Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ

Kadaba govt PU college success story ಪೂರ್ತಿ ಮಾಹಿತಿ ಇಲ್ಲಿದೆ

ಸರ್ಕಾರಿ ಕಾಲೇಜು ಅಂದರೆ ಸರ್ಕಾರದ ನಿಯಂತ್ರಣ ಹಾಗೂ ನಿರ್ವಹಣೆಯಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳು.ಇವುಗಳನ್ನು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ನಡೆಸುತ್ತದೆ. ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುವುದು ಸರ್ಕಾರದ ಉದ್ದೇಶ.ವಿಶೇಷವಾಗಿ ಗ್ರಾಮೀಣ ಅಥವಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಸರ್ಕಾರಿ ಕಾಲೇಜುಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ.ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆಯು ಕಡಿಮೆಯಾಗುತ್ತಾ ಹೋಗುತ್ತಿದೆ,ಇಂತಹ ಸಮಯದಲ್ಲಿ ಸರ್ಕಾರಿ ಕಾಲೇಜಿಗೆ ಸೌಲಭ್ಯಗಳು ಕೂಡ ಕಡಿಮೆ ಆಗುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಕೂಡ ಸರ್ಕಾರಿ ಶಾಲೆಯಲ್ಲಿ ಪಿಯುಸಿ ಫಲಿತಾಂಶ ಉತ್ತಮವಾಗಿ ಬಂದಿರುವುದು ವಿಶೇಷ.ಈ ಸರ್ಕಾರಿ ಕಾಲೇಜ್ ಎಲ್ಲಿದೆ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದೆ.ಈ ಕಾಲೇಜು ಇಂದು ಶಿಕ್ಷಣ ಕ್ಷೇತ್ರದಲ್ಲಿ ಒಂದು ಅಪರೂಪದ ಸಾಧನೆಯ ಮೂಲಕ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದೆ.ಸಾಮಾನ್ಯವಾಗಿ ನಾವು ಉತ್ತಮ ಫಲಿತಾಂಶಗಳ ಬಗ್ಗೆ ಮಾತನಾಡುವಾಗ ಖಾಸಗಿ ಶಿಕ್ಷಣ ಸಂಸ್ಥೆಗಳು, ಆಧುನಿಕ ಸೌಲಭ್ಯಗಳು ಮತ್ತು  ದುಬಾರಿ ತರಬೇತಿ ವ್ಯವಸ್ಥೆಗಳು ನಮ್ಮ ಮನಸ್ಸಿಗೆ ಬರುತ್ತವೆ. ಆದರೆ ಕಡಬದ ಈ ಸರ್ಕಾರಿ ಕಾಲೇಜು ಈ ಎಲ್ಲ ತರಹದ ತಪ್ಪು ಕಲ್ಪನೆಗಳಿಗೆ ಒಂದು ಪೂರ್ಣ ವಿರಾಮವನ್ನು ಇಡುವಂತೆ ಮಾಡಿದೆ. ಸೀಮಿತ ಸೌಲಭ್ಯಗಳ ನಡುವೆಯೂ ಶ್ರೇಷ್ಠ ಸಾಧನೆಯನ್ನು ಮಾಡಬಹುದು ಎಂದು ಈ ಕಾಲೇಜು ತೋರಿಸಿಕೊಟ್ಟಿದೆ.

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 99.39 ಫಲಿತಾಂಶ ಸಾಧಿಸಿರುವುದು ಒಂದು ಅಂಕಿ ಅಲ್ಲ, ಅದು ಪರಿಶ್ರಮ, ಶ್ರದ್ಧೆ, ಮತ್ತು ಸಂಕಲ್ಪದ ಸಾಧನೆ ಆಗಿದೆ. ಈ ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಲ್ಲಿ ಬಹುಪಾಲು ಮಕ್ಕಳು ಬಡಕುಟುಂಬ ಮತ್ತು ಗ್ರಾಮೀಣ ಕುಟುಂಬದಿಂದ ಬಂದ ವಿದ್ಯಾರ್ಥಿಗಳಾಗಿರುತ್ತಾರೆ.ಈ ವಿದ್ಯಾರ್ಥಿಗಳ ಜೀವನದಲ್ಲಿ ಓದು ಒಂದೇ ಅವರಿಗೆ ಸವಾಲಾಗಿರುವುದಿಲ್ಲ ಬದಲಾಗಿ ಅವರಿಗೆ ಮನೆಯಲ್ಲಿ ಬೇರೆ ಸಮಸ್ಯೆಗಳು ಸವಾಲಾಗಿ ಕಾಡುತ್ತಿರುತ್ತವೆ ಆ ಸವಾಲುಗಳನ್ನು ಎದುರಿಸಿಕೊಂಡು ಓದಿ ಉತ್ತಮ ಅಂಕಗಳನ್ನು ಗಳಿಸುವುದು ಸುಲಭದ ಮಾತಲ್ಲ.ಕೆಲವು ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರಿಗೆ ಮನೆಕೆಲಸದಲ್ಲಿ ಸಹಾಯ ಮಾಡಿ ಕಾಲೇಜ್ ಗೆ ಬರುತ್ತಾರೆ, ಇನ್ನೂ ಕೆಲವರು ಕೃಷಿಯಲ್ಲಿ ಸಹಾಯ ಮಾಡಿ ಕಷ್ಟ ಪಟ್ಟು ಕಾಲೇಜ್ ಗೆ ಬಂದು ಓದುತ್ತಾರೆ.ಸಂಜೆ ಮನೆಗೆ ಹೋಗಿ ಮತ್ತೆ ಕೆಲಸಗಳನ್ನು ಮುಗಿಸಿ ಮತ್ತೆ ಓದಿನಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇಂತಹ ಜೀವನ ಶೈಲಿಯ ನಡುವೆಯೂ ಅವರಿಗೆ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಗಳಿಸಿ ಉತ್ತಮ ಕೆಲಸವನ್ನು ಗಿಟ್ಟಿಸಿಕೊಳ್ಳುವ ಗುರಿಯನ್ನು ಹೊಂದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಓದನ್ನು ಮುಂದುವರೆಸಿಕೊಂಡು ಹೋಗುವುದೇ ಅವರ ಜೀವನದ ದೊಡ್ಡ ಸವಾಲು ಆಗಿರುತ್ತದೆ.ಇದನ್ನೆಲ್ಲ ಮೀರಿ ಉತ್ತಮ ಫಲಿತಾಂಶವನ್ನು ನೀಡಿರುವುದು ಗಮನಾರ್ಹವಾಗಿದೆ. ಸೌಲಭ್ಯಗಳ ಕೊರತೆ, ಆರ್ಥಿಕ ಪರಿಸ್ಥಿತಿ, ಸಾರಿಗೆ ಸೌಲಭ್ಯದ ಕೊರತೆ, ಎಲ್ಲ ಅಡಚಣೆಗಳ ಮಧ್ಯೆಯೂ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಬಿಟ್ಟು ಕೊಡದೆ ಮುಂದೆ ಸಾಗುತ್ತಿದ್ದಾರೆ ನಮ್ಮ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು.

ಈ ಕಾಲೇಜಿನಲ್ಲಿ ಆಧುನಿಕ ಲ್ಯಾಬ್ ಸೌಲಭ್ಯಗಳು ಇಲ್ಲ, ಡಿಜಿಟಲ್ ತರಗತಿಗಳು ಅಥವಾ ಹೆಚ್ಚಿನ ಸಂಪನ್ಮೂಲಗಳು ಇರದೇ ಇದ್ದರೂ ಕೂಡ ವಿದ್ಯಾರ್ಥಿಗಳ ಸಂಕಲ್ಪ ಮತ್ತು ಶಿಕ್ಷಕರ ಬದ್ಧತೆ ಈ ಕೊರತೆಯನ್ನು ಇಲ್ಲವಾಗಿಸುವಂತೆ ಮಾಡಿದೆ.ಅವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಕಾರಣವಾಗಿ ಇಟ್ಟುಕೊಳ್ಳದೆ ಅದನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸಿನತ್ತ ಸಾಗಿದ್ದಾರೆ. ಈ ಮನೋಭಾವನೆ ಅವರನ್ನು ಇತರರಿಂದ ವಿಭಿನ್ನಗೊಳಿಸಿದೆ. ಮತ್ತು ಈ ಸಾಧನೆಗೆ ಕಾರಣ ಆಗಿದೆ.

ಫಲಿತಾಂಶದ ಹಿಂದಿನ ಪರಿಶ್ರಮ ಮತ್ತು ಶಿಕ್ಷಣದ ಗುಣಮಟ್ಟ 

ಒಟ್ಟು ಈ ಕಾಲೇಜಿನಲ್ಲಿ 109 ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು, ಇದರಲ್ಲಿ 108 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಮತ್ತು ಶೇಕಡ 99.39 ಫಲಿತಾಂಶವನ್ನು ಪಡೆದಿರುವುದು ಒಂದು ಉತ್ತಮ ಐತಿಹಾಸಿಕ ಸಾಧನೆ ಎಂದು ಹೇಳಬಹುದು.ಈ ಸಾಧನೆಯ ಹಿಂದೆ ಅನೇಕರ ಪರಿಶ್ರಮ ಇದೆ,ಅದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ.ವಿದ್ಯಾರ್ಥಿಗಳು ವರ್ಷ ಪೂರ್ತಿ ಶಿಸ್ತಿನಿಂದ ಓದಿ ನಿಯಮಿತವಾಗಿ ಅಭ್ಯಾಸವನ್ನು ಮಾಡಿ, ಶಿಕ್ಷಕರ ಮಾರ್ಗದರ್ಶನವನ್ನು ಅಚ್ಚುಕಟ್ಟಾಗಿ ಪಾಲಿಸಿದ್ದಾರೆ ಎಂದು ಈ ಫಲಿತಾಂಶ ನೋಡಿದರೆ ತಿಳಿಯುತ್ತದೆ.ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಾಗಿ ಓದದೆ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ವಿಜ್ಞಾನ ಹಾಗೂ ಕಲಾ ವಿಭಾಗಗಳಲ್ಲಿ ಶೇಕಡಾ 100 ಫಲಿತಾಂಶ ಬಂದಿರುವುದು ವಿಶೇಷವಾಗಿದ್ದು, ಇದು ಆ ವಿಭಾಗಗಳ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ.

ವಿಜ್ಞಾನ ವಿಭಾಗಗಳಲ್ಲಿ ಕಠಿಣ ವಿಷಯಗಳಿರುವುದರಿಂದ 100ಶೇಕಡಾ ಫಲಿತಾಂಶ ಗಳಿಸಿ ಈ ಮಟ್ಟದ ಸಾಧನೆ ಮಾಡುವುದು ಸುಲಭದ ಮಾತಲ್ಲ, ಆದರೂ ವಿದ್ಯಾರ್ಥಿಗಳನ್ನು ಇದು ಕಠಿಣ ಪರಿಶ್ರಮದಿಂದ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಕಲಾ ವಿಭಾಗದಲ್ಲಿಯೂ ಸಮಾನ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಾತ್ರ ಶೇಕಡಾ 98.18 ಫಲಿತಾಂಶ ಕಂಡು ಬಂದಿದೆ. ಇದು ಕೂಡ ಸರ್ಕಾರಿ ಕಾಲೇಜಿನಲ್ಲಿ ಅತ್ತ್ಯುತ್ತಮ ಸಾಧನೆ. ಒಟ್ಟು ವಿದ್ಯಾರ್ಥಿಗಳಲ್ಲಿ 26 ಮಂದಿ distinction ಪಡೆದಿದ್ದು, 70 ಮಂದಿ first class ನಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಕೇವಲ ಉತ್ತೀರ್ಣತೆ ಮಾತ್ರವಲ್ಲ, ಇದು ಗುಣಮಟ್ಟದ ಶಿಕ್ಷಣದ ಪ್ರತಿಬಿಂಬವಾಗಿದೆ.ಆಯಿಷತುಲ್ ಇಲ್ಮಾಮಾಷಾ ಮತ್ತು ಫಾತಿಮತ್ ಝಹಿದಾ 571 ಅಂಕಗಳನ್ನು ಪಡೆದುಕೊಂಡು ವಾಣಿಜ್ಯ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ದೀಕ್ಷಿತ್ ಪಿ, 553 ಅಂಕಗಳನ್ನು ಪಡೆದು ವಿಜ್ಞಾನ ವಿಭಾಗದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಗುಲಾಬಿ 535 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕೂಡ ಸಾಮರ್ಥ್ಯ ಅಪಾರವಾಗಿದೆ ಎಂದು ಎಂಬುದನ್ನು ತೋರಿಸುತ್ತದೆ. ಈ ಸಾಧನೆಯ ಹಿಂದೆ ಉಪನ್ಯಾಸಕರ ಪಾತ್ರವು ಮಹತ್ವದ್ದಾಗಿದೆ.ಅವರು ಹೆಚ್ಚುವರಿ ತರಗತಿಗಳು, ವೈಯಕ್ತಿಕ ಗಮನ, ಪರೀಕ್ಷಾ ಪೂರ್ವ ತರಬೇತಿ, ಮತ್ತು ನಿರಂತರ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಯಶಸ್ಸಿನತ್ತ ಕರೆದೊಯ್ದಿದ್ದಾರೆ.

ಪ್ರೇರಣೆಯ ಕಥೆ

ಗ್ರಾಮೀಣ ವಿದ್ಯಾರ್ಥಿಗಳ ಗೆಲುವು ಮತ್ತು ಭವಿಷ್ಯದ ದಾರಿ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೇವಲ ಶಿಕ್ಷಣ ಸಂಸ್ಥೆಯ ಸಾಧನೆಯಾಗದೆ ಗ್ರಾಮೀಣ ಭಾರತದ ಶಕ್ತಿಯ ಪ್ರತೀಕವಾಗಿದೆ.ಈ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸವಾಲುಗಳನ್ನು ಮೀರಿ, ತಮ್ಮ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಶ್ರಮಿಸಿದ್ದಾರೆ.ಅವರಲ್ಲಿನ ಕಷ್ಟ ಪಡುವ ಸಾಮರ್ಥ್ಯದಿಂದಲೇ ದೃಢ ಸಂಕಲ್ಪವನ್ನು ಮಾಡಿ ಈ ಮಟ್ಟದ ಫಲಿತಾಂಶವನ್ನು ಗಳಿಸುವಂತೆ ಆಗಿದೆ. ಪೋಷಕರ ಬೆಂಬಲವೂ ಕೂಡ ಇಲ್ಲಿ ಬಹು ಮುಖ್ಯ ಮತ್ತು ಗಮನಾರ್ಹವಾಗಿದೆ. ಇಲ್ಲಿನ ಶಿಕ್ಷಕರು ಎಷ್ಟು ಚೆನ್ನಾಗಿ ಸ್ಪಂದಿಸುತ್ತಾರೆ ಅಂದರೆ ಪ್ರತಿಯೊಬ್ಬರನ್ನು ಕರೆದು ಅವರ ತೊಂದರೆಗಳನ್ನು ಅರಿತುಕೊಂಡು ಸರಿಯಾದ ಮಾರ್ಗದರ್ಶನವನ್ನು ನೀಡುತ್ತಾರೆ.ವಿಶೇಷತೆ ಏನೆಂದರೆ ಇವರು ಪರೀಕ್ಷೆಯ ಸಮಯ ಹತ್ತಿರ ಬರುವಾಗ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಅಭ್ಯಾಸ ಮಾಡಲು ಕಷ್ಟವಾಗುತ್ತದೆ ಎಂದು ಕಾಲೇಜಿನಲ್ಲೇ ಅವರಿಗೆ special class ನಡೆಸಿ ಮತ್ತು ಅವರಿಗೆ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ನಡೆಸಿ exam ಗೆ ತಯಾರಾಗುವಂತೆ ಮಾಡುತ್ತಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಕಡೆಗೆ ಇನ್ನೂ ಹೆಚ್ಚಿನ ಗಮನವನ್ನು ಕೊಟ್ಟು ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅಲ್ಲಿನ ವಾತಾವರಣವನ್ನು ಎಲ್ಲ ಗಮನಿಸಿ ಪೋಷಕರೊಂದಿಗೆ ಮಾತನಾಡಿ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಕೊಟ್ಟು ಪರೀಕ್ಷೆ ಮುಗಿಯುವ ತನಕ ಅವರಿಗೆ ಮನೆಕೆಲಸವೂ ಮಾಡಿಸಬಾರದೆಂದು ಮನವೊಲಿಸುತ್ತಾರೆ. ನಾನೂ ಕೂಡ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಎಂದು ನಿಮ್ಮೊಂದಿಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ.ಇದೆಲ್ಲ ನನ್ನ ಸ್ವಂತ ಅನುಭವ ಕೂಡ ಹೌದು. ಇಲ್ಲಿ ಶಿಕ್ಷಕರು ಬೇಧ ಭಾವ ಅಥವಾ ನೀನು ಶ್ರೀಮಂತ ನೀನು ಬಡವ ನೀನು ಬೇರೆ ಜಾತಿ ಎಂದು ನೋಡುವುದಿಲ್ಲ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಾರೆ.ಇತರ ಚಟುವಟಿಕೆಗಳನ್ನು ಕೂಡ ನಡೆಸುತ್ತಾರೆ. ಮತ್ತು ಮಕ್ಕಳಿಗೆ ಒಳ್ಳೆಯ ಅಂಕಗಳನ್ನು ಗಳಿಸಿ ಮುಂದೆ ಏನು ಮಾಡಬೇಕು ಎಂದು ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಅವರಲ್ಲಿರುವ ಪ್ರತಿಭೆಯನ್ನು ಅರ್ಥ ಮಾಡಿಸಿ ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಯತ್ನಿಸುತ್ತಾರೆ.ಇಲ್ಲಿನ ಶಿಕ್ಷಕರು ಬರೀ ತರಗತಿಗೆ ಸೀಮಿತವಾಗಿರದೆ ವಿದ್ಯಾರ್ಥಿಗಳೊಂದಿಗೆ ಸಹಪಾಠಿಗಳಂತೆ ನಡೆದುಕೊಳ್ಳುವಂತಹ ಸ್ನೇಹಜೀವಿಗಳಾಗಿರುತ್ತಾರೆ. ವರ್ಷದಿಂದ ವರ್ಷಕ್ಕೆ ಫಲಿತಾಂಶದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಲ್ಲಿ ಯಶಸ್ವಿಯನ್ನು ಸಾಧಿಸುತ್ತಿದೆ ಕಡಬ ಕಾಲೇಜು. ಇನ್ನಷ್ಟು ಉತ್ತಮ ಫಲಿತಾಂಶಗಳನ್ನು ನೀಡಲು ಕಾಲೇಜ್ ಹಾಗೂ ಶಿಕ್ಷಕ ವೃಂದ ಸಜ್ಜಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾಲೇಜ್ ಗೆ ಉತ್ತಮ ಸೌಲಭ್ಯಗಳು ದೊರಕುವಂತೆ ಆದರೆ ರಾಜ್ಯ ಮಟ್ಟದಲ್ಲಿ ಕೂಡಾ ಮತ್ತಷ್ಟು ಹೆಸರು ಮಾಡಬಹುದು. ಒಟ್ಟಿನಲ್ಲಿ ಕಡಬದ ಸರ್ಕಾರಿ ಪಿಯು ಕಾಲೇಜಿನ ಈ ಸಾಧನೆ ಎಲ್ಲರಿಗೂ ಪ್ರೇರೇಪಣೆ ಮಾಡುವಂತೆ ಮಾದರಿಯಾಗಿ ತನ್ನ ಯಶೋಗಾಥೆಯನ್ನು ತೋರಿಸಿಕೊಟ್ಟಿದೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ಭಯವಿಲ್ಲದೆ ಪ್ರವೇಶ ಮಾಡಿಸಲು ಉತ್ತಮ ಉದಾಹರಣೆಯಾಗಿದೆ.ಹಣವಿರುವವರು ತಮ್ಮ ಮಕ್ಕಳನ್ನು ಡೊನೇಷನ್ ಕೊಟ್ಟು ಒಳ್ಳೆಯ ಪ್ರೈವೇಟ್ ಕಾಲೇಜಿಗೆ ಸೇರಿಸುತ್ತಾರೆ.ಆದರೆ ಬಡವರಿಗೆ ಅದು ಕಷ್ಟಸಾಧ್ಯ ಹಾಗೆ ತನ್ನ ಸಹಪಾಠಿಗಳು ಕೂಡ ಕೀಳರಿಮೆಯಿಂದ ನೋಡುತ್ತಾರೆ ಎನ್ನುವ ಭಾವನೆ ಬಡ ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ.ಆದರೆ ಒಂದು ವಿಷಯ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಕಷ್ಟ ಪಟ್ಟರೆ ಇಷ್ಟವೂ ಆಗುತ್ತದೆ. ಓದುವ ಮಕ್ಕಳನ್ನು ನಾವು ಯಾವ ಕಾಲೇಜಿಗೆ ಸೇರಿಸಿದರೂ ಕೂಡ ಅವರು ಓದಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಆದರೆ ಓದದ ಮಕ್ಕಳು ಅವರನ್ನು ಹಣ ಕೊಟ್ಟು ಎಷ್ಟೇ ಒಳ್ಳೆಯ ಕಾಲೇಜಿಗೆ ಸೇರಿಸಿದರೂ ಅವರು ಓದುವುದಿಲ್ಲ ಇದರಿಂದ ಹಣ ಸಮಯ ಎಲ್ಲವೂ ವ್ಯರ್ಥವಾಗುತ್ತದೆ.ಆದರಿಂದ ಎಲ್ಲ ಪೋಷಕರು ವಾಸ್ತವವನ್ನು ಅರಿತುಕೊಂಡು ಸರ್ಕಾರಿ ಶಾಲೆ ಮತ್ತು ಕಾಲೇಜುಗಳನ್ನು ಉಳಿಸಿಕೊಳ್ಳೋಣ.ಎಲ್ಲರಿಗೂ ಸರ್ಕಾರಿ ಕೆಲಸ ಬೇಕು ಆದರೆ ಸರ್ಕಾರಿ ಶಾಲೆಗಳಿಗೆ ಮಾತ್ರ ಯಾಕೆ ಮಕ್ಕಳನ್ನು ಕಲಿಸಲು ಹಿಂದೆ ಮುಂದೆ ನೋಡಬೇಕು ಅಲ್ಲವೇ, ಈ ಉತ್ತಮ ಉದಾಹರಣೆಯನ್ನು ನೋಡಿ ನಾವು ಕೂಡ ಬದಲಾಗಬೇಕು.ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕು ನಮ್ಮ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.

ಇದನ್ನು ಓದಿ:Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ