Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ

Breaking Iran Conflict: ಸಾವಿನ ಸಂಖ್ಯೆ 34

ಯುದ್ಧದ ಪರಿಸ್ಥಿತಿಯು ಗಂಭೀರ ಹಂತಕ್ಕೆ ತಲುಪಿದೆ

ಇರಾನ್‌ನಲ್ಲಿ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಈ ಯುದ್ಧವು ಆರನೇ ವಾರದತ್ತ ಸಾಗುತ್ತಿದೆ, ಪರಿಸ್ಥಿತಿ ದಿನದಿಂದ ದಿನಕ್ಕೆ  ಗಂಭೀರವಾಗಿ ಹೋಗುತ್ತಿದೆ.ತೊಂದರೆಗಳು  ಹೆಚ್ಚುತ್ತಾ ಹೋಗುತ್ತಿರುವುದರಿಂದ ಸೈನಿಕ ಕ್ರಮಗಳು, ಹೊಸ ಬೆದರಿಕೆಗಳು ಹಾಗೂ  ತಾಂತ್ರಿಕ ಪ್ರಯತ್ನಗಳು ಒಂದೇ ಸಮಯದಲ್ಲಿ ನಡೆಯುತ್ತಿದೆ. ಮುಂದಿನ ಬೆಳವಣಿಗೆ ಬಗ್ಗೆ ಏನು ಹೇಳಲಾಗದ ಪರಿಸ್ಥಿತಿ ಹೆಚ್ಚಾಗಿದ್ದು, ಪ್ರದೇಶದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

ಗಡುವು ಮತ್ತು ಕಠಿಣ ಎಚ್ಚರಿಕೆ ನೀಡಿದ ಟ್ರಂಪ್

ಅಮೆರಿಕಾದ ಅಧ್ಯಕ್ಷ ಆಗಿರುವ  ಡೊನಾಲ್ಡ್ ಟ್ರಂಪ್, ಇರಾನ್ ಹೋರ್ಮುಜ್ ಸಮುದ್ರ ಮಾರ್ಗವನ್ನು ತೆರೆಯಲು ಹೊಸದಾದ  ಗಡುವು ನೀಡಿರುವುದು ಕೂಡ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವಂತೆ ಮಾಡಿದೆ. ಮಂಗಳವಾರ ರಾತ್ರಿ 8 ಗಂಟೆಯವರೆಗೆ ಗಡುವನ್ನು ನಿಗದಿಪಡಿಸಿ, ಅಲ್ಲಿಯತನಕ  ಮಾರ್ಗ ತೆರೆಯದೆ ಇದ್ದರೆ ಇರಾನ್‌ನ ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ನಾವು  ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಇರಾನ್ ಅಧಿಕಾರಿಗಳು ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ದೊರೆಯುವವರೆಗೆ ಹೋರ್ಮುಜ್ ಮಾರ್ಗವನ್ನು ನಾವು ತೆರೆಯುವುದಿಲ್ಲ ಎಂದು ಸ್ಪಷ್ಟತೆಯನ್ನು ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತಿದೆ ಮತ್ತು ಅಪಾಯಗಳು ಏನೇನು?

ಯುದ್ಧದಿಂದಾಗಿ ಸೈನಿಕ ಚಟುವಟಿಕೆಗಳು ಮತ್ತಷ್ಟು ತೀವ್ರಗೊಂಡಿವೆ. ಇರಾನ್ ನ ಮೇಲೆ ಹಾರುತ್ತಿದ್ದ ಅಮೆರಿಕಾದ ಯುದ್ಧ ವಿಮಾನವನ್ನು ಕೆಡವಿದ ಬಳಿಕ, ಅದರ ಪೈಲಟ್ ಒಂದು ದಿನಕ್ಕಿಂತಲೂ ಹೆಚ್ಚು ಕಾಲ ಬಂಧನದಲ್ಲಿದ್ದು  ತಪ್ಪಿಸಿಕೊಂಡು ಕಠಿಣ ಪರಿಸ್ಥಿತಿಯಲ್ಲಿ ಅಡಗಿ ಅದೃಷ್ಟವಶಾತ್ ಜೀವಂತವಾಗಿ  ಉಳಿದಿದ್ದಾನೆ. ನಂತರ  ರಕ್ಷಣಾ ಕಾರ್ಯಾಚರಣೆಯ ಮೂಲಕ ಅವನನ್ನು  ಹೊರತೆಗೆಯುವ ಮೂಲಕ ರಕ್ಷಣೆ ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಮೆರಿಕಾ ಸೈನಿಕರಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ. ಈ ವೇಳೆ ಹೋರ್ಮುಜ್ ಸಮೀಪ A-10 ವಿಮಾನವೂ ಕೂಡಾ ಅಪಘಾತಕ್ಕೆ ಒಳಗಾಗಿದ್ದು, ಅದರ ಪೈಲೆಟ್ ಅನ್ನು ಕೂಡ ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಯುದ್ಧದ ನಡುವೆ ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಕೆ

ಈ ಎಲ್ಲಾ ಬೆಳವಣಿಗೆಗಳ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು  ನಿರಂತರವಾಗಿ ಮುಂದುವರೆಯುತ್ತಿದೆ. ಒಮಾನ್ ದೇಶ ಇರಾನ್ ದೇಶದ  ಜೊತೆಗೆ  ಹೋರ್ಮುಜ್ ಮಾರ್ಗವನ್ನು ಕೂಡಾ ಮತ್ತೆ ತೆರೆಯುವ ಬಗ್ಗೆ ಚರ್ಚೆಯನ್ನು ನಡೆಸಿದ್ದು, ಪಾಕಿಸ್ತಾನ ಮತ್ತು ಈಜಿಪ್ಟ್ ದೇಶಗಳು ಹಾಗೂ ಅಮೆರಿಕಾ ಮತ್ತು ಇರಾನ್ ದೇಶಗಳ  ನಡುವೆ ಸಂವಹನವನ್ನು ಉಳಿಸಲು ಪ್ರಯತ್ನವನ್ನು ಮಾಡುತ್ತಿವೆ. ಇದು ನಡೆಯುತ್ತಿರುವ  ಯುದ್ಧವನ್ನು ಸ್ವಲ್ಪ ಪ್ರಮಾಣದಲ್ಲಿ ಆದರೂ ಕಡಿಮೆ ಮಾಡಲು ಕೈಗೊಳ್ಳಲಾಗುತ್ತಿರುವ ಪ್ರಮುಖ ಪ್ರಯತ್ನಗಳು ಅಥವಾ ಕ್ರಮಗಳಾಗಿವೆ.

ಯುದ್ಧವು ವ್ಯಾಪಕವಾಗಿ ವಿಸ್ತರಿಸುತ್ತಿದೆ

ಇನ್ನೊಂದೆಡೆ, ಯುದ್ಧವು ವ್ಯಾಪಕವಾಗಿ ವಿಸ್ತರಿಸುವಂತಹ  ಲಕ್ಷಣಗಳು ಕೂಡಾ ಕಾಣಿಸುತ್ತಿವೆ. ಇರಾನ್, ಇಸ್ರೇಲ್ ಹಾಗೂ ಅದರ ಮೈತ್ರಿ ರಾಷ್ಟ್ರಗಳ ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು  ಹೆಚ್ಚಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಪ್ರದೇಶದ ಹಲವು ಕಡೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು  ಮಾಡಿರುವ ವರದಿಗಳು ಬರುತ್ತಿವೆ. ಇದರಿಂದಾಗಿ ಸಾಮಾನ್ಯ ಜನರಲ್ಲಿ ಆತಂಕ ಹೆಚ್ಚಾಗುವ ಪರಿಸ್ಥಿತಿ ಬಂದು ಒದಗಿದೆ.

 ಇಂಧನ ಮಾರುಕಟ್ಟೆಗೆ ಜಾಗತಿಕ ಪರಿಣಾಮ

ಈ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಗಂಭೀರ ಪರಿಣಾಮವನ್ನು ಬೀರುತ್ತಿದೆ. ತೈಲ ಉತ್ಪಾದನೆ ಮಾಡುವ ರಾಷ್ಟ್ರಗಳು, ಮೂಲಸೌಕರ್ಯಗಳಿಗೆ ಹಾನಿ ಉಂಟಾದರೆ ಅದನ್ನು ಅವರಿಗೆ ಮರುಸ್ಥಾಪಿಸಲು ಕೂಡ ಬಹಳ ಸಮಯ ಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಹೋರ್ಮುಜ್ ಸಮುದ್ರ ಮಾರ್ಗದ ಅಡಚಣೆಯು ಜಾಗತಿಕ ತೈಲ ಸರಬರಾಜಿಗೆ ದೊಡ್ಡದಾದ ಹೊಡೆತವನ್ನು ಕೊಡುತ್ತಿರುವುದರಿಂದ, ವಿಶ್ವದಾದ್ಯಂತ ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಹೆಚ್ಚು ಇದೆ.

ಪರಿಸ್ಥಿತಿ ಒಟ್ಟಾರೆಯಾಗಿ ಹೇಗಿದೆ?

ಒಟ್ಟಾರೆ ಹೇಳುವುದಾದರೆ ಅಮೆರಿಕಾ ಮತ್ತು ಇರಾನ್ ಯುದ್ಧವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದರಿಂದ ಪ್ರದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಪರಿಣಾಮಗಳು ಅಧಿಕವಾಗಿ  ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಸಂಘರ್ಷವು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದರ ಮೇಲೆ  ಜಾಗತಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಅವಲಂಬಿಸಿದೆ.

ಅಮೆರಿಕಾ ಮತ್ತು ಇರಾನ್ ಯುದ್ಧದ ಲೈವ್  ಅಪ್ಡೇಟ್ಸ್ ಇಲ್ಲಿದೆ

ಹೋರ್ಮುಜ್ ಸಮುದ್ರ ಮಾರ್ಗದ ಬಗ್ಗೆ ತಾತ್ಕಾಲಿಕ ಯುದ್ಧ ವಿರಾಮ ಪ್ರಸ್ತಾವನೆಗೆ ಇರಾನ್ ನಿರಾಕರಣೆ ಮಾಡಿದೆ. ಅಮೆರಿಕಾಕ್ಕೆ ಕಠಿಣ ಎಚ್ಚರಿಕೆ. ಇರಾನ್, ಹೋರ್ಮುಜ್ ಸಮುದ್ರದ ಮಾರ್ಗವನ್ನು (Strait of Hormuz) ಪುನಃ ತೆರೆಯುವ ಬದಲು ತಾತ್ಕಾಲಿಕ ಯುದ್ಧ ವಿರಾಮವನ್ನು ಒಪ್ಪಿಕೊಳ್ಳುವ ಪ್ರಸ್ತಾವನೆಯನ್ನು  ತಿರಸ್ಕರಿಸಿದೆ ಎಂದು Wall Street Journal ರವರ ವರದಿಯು ತಿಳಿಸಿದೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಆಗಿರುವ   Esmail Baghaei ಅವರು, ನಮ್ಮ ದೇಶದ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ಇರಾನ್ ಕೂಡ ಪ್ರತಿದಾಳಿ ನಡೆಸಲಿದೆ ಎಂದು ಅವರು ಎಚ್ಚರಿಕೆಯನ್ನು ನೀಡಿದರು.

ಇಂತಹ ಕ್ರಮವನ್ನು ಅವರು “ಯುದ್ಧದ ವಿಸ್ತರಣೆ” ಎಂಬುದಾಗಿ ಅಲ್ಲ, “ಸ್ವರಕ್ಷಣೆಯ ಕ್ರಮ” ಎಂದು ವಿವರಿಸಿದ್ದಾರೆ. ಇದೇ ವೇಳೆ, ಈ ಸಂಘರ್ಷವನ್ನು ಅಮೆರಿಕದ ಜನರ ವಿರುದ್ಧದ ಯುದ್ಧವೆಂದು ಪರಿಗಣಿಸಬಾರದು ಎಂದು ಕೂಡ ಅವರು  ಹೇಳಿದ್ದಾರೆ.

ಈ ನಿರಾಕರಣೆ, ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಂದಿದೆ. ಹೋರ್ಮುಜ್ ಸಮುದ್ರ ಮಾರ್ಗವು ಈಗಿನ ಸಂಘರ್ಷದಲ್ಲಿ ಪ್ರಮುಖ ತೀವ್ರತೆಯು ಕೇಂದ್ರವಾಗಿ ಉಳಿಯುವಂತೆ ಮಾಡಿದೆ.

ಇರಾನ್ ಕ್ಷಿಪಣಿಗಳ ಮೇಲೆ ಬೆದರಿಕೆ

ಇದರ ನಡುವೆ UAE ವಾಯು ರಕ್ಷಣಾ ವ್ಯವಸ್ಥೆಯು ಸಕ್ರಿಯಗೊಂಡಿದ್ದು, ನಿವಾಸಿಗಳಿಗೆ ಸುರಕ್ಷಿತವಾಗಿರಲು ಸೂಚನೆಯನ್ನು ನೀಡಿದೆ.

ಗಲ್ಪ್ ದೇಶಗಳ ಮೇಲೆ ದಾಳಿಗಳು ಮುಂದುವರಿಯುತ್ತಿರುವ ಕಾರಣ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ತಮಗೆ ಬಂದಿರುವ  ಕ್ಷಿಪಣಿ ಬೆದರಿಕೆಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದೆ. ನಿವಾಸಿಗಳಿಗೆ  ಅಧಿಕಾರಿಗಳು ಸುರಕ್ಷಿತ ಸ್ಥಳಗಳಲ್ಲಿ ವಾಸಿಸಲು ಮತ್ತು ಅಧಿಕೃತ ಮಾಹಿತಿಗಳಿಗಾಗಿ ಸರ್ಕಾರದ ಅಧಿಕೃತವಾದ ಚಾನೆಲ್‌ಗಳನ್ನು ಅನುಸರಿಸಲು ಸಲಹೆಯನ್ನು ಕೊಟ್ಟಿದ್ದಾರೆ.

“ಏಪ್ರಿಲ್ 1ರಿಂದ ನಗದು ಟೋಲ್ ಬಂದ್: FASTag ಕಡ್ಡಾಯ, ದಂಡ ಎಷ್ಟು? ಸಂಪೂರ್ಣ ಮಾಹಿತಿ” 

ಬೆಂಜಮಿನ್ ನೆತನ್ಯಾಹು, ಇರಾನ್‌ನಲ್ಲಿ ಪತನವಾದ F-15 ವಿಮಾನ, ಪೈಲೆಟ್ ರಕ್ಷಣೆ

ಈ ವಿಮಾನದ  ಪೈಲಟ್‌ನ್ನು ಸುರಕ್ಷಿತವಾಗಿ ರಕ್ಷಿಸಿದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಅವರ  ಹಳೆಯ ಟ್ವಿಟ್ಟರ್ ಅಕೌಂಟ್ನಿಂದ ಮಾಡಿದ ಪೋಸ್ಟ್‌ನಲ್ಲಿ, ಈ ಕಾರ್ಯಾಚರಣೆಯನ್ನು “ಧೈರ್ಯಶಾಲಿ ನಿರ್ಧಾರದಿಂದ” ಮತ್ತು “ಪರಿಪೂರ್ಣವಾಗಿ ಯಶಸ್ವಿಯಾಗಿ ನಡೆಸಿದ ಮಿಷನ್” ಎಂದು ಪ್ರಶಂಸಿಸಿದ್ದಾರೆ.

ನೆತನ್ಯಾಹು, ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಇಸ್ರೇಲ್‌ನ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿದೆ, ಎರಡು ದೇಶಗಳ ನಡುವಿನ ಸಹಕಾರವು ಅಪೂರ್ವ (unprecedented) ಮಟ್ಟದಲ್ಲಿ ಇದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

 ಅಮೆರಿಕದ ಕಚ್ಚಾ ತೈಲದ ಬೆಲೆಗಳು ದ್ವಿಗುಣವಾಗಿವೆ

2026ರ  ಆರಂಭದಿಂದಲೇ ತೈಲಗಳ ಬೆಲೆ ಹೆಚ್ಚಾಗಿದೆ. ಹೋರ್ಮುಜ್ ಸಮುದ್ರ ಸಮುದ್ರ ಮಾರ್ಗ ಮುಚ್ಚುವಿಕೆಯ ಕಾರಣದಿಂದಾಗಿ  ಜಾಗತಿಕ ಮಾರುಕಟ್ಟೆಯಲ್ಲಿ ತೈಲಗಳ ಸರಬರಾಜು ವ್ಯತ್ಯಯ ಆಗಿರುವುದರಿಂದ  ಭಾರೀ ಏರಿಕೆ ಕಂಡುಬಂದಿದೆ. ಅಂದಾಜು  $57ರಿಂದ $115ಕ್ಕೆ ವೇಗವಾಗಿ ಬೆಳೆಗಳು ಏರಿಕೆಯಾಗಿದೆ. ಹೋರ್ಮುಜ್ ಸಮುದ್ರ ಮಾರ್ಗ ಮುಚ್ಚುವಿಕೆ ಹಾಗೂ ನಡೆಯುತ್ತಿರುವಂತಹ ಸಂಘರ್ಷದಿಂದ ಜಾಗತಿಕವಾಗಿ  ಇಂಧನ ಮಾರುಕಟ್ಟೆಯಲ್ಲಿ ಸರಬರಾಜು ವ್ಯತ್ಯಯವು ಉಂಟಾದ ಪರಿಣಾಮವಾಗಿ ಈ ಬೆಲೆ  ಏರಿಕೆಯು ಕಂಡುಬಂದಿದೆ.

ಶಿರಾಝ್ ಮತ್ತು ಕ್ವೋಮ್ ನಗರಗಳಲ್ಲಿ ಭಾರೀ ಸ್ಪೋಟ ಜನರಲ್ಲಿ ಆತಂಕ ಭದ್ರತೆ, ಹೆಚ್ಚಳ 

ಸ್ಫೋಟಗಳ  ವರದಿಗಳು ಬಂದಿದ್ದು,  ಹಿಂದಿನ ಕಾರಣ ಮತ್ತು ಹಾನಿಯ ಪ್ರಮಾಣ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ಇತ್ತೀಚಿನ ದಿನಗಳಲ್ಲಿ ಇರಾನ್‌ನ ಹಲವು ನಗರಗಳಲ್ಲಿ ಇಂತಹ ಸ್ಫೋಟಗಳು ಸಂಭವಿಸಿರುವುದಾಗಿ ವರದಿಗಳ ಪ್ರಕಾರ ತಿಳಿದು ಬಂದಿದೆ. ದಾಳಿಗಳು ತೀವ್ರವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ  ಇಂತಹ ಘಟನೆಗಳು ಸಂಭವಿಸುತ್ತಿವೆ.

ಹೈಫಾ ನಗರದ ವಸತಿ ಕಟ್ಟಡ ಸ್ಫೋಟ

ಇರಾನ್ ನ ಕ್ಷಿಪಣಿ ದಾಳಿಯಿಂದ ಹೈಫಾ ನಗರದ ವಸತಿ ಕಟ್ಟಡವು ಸ್ಫೋಟಗೊಂಡಿದೆ ; ವರದಿಯ ಪ್ರಕಾರ ಅವಶೇಷಗಳ ಅಡಿಯಲ್ಲಿ ಮೂವರು ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.ಇಸ್ರೇಲ್‌ನ ಉತ್ತರ ಭಾಗದಲ್ಲಿ ಕಂಡುಬರುವ ಹೈಫಾ ನಗರದಲ್ಲಿರುವ ಒಂದು ವಸತಿ ಕಟ್ಟಡದ ಮೇಲೆ ಇರಾನ್ ತನ್ನ ಕ್ಷಿಪಣಿ ದಾಳಿ ನಡೆಸಿದೆ, ಬಳಿಕ ಅವಶೇಷಗಳಡಿಯಲ್ಲಿ ಸಿಲುಕಿರುವ ಮೂರು ಜನ ಕಾಣೆಯಾಗಿರುವವರಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ಹುಡುಕಾಟ ನಡೆಸಲಾಗುತ್ತಿದೆ.ಏಳು ಮಹಡಿ  ಇರುವ ಈ ಕಟ್ಟಡಕ್ಕೆ ನೇರವಾಗಿ ತಗುಲಿ, ಕಟ್ಟಡದ ಹಲವು ಭಾಗಗಳು ಪುಡಿ ಪುಡಿಯಾಗಿ ಬಹಳ ಹಾನಿಯನ್ನು ಮಾಡಿದೆ.

ತುರ್ತು ನಿರ್ವಹಣಾ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅವಶೇಷಗಳ ನಡುವೆ ಸಿಲುಕಿರುವವರನ್ನು ಪತ್ತೆಹಚ್ಚಲು ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಘಟನೆಯಲ್ಲಿ  ಕನಿಷ್ಠ ನಾಲ್ಕು ಜನರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ನೆರವನ್ನು  ನೀಡಲಾಗಿದೆ.ಪಶ್ಚಿಮ ಏಷ್ಯಾದ ಆತಂಕದ  ನಡುವೆ ಗಲ್ಪ್ ಪ್ರದೇಶದಲ್ಲಿ ‘ಹೊಸ ವ್ಯವಸ್ಥೆ’ ಸೂಚಿಸುವ ಬಗ್ಗೆ ಇರಾನ್ ಸೂಚನೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಗಲ್ಪ್ ಪ್ರದೇಶದಲ್ಲಿ “ಹೊಸದಾದ ವ್ಯವಸ್ಥೆಯನ್ನು” ರಚಿಸಲು ತಯಾರಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇರಾನ್ ನ  ಅನುಮತಿಯ ಮೇರೆಗೆ ಕೇವಲ 24 ಗಂಟೆಗಳಲ್ಲಿ  15 ಹಡಗುಗಳು ಹೋರ್ಮುಜ್ಅನ್ನು ದಾಟಿದವು; ಸಾಗಾಟದಲ್ಲಿ 90% ಕುಸಿತ ಕಂಡು ಬಂದಿದೆ.

ಹೋರ್ಮುಜ್ ಸಮುದ್ರ ಮಾರ್ಗವು ಮುಚ್ಚಿಹೋಗಿರುವ ಕಾರಣದಿಂದಾಗಿ, ಇತ್ತೀಚಿನ ಹಡಗುಗಳ ಚಲನವಲನದ ಮಾಹಿತಿಯ ಪ್ರಕಾರ ಕಳೆದಂತಹ 24 ಗಂಟೆಗಳಲ್ಲಿ ಇರಾನ್ ಅನುಮತಿಯನ್ನು ಪಡೆದ ನಂತರ  15 ಹಡಗುಗಳು ಮಾತ್ರ  ಹೋರ್ಮುಜ್ ಮಾರ್ಗವನ್ನು ದಾಟಿವೆ ಎಂದು ತಿಳಿಸಿದ್ದಾರೆ.

ಈ ಹಂತದ ಸಾಗಾಟವು, ಅಮೆರಿಕಾ ಹಾಗೂ ಇಸ್ರೇಲ್  ದಾಳಿಗಳು ಆರಂಭವಾದ ಸಮಯದ ಜೊತೆಗೆ ಹೋಲಿಸಿದರೆ ಸುಮಾರು 90% ಇಳಿಕೆ ಕಂಡು ಬರುತ್ತದೆ ಎಂದು ಇರಾನ್‌ನ IRNA ಸುದ್ದಿ ಸಂಸ್ಥೆಯು ವರದಿಯನ್ನು ಮಾಡಿದೆ.

ಪ್ರಮುಖವಾಗಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು  ತಡೆಗಟ್ಟಲು UAE, ಕುವೈತ್ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯವಾಗಿದೆ.ಪ್ರದೇಶದಲ್ಲಿ ಆತಂಕ  ಹೆಚ್ಚುತ್ತಿರುವ ಕಾರಣದಿಂದ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಕುವೈತ್ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ್ದೇವೆ ಎಂದು ತಿಳಿಸಿವೆ. ಈ ವ್ಯವಸ್ಥೆಗಳು ಒಳಬರುವ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಗಟ್ಟಲು ಕಾರ್ಯನಿರ್ವಹಿಸುತ್ತಿದೆ.

ಇದನ್ನು ಓದಿ:ಭಾರತದ ಆರ್ಥಿಕತೆ 2026ರಲ್ಲಿ ಹೇಗಿರುತ್ತದೆ? ಸಾಮಾನ್ಯ ಜನರ ಜೀವನ, ಉದ್ಯೋಗ, ಬೆಲೆ ಏರಿಕೆ, ಮತ್ತು ಭವಿಷ್ಯದ ಆರ್ಥಿಕ ದಿಕ್ಕಿನ ಆಳವಾದ ವಿಶ್ಲೇಷಣೆ 

Prashree Gowda