ರೇಲ್ವೇ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ದಲ್ಲೇ ನಡೆಸಬೇಕು
ಭಾರತದಂತಹ ಬಹುಭಾಷಾ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕೂಡಾ ತನ್ನದೇ ಆದ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಹಾಗೂ ಪರೀಕ್ಷೆಗಳನ್ನು ಪಡೆಯುವ ಹಕ್ಕು ಇದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಈ ಹಕ್ಕಿನ ಮೇಲೆ ಪರಿಣಾಮ ಬೀರಿವೆ. ವಿಶೇಷವಾಗಿ ಭಾರತೀಯ ರೈಲ್ವೆ ಇಲಾಕಖೆಯು ನಡೆಸುವ ನೇಮಕಾತಿ ಹಾಗೂ ಪದೋನ್ನತಿ ಪರೀಕ್ಷೆಗಳನ್ನು ಕೇವಲ ಹಿಂದಿ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸುತ್ತಿರುವುದು ಕನ್ನಡಿಗರಿಗೆ ದೊಡ್ಡ ಅಸಮಾಧಾನವನ್ನು ತಂದಿದೆ.
ಇದರ ಸಲುವಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ರಾಜ್ಯದ ಎಲ್ಲಾ ಸಂಸದರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ಅವರು ರೇಲ್ವೇ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ಸೇರಿದಂತೆ ಉಳಿದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಮನವಿಯನ್ನು ಮಾಡಿದ್ದಾರೆ.
ಸಮಸ್ಯೆ ಹೇಗೆ ಶುರುವಾಯಿತು?ಸಮಸ್ಯೆಯ ಮೂಲ ಯಾವುದು?
ಇತ್ತೀಚೆಗೆ ನಮ್ಮ ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ನಡೆಸಬೇಕೆಂದು ಉದ್ದೇಶಿಸಿದ್ದ ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ನಮ್ಮ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗಿಲ್ಲ.
👉 ಇದರ ಪರಿಣಾಮದಿಂದ:
ಸಾವಿರಾರು ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡರು
ಕನ್ನಡಿಗರಲ್ಲಿ ತುಂಬ ನಿರಾಸೆಯನ್ನು ಉಂಟು ಮಾಡಿತು
ಭಾಷಾ ಅಸಮಾನತೆಯ ಬಗ್ಗೆ ಎಲ್ಲಾ ಕಡೆಯೂ ಚರ್ಚೆಗಳು ಪ್ರಾರಂಭವಾಯಿತು.
ಪ್ರತಿಭಟನೆಗಳು ಪ್ರಾರಂಭ, ಪ್ರತಿಕ್ರಿಯೆ ಹೇಗಿತ್ತು?
ಈ ನಿರ್ಧಾರವನ್ನು ವಿರೋಧಿಸಿ ಕರ್ನಾಟಕದ ಹಲವಾರು ಕನ್ನಡಪರ ಸಂಘಟನೆಗಳು ಹಾಗೂ ಅಭ್ಯರ್ಥಿಗಳು ಒಟ್ಟಾಗಿ ತೀವ್ರ ಪ್ರತಿಭಟನೆ ನಡೆಸಿದರು.
👉 ಯಾವ ಘಟನೆಗಳು ನಡೆಯಿತು
- ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆಯನ್ನು ಹಾಕಲಾಯಿತು
- ಕನ್ನಡ ಪರ ಘೋಷಣೆಗಳು ಕೂಗಿ ಬಂದವು
- ವಿದ್ಯಾರ್ಥಿಗಳು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿದರು
➡️ಇದರ ಪರಿಣಾಮವಾಗಿ ನಡೆಯಬೇಕಿದ್ದ ಪರೀಕ್ಷೆಯು ತಾತ್ಕಾಲಿಕವಾಗಿ ಮುಂದೆ ಹೋಯಿತು
ತಾತ್ಕಾಲಿಕ ಗೆಲುವು ಸಿಕ್ಕಿತು-ಆದರೆ ಇದು ಶಾಶ್ವತ ಪರಿಹಾರ ಅಲ್ಲ
ಪರೀಕ್ಷೆಯನ್ನು ಮುಂದೂಡಲಾಯಿತು ಎಂದು ಇದು ನಮಗೆ ಸಿಕ್ಕ ಜಯವೆಂದು ನಾವು ಪರಿಗಣಿಸಿದರೂ ಕೂಡ ಇದು ನಮಗೆ ಸಿಕ್ಕ ಶಾಶ್ವತ ಪರಿಹಾರವಲ್ಲ ಎಂದು ಡಾ. ಬಿಳಿಮಲೆ ಅವರು ಎಚ್ಚರಿಸಿದ್ದಾರೆ.
👉ಅವರು ಹೇಳುವ ಪ್ರಕಾರ:
ಪರೀಕ್ಷೆ ಮುಂದೂಡಿಕೆ ನಮ್ಮ ಸಮಸ್ಯೆಗೆ ಪರಿಹಾರ ಅಲ್ಲ
ನಮ್ಮ ಮೂಲ ಸಮಸ್ಯೆ ಭಾಷಾ ತಾರತಮ್ಯ ನಡೆಯುತ್ತಿರುವುದು
ಇದನ್ನು ನಾವು ಶಾಶ್ವತವಾಗಿ ಸರಿಪಡಿಸಬೇಕು ಎಂದು ಡಾ.ಬಿಳಿಮಲೆ ತಿಳಿಸಿದ್ದಾರೆ.
⚖️ ಭಾಷಾ ಹಕ್ಕು – ನಮ್ಮ ಸಂವಿಧಾನಿಕ ಹಕ್ಕು
ಹೌದು ಭಾರತದ ಸಂವಿಧಾನ ಏನು ಹೇಳುತ್ತದೆ:
👉 ಪ್ರತಿಯೊಬ್ಬ ನಾಗರಿಕನಿಗೂ ಕೂಡ ಸಮಾನ ಅವಕಾಶಗಳ ಹಕ್ಕು ಇದೆ ಸಮಾನ ಅವಕಾಶ ಕೊಡಲೇಬೇಕು
👉 ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವುದು ಕೂಡ ಸಾಂವಿಧಾನಿಕ ಹಕ್ಕು
ಮೂಲಭೂತ ಹಕ್ಕು ಕೂಡ ಆಗಿದೆ
ನ್ಯಾಯಸಮ್ಮತ ಅವಕಾಶ ನೀಡಬೇಕು
ಕನ್ನಡದಲ್ಲಿ ಪರೀಕ್ಷೆ ಇಲ್ಲದಿರುವುದು
➡️ ಈ ಹಕ್ಕನ್ನು ಉಲ್ಲಂಘನೆ ಮಾಡಿದ ಹಾಗೆ ಎಂದು ಪರಿಗಣಿಸಲಾಗಿದೆ
📊 ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ ಏನು ಗೊತ್ತಾ?
ಭಾರತದಲ್ಲಿ ವಿವಿಧ ಭಾಷೆಗಳಿವೆ, ಪ್ರತಿಯೊಂದು ರಾಜ್ಯದಲ್ಲೂ ಅದರದ್ದೇ ಆದ ವಿಭಿನ್ನ ಭಾಷಾ ಸಂಸ್ಕೃತಿಗಳು ಇವೆ.
👉 ಕನ್ನಡಿಗರಿಗೆ :
ಕನ್ನಡದಲ್ಲಿ ಓದುವುದು ತುಂಬ ಸುಲಭ ಕೇಳುವ ಪ್ರಶ್ನೆಗಳಿಗೆ
ಅದಕ್ಕೆ ಸರಿ ಹೊಂದುವ ಅರ್ಥವಿರುವ ಉತ್ತರ ನೀಡಲು ಸಾಧ್ಯ
👉 ಈಗ ಹಿಂದಿ/ಇಂಗ್ಲಿಷ್‌ನಲ್ಲಿ ಮಾತ್ರ ನಡೆಯುತ್ತಿರುವ ಪರೀಕ್ಷೆಗಳು:
ಇದರಿಂದ ಕನ್ನಡಿಗರಿಗೆ ಅನ್ಯಾಯ
ಅವಕಾಶ ವಂಚಿತರಾಗುವ ಪರಿಸ್ಥಿತಿ ಉಂಟಾಗಿದೆ.
ಈ ಭಾಷಾ ತಾರತಮ್ಯ ಉದ್ಯೋಗದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಈ ಭಾಷಾ ತಾರತಮ್ಯದಿಂದ:
ಕನ್ನಡಿಗರಿಗೆ ಉದ್ಯೋಗದ ಅವಕಾಶವನ್ನು ಕಡಿಮೆಯಾಗುವಂತೆ ಮಾಡುತ್ತದೆ
ಸ್ಥಳೀಯ ಯುವಕರು ಇದರಿಂದಾಗಿ ಹಿಂದೆ ಉಳಿದುಬಿಡುತ್ತಾರೆ
ಪ್ರತಿಭಾವಂತರಿಗೂ ಕೂಡ ಇಲ್ಲಿ ಅವಕಾಶ ಸಿಗದೆ ವಂಚಿತರಾಗುತ್ತಾರೆ.
👉 ಇದು ಒಂದು ದೊಡ್ಡ ಸಾಮಾಜಿಕ ಸಮಸ್ಯೆಕೂಡ ಆಗಿದೆ.
🏛️ ಸಂಸದರಿಗೆ ಯಾವ ರೀತಿ ಮನವಿ ಮಾಡಲಾಯಿತು
ಡಾ. ಬಿಳಿಮಲೆ ಅವರು ರಾಜ್ಯದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭಾ ಸಂಸದರಿಗೆ ಮನವಿಯನ್ನು ಮಾಡಿದ್ದಾರೆ
👉 ಪ್ರಮುಖ ಬೇಡಿಕೆಗಳು ಇಡಲಾಯಿತು
ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಲೇಬೇಕು
ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲೇಬೇಕು
ರೈಲ್ವೆ ಪರೀಕ್ಷೆಗಳನ್ನು ಕನ್ನಡ ಭಾಷೆಗಳಲ್ಲಿ ನಡೆಸಲೇಬೇಕು
ಎಂದು ಬೇಡಿಕೆಗಳನ್ನು ಇಟ್ಟು ಮನವಿ ಮಾಡಿಕೊಳ್ಳಲಾಯಿತು.
ಈ ಸಮಸ್ಯೆಯನ್ನು ಪರಿಹರಿಸಲು ಯಾವ ರಾಜ್ಯಗಳಿಂದ ಬೆಂಬಲ ಸಿಕ್ಕಿತು
ಈ ಸಮಸ್ಯೆಯು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.
👉 ಹಾಗಾದ್ರೆ ಯಾವ ರಾಜ್ಯಗಳಿಗೆ ಈ ಸಮಸ್ಯೆ ಕಾಡುತ್ತಿದೆ
ತಮಿಳುನಾಡು
ಕೇರಳ
ಮಹಾರಾಷ್ಟ್ರ
👉ಈ ರಾಜ್ಯಗಳು ಕೂಡ ಕರ್ನಾಟಕದ ತರಹ ಸಮಸ್ಯೆಯನ್ನು ಎದುರಿಸುತ್ತಿವೆ ಮತ್ತು ಕರ್ನಾಟಕಕ್ಕೆ ಬೆಂಬಲವನ್ನು ನೀಡುತ್ತಿದೆ
👉 ಆದುದರಿಂದ:
➡️ ಎಲ್ಲಾ ರಾಜ್ಯಗಳ ಸಂಸದರು ಕೂಡ ಒಂದಾಗಬೇಕು.ಎಲ್ಲರೂ ಒಗ್ಗಟ್ಟಾದರೆ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ರೈಲ್ವೆ ಪರೀಕ್ಷೆಗಳನ್ನು ನಮ್ಮ ಬೇಡಿಕೆಯ ಪ್ರಕಾರ ಕನ್ನಡದಲ್ಲೇ ಬರೆಯುವಂತೆ ಮಾಡಬಹುದು.
📈 ರೈಲ್ವೆ ಇಲಾಖೆಯ ಮಹತ್ವ ಏನು ಅಂತ ನಿಮಗೆ ಗೊತ್ತೇ?
ಭಾರತೀಯ ರೈಲ್ವೆ ನಮ್ಮ ದೇಶದ ಅತಿದೊಡ್ಡ ಉದ್ಯೋಗದಾತ ಅಂತ ಹೇಳಬಹುದು ನಮ್ಮ ಭಾರತೀಯ ರೈಲ್ವೆ ಲಕ್ಷಾಂತರ ಹುದ್ದೆಗಳನ್ನು ಒಳಗೊಂಡಿದೆ ಈ ಹುದ್ದೆಗಳಲ್ಲಿ ನಮ್ಮ ಕನ್ನಡಿಗರಿಗೆ ಅಂದರೆ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಸಿಗಬೇಕು.ಹಾಗೂ ಸಮಾನ ಸ್ಪರ್ಧೆಗಳು ನಡೆಯಬೇಕು
🔍 ಸಮಸ್ಯೆಯನ್ನು ಪರಿಹಾರ ಮಾಡಲು ನಮ್ಮ ಸೂಚನೆಗಳು
1. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಬೇಕು
ಕನ್ನಡವೂ ಸೇರಿದಂತೆ ಉಳಿದ ಎಲ್ಲಾ ಭಾಷೆಗಳು ಸೇರಬೇಕು
✔️ 2. ಸಮಾನವಾದ ಅವಕಾಶ ದೊರೆಯಬೇಕು
✔️ 3. ನೀತಿಯಲ್ಲಿ ಬದಲಾವಣೆ ಅಗತ್ಯವಾಗಿದೆ.ಕೇಂದ್ರ ಸರ್ಕಾರ ಇದರ ಬಗ್ಗೆ ಸ್ಪಷ್ಟ ಆದೇಶ ನೀಡಬೇಕು
ಭವಿಷ್ಯದ ಹೋರಾಟ ನಡೆಯಬಹುದು
ಈ ಸಮಸ್ಯೆಯು ಪರಿಹಾರವಾಗದಿದ್ದರೆ:
ದೊಡ್ಡ ಮಟ್ಟದ ಪ್ರತಿಭಟನೆಗಳು ಮುಂದೆ ನಡೆಯಲು ಸಾಧ್ಯವಿದೆ
ಕನ್ನಡಪರ ಸಂಘಟನೆಗಳಿಂದ ಚಳವಳಿಗಳು ಹೆಚ್ಚಾಗಬಹುದು
👉 ಜನರ ಆಕ್ರೋಶ ಕೂಡ ಈಗಾಗಲೇ ಹೆಚ್ಚಾಗುತ್ತಿದೆ
ಹಾಗಾದರೆ ಕನ್ನಡಿಗರು ಏನನ್ನು ನಿರೀಕ್ಷಿಸುತ್ತಿದ್ದಾರೆ
- ನಮ್ಮ ಭಾಷೆಯಲ್ಲಿ ಪರೀಕ್ಷೆ
- ಸಮಾನ ಅವಕಾಶ
- ನ್ಯಾಯಯುತವಾದ ವ್ಯವಸ್ಥೆ
ಈ ಸಮಸ್ಯೆಯು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ಇದು ಕೇವಲ ಪರೀಕ್ಷೆಯ ವಿಷಯವಲ್ಲ ಇದು ನಮ್ಮ ಭಾಷೆಯ ಗೌರವದ ಪ್ರಶ್ನೆ.ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡ ಭಾಷೆಗೆ ಪ್ರಾಮುಖ್ಯತೆ ಸಿಗಲಿಲ್ಲವಾದರೆ ಹೊರ ರಾಜ್ಯಗಳಲ್ಲಿ ನಮ್ಮ ಭಾಷೆಗೆ ಗೌರವ ದೊರಕುವುದಿಲ್ಲ.ಮತ್ತು ನಮ್ಮ ಸಂಸ್ಕೃತಿಯ ಅಳಿವಿನಂಚಿಗೆ ಕಾರಣವಾಗಬಹುದು.
ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಬೇಕು ಎಂದು ಬೇಡಿಕೆ ಇಟ್ಟಿರುವುದು ಬರೀ ಬೇಡಿಕೆ ಅಲ್ಲ.ಇದು ನ್ಯಾಯ ಹಾಗೂ ಸಮಾನತೆ ಹಾಗೂ ನಮ್ಮ ಕನ್ನಡ ಭಾಷೆ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟವಾಗಿದೆ.
ಸರ್ಕಾರ ಹಾಗೂ ಸಂಸದರು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಉತ್ತಮ ನಿರ್ಧಾರವನ್ನು ತೆಗೆದುಕೊಂಡರೆ ಅನೇಕ ಮುಖ್ಯವಾಗಿ ಗ್ರಾಮೀಣ ಅಭ್ಯರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ಕನ್ನಡಿಗರಿಗೆ ನ್ಯಾಯ ಸಿಗುವಲ್ಲಿ ನಮ್ಮ ಹೋರಾಟ.
ರೈಲ್ವೆ ಪರೀಕ್ಷೆಗಳಲ್ಲಿ ಭಾಷೆಯ ಅಡೆತಡೆ ಯಾಕೆ ಆಗುತ್ತಿದೆ?
ಕೇಂದ್ರ ಸರ್ಕಾರದ ಅಡಿಯಲ್ಲಿರುವ ಭಾರತೀಯ ರೈಲ್ವೆ ಇಲಾಖೆಯಲ್ಲಿ ನಡೆಯುವ ಪರೀಕ್ಷೆಗಳು ಭಾಷಾವಾರು ವಿಷಯಗಳಿಂದ ಅನೇಕರ ಭವಿಷ್ಯವನ್ನು ಹಾಳು ಮಾಡುತ್ತಿದೆ.ಇದಕ್ಕೆ ನೇರ ಕಾರಣ ಭಾಷೆ ಯಾಕೆಂದರೆ ಮಾತೃ ಭಾಷೆಯಲ್ಲಿ ಪರೀಕ್ಷೆಗಳು ನಡೆದರೆ ಅಭ್ಯರ್ಥಿಗಳಿಗೆ ತುಂಬ ಸುಲಭವಾಗುತ್ತದೆ ಮತ್ತು ಆತ್ಮವಿಶ್ವಾಸ ತರುತ್ತದೆ.ಹಾಗಂತ ಇದು ಪ್ರತಿಭೆಯ ಕೊರತೆಯಲ್ಲ.ಅವರಿಗೆ ಅವರ ಸಾಮರ್ಥ್ಯವನ್ನು ತಮ್ಮ ಮಾತೃ ಭಾಷೆಯಲ್ಲಿ ತೋರಿಸಿದ ಹಾಗೆ ಬೇರೆ ಭಾಷೆಯಲ್ಲಿ ಆಗುವುದಿಲ್ಲ.ಭಾಷಾ ಸಮಾನತೆ ಉದ್ಯೋಗದ ಹಕ್ಕು ಕೂಡ ಆಗಿದೆ.
ಇದನ್ನು ಓದಿ:ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಉಚಿತ NEET ತರಬೇತಿ ಸರ್ಕಾರದ ಹೊಸ ಯೋಜನೆ – ಯಾರು ಅರ್ಹರು? ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ. – KPworld365 https://kpworld365.in/%f0%9f%91%89-short-alternative-free-neet-training-karnataka-rural-students/
- Kadaba govt PU college success story: ಸೀಮಿತ ಸೌಲಭ್ಯಗಳ ನಡುವೆಯೂ ಕಡಬದ ಸರ್ಕಾರಿ ಪಿಯು ಕಾಲೇಜಿನ ಐತಿಹಾಸಿಕ ಸಾಧನೆ ಪೂರ್ತಿ ಮಾಹಿತಿ - April 10, 2026
- ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2026:ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟ – ಕಡಿಮೆ ಅಂಕ ಅಥವಾ ಫೇಲ್ ಆದರೆ ಏನು ಮಾಡಬೇಕು, digilockernallu ಫಲಿತಾಂಶ ನೋಡಲು ಅವಕಾಶ, ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು, ಸಂಪೂರ್ಣ ಮಾಹಿತಿ - April 9, 2026
- Breaking IBreaking Iran Conflict: ಸಾವಿನ ಸಂಖ್ಯೆ 34, ಹೋರ್ಮುಜ್ ಮಾರ್ಗದಿಂದ ತೈಲ ಬೆಲೆ ಏರಿಕೆ - April 7, 2026