ಕೆಲವು ಸಂದರ್ಭಗಳಲ್ಲಿ ನಿಮಗೆ ಅನುಭವವಿದ್ದರೆ ಆದ್ಯತೆಯನ್ನು ನೀಡಲಾಗುತ್ತದೆ. ವೈದ್ಯಕೀಯ ಮಂಡಳಿಯಿಂದ ನೋಂದಣಿಯನ್ನು ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಮಾತ್ರ ಇಲ್ಲಿ ಅವಕಾಶ ಇರುತ್ತದೆ.

ಇನ್ನು ವಯೋಮಿತಿ ಬಗ್ಗೆ ಹೇಳಬೇಕಾದರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು DHFWS ನಿಯಮಾನುಸಾರ ವಯಸ್ಸಿನ ಮಿತಿ ಇರುತ್ತದೆ. ಸಾಮಾನ್ಯವಾಗಿ ಸರ್ಕಾರಿ ನೇಮಕಾತಿ ಮಾಡುವಾಗ ವರ್ಗಾನುಸಾರ ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. SC/ST ಅಭ್ಯರ್ಥಿಗಳಿಗೆ ಹೆಚ್ಚು ವಯೋಮಿತಿ ಸಡಿಲಿಕೆಯು ದೊರೆಯಬಹುದು. OBC ಹಾಗೂ ಇತರ ವರ್ಗಗಳಿಗೆ ಸಹ ಸರ್ಕಾರದ ನಿಯಮಾನುಸಾರ ಸ್ವಲ್ಪ ಮಟ್ಟಿಗೆ  ಸಡಿಲಿಕೆಯನ್ನು ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ವರ್ಗಾನುಸಾರ ಅರ್ಹತೆಯನ್ನು ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ.

ಈ ಹುದ್ದೆಗೆ ಅರ್ಜಿಯ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್ ಆಗಿದೆ, ಇದು ಇಂದಿನ ಡಿಜಿಟಲ್ ಯುಗದಲ್ಲಿ ಕೊಂಚ ವಿಭಿನ್ನವಾಗಿದೆ. ಆದರೆ ಸರಿಯಾದ ವಿಧಾನವನ್ನು ನೀವು ಅನುಸರಿಸಿದರೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಮೊದಲಿಗೆ ಮಾಡಬೇಕಾದ ಕೆಲಸ ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡುವುದು, ನಂತರ  ಅದರಲ್ಲಿರುವ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಬೇಕು. ಹೆಸರು, ವಿಳಾಸ, ವಿದ್ಯಾರ್ಹತೆ, ಅನುಭವ ಮುಂತಾದ ಮಾಹಿತಿಗಳನ್ನು ತಪ್ಪಿಲ್ಲದೆ ಬರೆಯಬೇಕು. ತಪ್ಪು ಮಾಹಿತಿಯನ್ನು ನೀವು ನೀಡಿದಲ್ಲಿ ಅರ್ಜಿಯನ್ನು ತಿರಸ್ಕರಿಸಬಹುದು.

ಅರ್ಜಿಯೊಂದಿಗೆ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದು ಬಹಳ ಮುಖ್ಯವಾಗಿವೆ. ಅಭ್ಯರ್ಥಿಗಳು ತಮ್ಮ ಎಲ್ಲಾ ಶಿಕ್ಷಣ ಪ್ರಮಾಣಪತ್ರಗಳು, ವಯಸ್ಸಿನ ದಾಖಲೆ, ಗುರುತಿನ ಚೀಟಿ, ಜಾತಿ ಪ್ರಮಾಣಪತ್ರ (ಬೇಕಾದರೆ), ಅನುಭವ ಪ್ರಮಾಣಪತ್ರ ಮತ್ತು ಇತ್ತೀಚಿನ ಪಾಸ್‌ಪೋರ್ಟ್  size ನ ಫೋಟೋಗಳನ್ನು ಲಗತ್ತಿಸಬೇಕು. ಎಲ್ಲಾ ದಾಖಲೆಗಳನ್ನು ಸ್ವಯಂ ಪ್ರಮಾಣೀಕರಿಸಿ (self-attested) ಸಲ್ಲಿಸಬೇಕು. ದಾಖಲೆಗಳ ಸರಿಯಾದ ಕ್ರಮವನ್ನು ಪಾಲಿಸುವುದು ಸಹ ತುಂಬ ಮುಖ್ಯ.

ಅರ್ಜಿಯನ್ನು ಕಳುಹಿಸಿ ಕೊಡುವಾಗ ಕವರಿನಲ್ಲಿ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು. ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಕಚೇರಿ, ಕಾರವಾರ, ಉತ್ತರ ಕನ್ನಡ ವಿಳಾಸಕ್ಕೆ ಸರಿಯಾಗಿ ಕಳುಹಿಸಬೇಕು. ನಿಮ್ಮ ಅರ್ಜಿ ಸರಿಯಾದ ಕಚೇರಿಗೆ ತಲುಪಬೇಕೆಂದರೆ ವಿಳಾಸ ಹಾಕುವುದು  ಸರಿಯಾಗಿ ಇರಬೇಕು. ಸಧ್ಯಕ್ಕೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಇನ್ನೂ ಕೂಡ ಪ್ರಕಟಿಸಲಾಗಿಲ್ಲ. ಇದರಿಂದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನ್ನು ಪ್ರತಿನಿತ್ಯ ತಪ್ಪದೆ ಪರಿಶೀಲನೆ ಮಾಡುತ್ತೀರಿ. ಯಾಕೆಂದರೆ ನೀವು ಕೊನೆಯ ದಿನಾಂಕದವರೆಗೆ ಅಜಾಗರೂಕತೆಯಿಂದ ಅರ್ಜಿ ಹಾಕದೆ ಕೊನೆಯ ಕ್ಷಣದಲ್ಲಿ ಅರ್ಜಿಯನ್ನು ಹಾಕಿದರೆ ಯಾವ ಪ್ರಯೋಜನವೂ ಆಗುವುದಿಲ್ಲ.ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ

ಆಯ್ಕೆ ಪ್ರಕ್ರಿಯೆಯು ಸಾಮಾನ್ಯವಾಗಿ ತುಂಬಾ ಸರಳವಾಗಿರುತ್ತದೆ. ಮೊದಲು ನಿಮ್ಮ  ಅರ್ಜಿಗಳ ಪರಿಶೀಲನೆಯನ್ನು ನಡೆಸುತ್ತಾರೆ. ನಂತರ ಯಾವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೋ ಅವರನ್ನು ನೇರವಾಗಿ ಸಂದರ್ಶನಕ್ಕೆ ಕರೆಯುತ್ತಾರೆ. ಸಂದರ್ಶನದಲ್ಲಿ ಅಭ್ಯರ್ಥಿಗಳ ಜ್ಞಾನ ಎಷ್ಟಿದೆ, ಅನುಭವ ಎಷ್ಟಿದೆ ಮತ್ತು ನೀವು ಯಾವ ರೀತಿ ಕೆಲಸವನ್ನು ಮಾಡಬಲ್ಲಿರಿ ಎಂಬುದನ್ನು ಅವರು ನೇರ ಸಂದರ್ಶನದ ಮೂಲಕ ತಿಳಿದುಕೊಳ್ಳುತ್ತಾರೆ. ಅವರು ನಿಮ್ಮ ಚಲನವಲನಗಳನ್ನು ಕೂಡ ಗಮನಿಸುತ್ತಾರೆ. ದಾಖಲೆಗಳ ಪರಿಶೀಲನೆಯನ್ನು ನಡೆಸಿ ಅಂತಿಮವಾಗಿ ಅವರು ಆಯ್ಕೆ ಮಾಡಿ ಫಲಿತಾಂಶ ಪ್ರಕಟಿಸುತ್ತಾರೆ. ಕೆಲವೊಮ್ಮೆ ನಿಮ್ಮ ದಾಖಲೆಗಳನ್ನು ಮಾತ್ರ ಪರಿಶೀಲಿಸಿ ಕೂಡ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಬಹುದು.ಅಭ್ಯರ್ಥಿಗಳು ಎರಡಕ್ಕೂ ತಯಾರಾಗಿ ಇದ್ದರೆ ಉತ್ತಮ.

ಈ ಉದ್ಯೋಗದ ಪ್ರಮುಖ ಪ್ರಯೋಜನವೆಂದರೆ ಸಮಾಜ ಸೇವೆ ಮಾಡುವ ಅವಕಾಶ ದೊರೆಯುತ್ತದೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿನಂತೆ ವೈದ್ಯರು ಮಾಡುವ ಕೆಲಸ ದೇವರ ಕೆಲಸ. ಒಂದು ಜೀವ ಬಲಿಯಾಗುತ್ತಿದೆ ಎಂದು ತಿಳಿದಾಗ ಸಹಾಯಕ್ಕೆ ಮೊದಲು ಬರುವುದು ವೈದ್ಯರು. ವೈದ್ಯ ವೃತ್ತಿ ಮಾಡಬೇಕಾದರೆ ತಾಳ್ಮೆ ಕೂಡ ಮುಖ್ಯವಾಗಿರುತ್ತದೆ ರೋಗಿಯು ಹೇಳುವ ಪ್ರತಿ ಮಾತುಗಳನ್ನು ಆಲಿಸಿ ಅವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ ದಿನಕ್ಕೆ ಸಾವಿರಾರು ರೋಗಿಗಳು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಕುಳಿತು ಕೇಳಿಸಿಕೊಳ್ಳುವ ಶಕ್ತಿ ಇರಬೇಕು.ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ನೀಡುವುದು ಒಂದು ದೊಡ್ಡ ಸೇವೆಯಾಗಿದ್ದು, ಎಲ್ಲರೂ ಈ ಕೆಲಸ ಮಾಡಲು ಇಚ್ಚಿಸುವುದಿಲ್ಲ. ಇದು ಸಮಾಜದಲ್ಲಿ ಗೌರವವನ್ನು ತಂದೊಡುತ್ತದೆ. ಜೊತೆಗೆ, ಸರ್ಕಾರಿ ಉದ್ಯೋಗವು ಸಮಾಜದಲ್ಲಿ ಮತ್ತು ಭವಿಷ್ಯಕ್ಕೆ ಭದ್ರತೆ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ. ದೀರ್ಘ ಸಮಯ ನೀವು ಕೆಲಸದಲ್ಲಿ ಮುಂದುವರೆಯಲು ಇದು ಸಹಾಯಕವಾಗಿದೆ.

ಇದನ್ನು ಹೊರತುಪಡಿಸಿ, ಈ ನೇಮಕಾತಿಯ ಮೂಲಕ ಅಭ್ಯರ್ಥಿಗಳು ತಮ್ಮ ಕೌಶಲ್ಯಗಳನ್ನು ಕೂಡ ಅಭಿವೃದ್ಧಿಪಡಿಸಿಕೊಳ್ಳಬಹುದು. ಬೇರೆ ಬೇರೆ ರೀತಿಯ ರೋಗಿಗಳನ್ನು ಚಿಕಿತ್ಸೆ ನೀಡುವ ಮೂಲಕ ಅನುಭವ ಹೆಚ್ಚುತ್ತದೆ. ಅದೇ ರೀತಿ ನಿಮಗೆ  ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಬೆಳೆಯುತ್ತದೆ. ಮುಂದೆ ಬೇರೆ ಕೆಲಸಕ್ಕೆ ಹೋದರೂ ಇಲ್ಲಿ ಕಲಿತ ಅನುಭವ ಸಹಾಯಕ್ಕೆ ಬರುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ ಕೂಡ ಹೆಚ್ಚುತ್ತದೆ ಮುಂದೆ ಏನೇ ತುರ್ತು ಪರಿಸ್ಥಿತಿ ಬಂದರೂ ಧೈರ್ಯದಿಂದ ಎದುರಿಸಲು ಈ ಕೆಲಸ ಸಹಾಯ ಆಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇವೆಲ್ಲವೂ ಭವಿಷ್ಯದಲ್ಲಿ ದೊಡ್ಡ ಅವಕಾಶಗಳಿಗೆ ದಾರಿಯನ್ನು ಮಾಡಿಕೊಡುತ್ತವೆ.

ಇದು ಹೆಚ್ಚು ಉಪಯೋಗ ಆಗುವುದು ಉತ್ತರ ಕನ್ನಡ ಜಿಲ್ಲೆಯವರಿಗೆ,  DHFWS ಉತ್ತರ ಕನ್ನಡ ನೇಮಕಾತಿ 2026 ವೈದ್ಯಕೀಯ ಕ್ಷೇತ್ರದಲ್ಲಿ ನನಗೆ ಉದ್ಯೋಗ ಪಡೆಯಲೇಬೇಕು ಎನ್ನುವ ಕನಸು ಹೊಂದಿರುವವರಿಗೆ ಇದು ಹೇಳಿ ಮಾಡಿಸಿದ ಗುಡ್ಡೆ. ವೇತನ, ಸ್ಥಿರ ಉದ್ಯೋಗ, ಸಮಾಜ ಸೇವೆ  ಅವಕಾಶ ಎಲ್ಲವೂ ಒಂದೇ ಹುದ್ದೆಯಲ್ಲಿ ಸಿಗುತ್ತದೆ ಅಂದರೆ ಯಾರಿಗೆ ತಾನೇ ಬೇಡ, ಅಭ್ಯರ್ಥಿಗಳು  ವೃತ್ತಿಜೀವನದಲ್ಲಿ ಬೆಳವಣಿಗೆಯ ಅವಕಾಶವನ್ನು ಈ ನೇಮಕಾತಿ ತಂದು ಕೊಡುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಂಡರೆ ಮತ್ತೇ ಸಿಗುವುದು ಕಷ್ಟಕರ. ಸರಿಯಾಗಿ ಸರಿಯಾದ ಸಮಯಕ್ಕೆ  ಅರ್ಜಿಯನ್ನು ಸಲ್ಲಿಸಿ ತಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು ಶ್ರಮಿಸಿ ನೋಡಿ.ಇದರಿಂದ ನಿಮ್ಮ ಸ್ನೇಹಿತರಿಗೂ ಸಹಾಯ ಆಗಬಹುದು ಯಾರಾದರೂ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದರೆ ಅಥವಾ ಯಾರಾದರೂ ವೈದ್ಯಕೀಯ ಪದವಿ ಮುಗಿಸಿ ಸುಮ್ಮನೆ ಮನೆಯಲ್ಲಿ ಕುಳಿತಿದ್ದರೆ ಅಥವಾ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದರೆ ಅಂಥವರಿಗೆ ಇದು ಒಳ್ಳೆಯ ಅವಕಾಶ.

Government Advocate Job: ವಕೀಲರಿಗೆ ರಾಜ್ಯಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ (AGA)ನೇಮಕಾತಿ!