Benifits of walking
ಸ್ನೇಹಿತರೆ ಈಗ ಎಲ್ಲಾ ಕಡೆ ವಾಕಿಂಗ್ ದೊಡ್ಡ ಟ್ರೆಂಡ್ ಆಗುವಂತೆ ಆಗಿದೆ. ನಾನು ವಾಕಿಂಗ್ ಮಾಡುತ್ತೇನೆ ನೀನು ಮಾಡುತ್ತೀಯ ನಿಂದು ಎಷ್ಟು ಸ್ಟೆಪ್ಸ್ ಕಂಪ್ಲೀಟ್ ಆಯಿತು, ನಂದು ಇಷ್ಟು ಆಯಿತು ಅಂತ ಒಬ್ಬರಿಗೊಬ್ಬರು ಸಂಭಾಷಣೆ ಮಾಡಿಕೊಳ್ಳುವುದು ಮಾಮೂಲಿ ಆಗಿಬಿಟ್ಟಿದೆ.ಆದರೆ ನಿಜಕ್ಕೂ ಯಾರು ವಾಕಿಂಗ್ ಮಾಡಬೇಕು ಎಷ್ಟು ವಾಕಿಂಗ್ ಮಾಡಿದರೆ ಒಳ್ಳೆಯದು ಎಷ್ಟು ಮಾಡಿದರೆ dangerous ಅಂತ ನಿಮಗೆ ಗೊತ್ತಿದೆಯಾ! ಇನ್ನು ಕೆಲವರು ವಾಕಿಂಗ್ ಕೂಡ ಮಾಡುವುದಿಲ್ಲ,exercise ಕೂಡ ಮಾಡುವುದಿಲ್ಲ ಜಡ ವಸ್ತುವಾಗಿರುತ್ತಾರೆ ಅವರು ಈವಾಗ ನಾವೆಲ್ಲ ಕೃತಕ ಮೆಡಿಸಿನ್ ಹಿಂದೆ ಓದುತ್ತಿದ್ದೇವೆ. ಟೆನ್ಶನ್ ಕಡಿಮೆ ಮಾಡಲು ರಾತ್ರಿ ನಿದ್ರೆ ಬರ್ತಿಲ್ಲ ಅಂತ ಒಂದು ಮಾತ್ರೆ ಬಿಪಿ ಕಂಟ್ರೋಲ್ ಮಾಡಲು ಮಾತ್ರೆ,ಶುಗರ್ ಲೆವೆಲ್ ಕಮ್ಮಿ ಮಾಡಲು ಅಂತ ಇನ್ನೊಂದು ಮಾತ್ರೆ ಆದರೆ ನಮ್ಮ ದೇಹವನ್ನು ನೈಸರ್ಗಿಕವಾಗಿ ಆರೋಗ್ಯವಂತ ಮತ್ತು ಶಕ್ತಿಯುತ ದೇಹವನ್ನಾಗಿಸಲು ಪ್ರಕೃತಿ ಕೊಟ್ಟಿರುವ ಉತ್ತಮ ಔಷಧಿ ಈ ವಾಕಿಂಗ್. ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡಿದ್ರೆ ನಮ್ಮ ಹೃದಯಾಘಾತ 30% ಕಡಿಮೆ ಆಗುತ್ತದೆ. ದಪ್ಪ ಆಗೋಕೆ ಕಾರಣವಾಗುವ obesity ಜೀನ್ ಗಳನ್ನು ಬಾಯಿ ಮುಚ್ಚಿಸಿ ಸುಮ್ಮನೆ ಕೂರಿಸುವ ತಾಕತ್ತು ಕೂಡ ವಾಕಿಂಗ್ ಗೆ ಇದೆ.
ವಾಕಿಂಗ್ ಬಗ್ಗೆ ಸೈಂಟಿಫಿಕ್ ರಹಸ್ಯಗಳು ಎಷ್ಟು ಜನಕ್ಕೆ ತಿಳಿದಿದೆ
ವಾಕಿಂಗ್ ಮಾಡುವುದಕ್ಕೂ ನಮ್ಮ ದೇಹದಲ್ಲಿರುವ ಕೋಟ್ಯಂತರ ಜೀವ ರಾಶಿಗಳಿಗೂ ಇರುವ ನೇರ ಸಂಬಂಧ ಏನು,ವಾಕಿಂಗ್ ಸುಮ್ಮನೆ ಇಷ್ಟ ಬಂದ ಹಾಗೆ ಮಾಡುವುದ,ಇಲ್ಲ ವಾಕಿಂಗ್ ಗೆ ಪರ್ಟಿಕ್ಯುಲರ್ ವಿಧಾನ ಇದೆಯಾ?ಒಂದು ನಿರ್ದಿಷ್ಟ ರೀತಿಯಲ್ಲೇ ವಾಕ್ ಮಾಡಬೇಕು ಅಂತ ಇದೆಯಾ, ಮನುಷ್ಯ ಹುಟ್ಟಿದ್ದೇ ನಡೆಯೋಕೆ DNA ನಲ್ಲಿ ಅಡಗಿದೆ ಆರೋಗ್ಯದ ಗುಟ್ಟು.ವಾಕಿಂಗ್ ನಮಗೇನು ಹೊಸದಲ್ಲ ಆದರೆ ನಾವುಗಳು ನಡೆಯುವುದನ್ನೇ ಮರೆತುಬಿಟ್ಟಿದ್ದೇವೆ. ನೂರು ಮೀಟರ್ ದೂರದಲ್ಲಿರುವ ಅಂಗಡಿಗೆ ಹೋಗಲು ಬೈಕ್ ಬೇಕು ಕಾರು ಬೇಕು ಬಸ್ ಬೇಕು ಕಾಲುಗಳನ್ನು ಉಪಯೋಗಿಸಿ ನಡೆಯಲ್ಲ.ಮನುಷ್ಯನ ವಿಕಸನದ ಬಗ್ಗೆ ನಿಮಗೆ ಗೊತ್ತಿದೆ ಅಲ್ಲವೇ, ನಾವು ವಾಕಿಂಗ್ ಮಾಡಲು ಪ್ರಾರಂಭಿಸಿದ ಮೊದಲ ಐದು ನಿಮಿಷದಲ್ಲಿ ನಿಮ್ಮ ದೇಹದಲ್ಲಿ ಅದ್ಭುತ ಪ್ರಕ್ರಿಯೆ70 ಶುರುವಾಗುತ್ತದೆ.ಸಾಮಾನ್ಯವಾಗಿ ನಿಮಿಷಕ್ಕೆ 60ರಿಂದ 70 ಬಾರಿ ಬಡಿಯೋ ಹೃದಯ ನೂರರ ಸ್ಪೀಡ್ನಲ್ಲಿ ಬಡಿಯೋಕೆ ಪ್ರಾರಂಭವಾಗುತ್ತದೆ ಹೊಟ್ಟೆ ಭಾಗದಲ್ಲಿ ರಕ್ತ ನೇರವಾಗಿ ಕಾಳುಗಳ muscles ಗಳಿಗೆ force ಆಗಿ pump ಆಗುತ್ತೆ ಇನ್ನು ನೀವು ವಾಕಿಂಗ್ ಮಾಡುವುದರಿಂದ ಗ್ಲೂಟ್ ಫೋರ್ ಅನ್ನೋ ಪ್ರೋಟೀನ್ ಆಕ್ಟಿವೇಟ್ ಆಗುತ್ತದೆ. ಇದು ಇನ್ಸುಲಿನ್ ಸಹಾಯವಿಲ್ಲದೆ ನಿಮ್ಮ ಮಸಲ್ಸ್ ರಕ್ತದಲ್ಲಿರುವ ಗ್ಲೂಕೋಸ್ ನ ಜೀವಕೋಶಗಳು ನೇರವಾಗಿ ಹೀರಿಕೊಳ್ಳೋಕೆ ಸಹಾಯ ಮಾಡುತ್ತದೆ. ಅದಕ್ಕೇನೆ ಊಟ ಆದಮೇಲೆ ಮಲಗೋಕೆ ಒಂದು ಹದಿನೈದು ನಿಮಿಷಗಳ ಕಾಲ ಲೈಟ್ ಆಗಿ ವಾಕಿಂಗ್ ಮಾಡಿ ಅಂತ ತಜ್ಞರು ಸಲಹೆಯನ್ನು ನೀಡುತ್ತಾರೆ.ಯಾಕೆಂದರೆ ಊಟದ ನಂತರ ವಾಕ್ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ದಿಢೀರ್ ಅಂತ ಆಗುವುದನ್ನು ತಪ್ಪಿಸುತ್ತದೆ. ಇನ್ನು ಮಾನಸಿಕ ಆರೋಗ್ಯದ ವಿಚಾರವನ್ನು ತೆಗೆದುಕೊಂಡರೆ ವಾಕಿಂಗ್ ಒಂದು ಜಾದೂ ಗುಳಿಗೆ ಎಂದು ಹೇಳಬಹುದು. ನೀವು ನಡೆದಾಗ ಮೆದುಳಿನಲ್ಲಿ ಎಂಡಾರ್ಫಿನ್ ಅನ್ನೋ ಹಾರ್ಮೋನು ಬಿಡುಗಡೆ ಆಗುತ್ತದೆ ಇದು ನಮ್ಮ ದೇಹದ ನ್ಯಾಚುರಲ್ ನೋವು ನಿವಾರಕ ಜೊತೆಗೆ ನಮಗೆ ಒತ್ತಡವನ್ನು ಮಾಡುವ ಕಾರ್ಟಿಸೋಲ್ ಲೆವೆಲ್ ಪಾತಾಳಕ್ಕೆ ಕುಸಿಯುತ್ತದೆ ಇದರಿಂದ ಮೆದುಳು ರಿಲ್ಯಾಕ್ಸ್ ಆಗಿ ರಾತ್ರಿ ಒಳ್ಳೆಯ ನಿದ್ದೆಯನ್ನು ನೀಡುತ್ತದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಎನ್ಸಿಬಿಐ ಡೇಟಾ ಪ್ರಕಾರ ನಿಯಮಿತವಾಗಿ ವಾಕ್ ಮಾಡುವವರಿಗೆ ಹೃದಯಾಘಾತ ಆಗುವ ರಿಸ್ಕ್ 30% ಕಡಿಮೆಯಾಗುತ್ತದೆ.ಯಾಕೆಂದರೆ ವಾಕಿಂಗ್ ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ ರಕ್ತನಾಳಗಳನ್ನು ಫ್ರೀ ಮಾಡುತ್ತದೆ.
ಜಿಮ್ ವರ್ಕೌಟ್ v/s ಸಿಂಪಲ್ ವಾಕಿಂಗ್ ನಿಮ್ಮ ದೇಹಕ್ಕೆ ಯಾವುದು ಉತ್ತಮ?
ಸ್ನೇಹಿತರೆ ಇಲ್ಲಿ ಮುಖ್ಯವಾಗಿ ನಮ್ಮ ಒಬೆಸಿಟಿ ಜೀನ್ಸ್ ಅಂದರೆ ಬೊಜ್ಜಿನ ವಂಶವಾಹಿಗಳು ನಮ್ಮ ದೇಹದಲ್ಲಿ ನಾವು ಎಷ್ಟು ದಪ್ಪ ಆಗುತ್ತೇವೆ ಎಂಬುದನ್ನು ನಿರ್ಧರಿಸುವ 32 ಜೀನ್ಗಳು ಇರುತ್ತವೆ. ನಿಮಗೆ ದಪ್ಪ ಆಗೋ ವಂಶವಾಹಿ ಗುಣ ಇದ್ದರೂ ಕೂಡ ಸರಿ ಹಾರ್ವರ್ಡ್ ಸ್ಟಡಿ ಪ್ರಕಾರ ದಿನಕ್ಕೆ ಒಂದು ಗಂಟೆ ಬ್ರಿಸ್ಕ್ ವಾಕ್ ಮಾಡಿದರೆ ಈ ಜೀನ್ಗಳ ಎಫೆಕ್ಟ್ 50% ಕಟ್ ಆಗುತ್ತದೆ.ಬ್ರಿಸ್ಕ್ ವಾಕ್ ಅಂದರೆ ಪ್ರತಿ ನಿಮಿಷಕ್ಕೆ 100 ಹೆಜ್ಜೆಗಳನ್ನು ಹಾಕಿ ವೇಗವಾಗಿ ನಡೆಯೋ ರೀತಿ ಫಾಸ್ಟ್ ವಾಕಿಂಗ್, ನಿಮಗೆ ಅತಿಯಾದ ಸಿಹಿ ತಿನ್ನುವ ಆಸೆ ಇದ್ದರೆ ಅದನ್ನು ಕೂಡ ಕಂಟ್ರೋಲ್ ಮಾಡಬಹುದು.ಕನಿಷ್ಠ ಹದಿನೈದು ನಿಮಿಷ ವಾಕ್ ಮಾಡಿದ್ರೆ ಸಾಕು ನಿಮ್ಮ ಮೆದುಳಿನಲ್ಲಿ ನೈಸರ್ಗಿಕವಾಗಿ ಸಂತೋಷದ ಹಾರ್ಮೋನ್ ಡೋಪಮಿನ್ ಲೆವೆಲ್ ಬ್ಯಾಲೆನ್ಸ್ ಆಗುತ್ತgದೆ ಇದರಿಂದ ಸಿಹಿ ತಿಂದರೆ ಮಾತ್ರ ಡೋಪಮಿನ್ ಬರಬೇಕು ಅನ್ನೂ ಅನಿವಾರ್ಯತೆ ಹೊರಟು ಹೋಗುತ್ತದೆ.ಮರುದಿನ ಜಿಮ್ ಗೆ ಹೋಗುವ ಮುನ್ನ ನಿಮ್ಮ ದೇಹ ರಿಕವರಿ ಆಗಿದೆಯಾ ಎಂದು ಪರಿಶೀಲಿಸಿ ಮತ್ತೆ ಜಿಮ್ ಗೆ ಹೋಗಬಹುದು. ಜೋಶ್ನಲ್ಲಿ ಒಂದು ಮಾತನಾಡುವುದು ಆಮೇಲೆ ಆಗಲ್ಲ ಅಂತ ಹೇಳಿ ಒಂದು ತಿಂಗಳು ,ಜಿಮ್ ವರ್ಕೌಟ್ ಎಲ್ಲರಿಗೂ ವರ್ಕೌಟ್ ಆಗಿರುವುದಿಲ್ಲ ಯಾಕೆಂದರೆ ಪ್ರತಿಯೊಬ್ಬರ ದೇಹವು ಒಬ್ಬರ ದೇಹಕ್ಕಿಂತ ಇನ್ನೊಬ್ಬರ ದೇಹ ವಿಭಿನ್ನವಾಗಿರುತ್ತದೆ. ವೈದ್ಯರ ಸಲಹೆ certified trainer ಗಳಿಂದ ಅಡ್ವೈಸ್ ಪಡೆದುಕೊಂಡು ಮಾಡುವುದು ಉತ್ತಮ.ಆದರೆ ವಾಕಿಂಗ್ ಹಾಗಲ್ಲ ಇದನ್ನು ಪ್ರತಿ ಒಬ್ಬರು ಮಾಡಬಹುದು.
ಮೂಳೆಗಳ ಆರೋಗ್ಯ, ವಯಸ್ಸಾದಂತೆ ಮಂಡಿ ನೋವು ಮೂಳೆ ನೋವು
ವಯಸ್ಸಾದ ಮೇಲೆ ಈ ತೊಂದರೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ, ಆದರೆ ನಡೆಯುವಾಗ ಕೀಲುಗಳ ನಡುವೆ ಸೈನೋವಿಯಲ್ ಫ್ಲೂಯಿಡ್ ಅನ್ನೋ ನೈಸರ್ಗಿಕ ಆಯಿಲ್ ಉತ್ಪತ್ತಿಯಾಗುತ್ತದೆ. ಇದು ಸೇಮ್ ನಮ್ಮ ಗಾಡಿ ಇಂಜಿನಿಗೆ ಆಯಿಲ್ ಹಾಕಿದ ಹಾಗೆ. ಇದು ಮೂಳೆ ಸವೆತವನ್ನು ತಡೆದು ಆರ್ಥ್ರೈಟಿಸ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಇನ್ನೂ ಚಳಿಗಾಲ ಮಳೆಗಾಲ ಬಂದರೆ ಸಾಕು ನೆಗಡಿ,ಕೆಮ್ಮು ಜ್ವರ ಅಂತ ವೈದ್ಯರ ಬಳಿ ಓಡ್ತೀವಿ, ಆದರೆ ವಾರದಲ್ಲಿ ಕನಿಷ್ಠ ಐದು ದಿನ ಕನಿಷ್ಠ 20 ನಿಮಿಷ ವಾಕ್ ಮಾಡುವುದರಿಂದ ಖಾಯಿಲೆ ಬೀಳುವ ಪ್ರಮಾಣ ಶೇಕಡಾ 43%,ಜೊತೆಗೆ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ರಿಸ್ಕ್ 25% ಕಡಿಮೆ ಆಗಿದೆ.ಮೆಡಿಕಲ್ ಸೈನ್ಸ್ ನಲ್ಲಿ ಮೆಡಿಕಲ್ ವಿಂಡೋ ಥಿಯರಿ ಅಂತ ಇದೆ ಅಂದರೆ .ನೀವು ಜಿಮ್ನಲ್ಲಿ ಮಿತಿಮೀರಿ ವರ್ಕೌಟ್ ಮಾಡಿದರೆ ಏನಾದರೂ ತೊಂದರೆ ಆದರೆ proper ರಿಕವರಿ ಕೂಡ ಮೊದಲೇ ಗೊತ್ತಿರಬೇಕು.
ವಾಕಿಂಗ್ ಮಾಡುವ ಸರಿಯಾದ ವಿಧಾನ ಯಾವುದು?
ನಡೆಯಬೇಕಾದರೆ ಯಾವಾಗಲೂ ನಿರಂತರವಾಗಿ ಕೆಳಗೆ ಆಂಡ್ರೆ ಕಾಲು ಆಂಡ್ರೆ ನಿಮ್ಮ ಪಾದ ಅದನ್ನು ನೋಡುವಷ್ಟು ಬಗ್ಗಿಕೊಂಡು ನಡೆಯಬಾರದು ನಿಮ್ಮ ತಲೆ ಮತ್ತು ದೃಷ್ಟಿ ನಡೆಯಬೇಕಾದರೆ ಕಂಟಿನ್ಯೂಸ್ ಆಗಿ ಕೆಳಗೆ ಅಂದ್ರೆ ಕಾಲು ಅಂದ್ರೆ ನಿಮ್ಮ ಪಾದ ಅದನ್ನು ನೋಡುವಷ್ಟು ಬಗ್ಗಿಕೊಂಡು ನಡೆಯಬಾರದು. ನಿಮ್ಮ ದೃಷ್ಟಿ ಯಾವಾಗಲೂ 10ರಿಂದ 20 ಅಡಿ ಮುಂದಕ್ಕೆ ಇರಬೇಕು .ಕೆಲವರು ಕಾಟಾಚಾರಕ್ಕೆ ವಾಕಿಂಗ್ ಮಾಡುತ್ತಾರೆ. ಕೆಲವರು ವಾಕಿಂಗ್ ಗೆ ಹೋಗಿ ಮೊಬೈಲ್ ಕೈಯಲ್ಲಿ ಹಿಡ್ಕೊಂಡು ಕೆಳಗೆ ನೋಡ್ಕೊಂಡು ಹೋಗುತ್ತಿರುತ್ತಾರೆ.ಎಷ್ಟು ಅಂತ ಅಂದರೆ ಎದುರಿಗೆ ಏನಾದರೂ ಗುಂಡಿ ಸಿಕ್ಕಿದರು,ಯಾರಾದರೂ ಅಡ್ಡ ಬಂದರು ತಲೆ ಎತ್ತುವುದಿಲ್ಲ.ಈ ರೀತಿ ನಡೆಯುವುದರಿಂದ ಕುತ್ತಿಗೆ ಮತ್ತು ಸ್ಪೈನಲ್ ಕಾರ್ಡ್ ಗೆ ತುಂಬ ಒತ್ತಡ ಹಾಕುತ್ತದೆ.ಕತ್ತು ನೋವು ಬೆನ್ನುನೋವು ಕಾಣಿಸಿಕೊಳ್ಳುತ್ತದೆ.ಹೆಜ್ಜೆ ಇಡುವ ರೀತಿ ತುಂಬ ಮುಖ್ಯ.ನೆಲಕ್ಕೆ ಮೊದಲು ನಿಮ್ಮ ಹಿಮ್ಮಡಿ ತಾಗಬೇಕು ಆಮೇಲೆ ಪಾದದ ಮೂಲಕ ರೋಲ್ ಆಗಿ ಕೊನೆಗೆ ಕಾಲು ಬೆರಳುಗಳಿಂದ ಹೆಬ್ಬೆರಳಿನಿಂದ ಮುಂದಕ್ಕೆ ಪುಶ್ ಮಾಡಬೇಕು.ಕೆಲವರು ಚಪ್ಪಟೆ ಪಾದವನ್ನು ನೆಲಕ್ಕೆ ಅಪ್ಪಳಿಸಿ ಅಪ್ಪಳಿಸುತ್ತ ನಡೆದುಕೊಂಡು ಹೋಗುತ್ತಾರೆ.ಅವರು ನಡೆಯಬೇಕಾದರೆ ಭೂಕಂಪ ಆದಹಾಗೆ ಅನಿಸುತ್ತದೆ. ಫ್ಲೋರ್ ನಲ್ಲಿ ತಿಳಿಯುತ್ತದೆ ಇವ್ರು ವಾಕ್ ಮಾಡ್ತಾ ಇದಾರೆ ಅಂತ.ಈ ರೀತಿ ನಡೆಯಬಾರದು ಈ ರೀತಿ ನಡೆಯುವುದರಿಂದ ಶಾಕ್ ನೇರವಾಗಿ ಬೆನ್ನುಹುರಿಗೆ ಹೋಗುತ್ತದೆ.ಕೈಗಳ ಚಲನೆ ನಡೆಯಬೇಕಾದರೆ ಕೈಗಳನ್ನು ಸುಮ್ಮನೆ ಜೋತು ಬಿಡಬಾರದು. ನಿಮ್ಮ ಮೊಣಕೈಗಳು 90ಡಿಗ್ರಿ ಆಂಗಲ್ನಲ್ಲಿ ಮಡಚಿರಬೇಕು ಅಂದರೆ ಸರಿಯಾಗಿ ಎಲ್ ಶೇಪ್ನಲ್ಲಿ ಇರಬೇಕು. ಬಲಗಾಲು ಮುಂದಿಟ್ಟಾಗ ಎಡಗೈ ಮುಂದೆ ಬರಬೇಕು.ಹೀಗೆ ಪಂಪ್ ಮಾಡುತ್ತಾ ದೇಹಕ್ಕೆ ಒಳ್ಳೆಯ ಮೊಮೆಂಟಂ ಸಿಗುತ್ತದೆ.ಜೊತೆಗೆ ಹೊಟ್ಟೆಯ ಸ್ನಾಯುಗಳು ಕೂಡ ಕೋರ್ ಮಸಲ್ಸ್ ಕೂಡ ಎಂಗೇಜ್ ಆಗುತ್ತವೆ.ಕಡೆಯದಾಗಿ ಸ್ಪೀಡ್ ನಾವು ಎಷ್ಟು ಸ್ಪೀಡ್ ಆಗಿ ನಡೆಯಬೇಕು ಇದಕ್ಕೆ ಸೈನ್ಸ್ ನಲ್ಲಿ ಟಾಕ್ ಟೆಸ್ಟ್ ಅಂತ ಕರೆಯುತ್ತಾರೆ. ಅಂದರೆ ನೀವು ನಡೆಯುವಾಗ ನಿಮ್ಮ ಪಕ್ಕದವರೊಂದಿಗೆ ಆರಾಮವಾಗಿ ಮಾತನಾಡುವುದಕ್ಕೆ ಆಗಬೇಕು ಅಂದರೆ ನೀವು ನಡೆಯುವಾಗ ಪಕ್ಕದವರೊಂದಿಗೆ ಮಾತನಾಡಲು ಆಗಬಾರದು ಅಂತ ಅಲ್ಲ.ಸ್ವಲ್ಪ ಮಾತನಾಡಲು ಆದರೆ ಸಾಕು .ಆದರೆ ಹಾಡು ಹೇಳಲು ಹೊರಟಾಗ ನಿಮಗೆ ಆಗುವುದಿಲ್ಲ ಆಗ ಉಸಿರು ಬಿಡಬೇಕಾಗುತ್ತದೆ.ಅಷ್ಟು ಫಾಸ್ಟ್ ಆಗಿ ನಡೆಯಬೇಕು. ಅದೇ ನಿಮ್ಮ ಪರ್ಫೆಕ್ಟ್ ಬ್ರಿಸ್ಕ್ ವಾಕ್ ಈ ವಾಕಿಗ್ ನಿಂದ ಸುಮಾರು ಐದರಿಂದ ಆರು ಕಿಲೋಮೀಟರ್ ವೇಗದಲ್ಲಿ ಇರುತ್ತೆ ಅಂದರೆ ನೀವು ಅದೇ ವೇಗದಲ್ಲಿ ನಡೆದರೆ ನೀವು ಒಂದು ಗಂಟೆಯಲ್ಲಿ ಐದರಿಂದ ಆರು ಕಿಲೋಮೀಟರ್ ತಲುಪಬಹುದು.ಅಥವಾ ನೂರು ಹೆಜ್ಜೆ ಒಂದು ನಿಮಿಷಕ್ಕೆ ಅಂದುಕೊಂಡು ಎಣಿಸಿಕೊಂಡು ಕೂಡ ನಡೆಯಬಹುದು.
ಹತ್ತು ಸಾವಿರ ಹೆಜ್ಜೆಗಳ ದೊಡ್ಡ ಸುಳ್ಳು
ಏನಿದು ಹತ್ತು ಸಾವಿರ ಹೆಜ್ಜೆಗಳ ದೊಡ್ಡ ಸುಳ್ಳು ವಿಜ್ಞಾನ ಏನು ಹೇಳುತ್ತದೆ, ಗೆಳೆಯರೇ ಹತ್ತು ಸಾವಿರ ಹೆಜ್ಜೆ ಅನ್ನುವುದನ್ನು ಯಾವುದೇ ಮೆಡಿಕಲ್ ಸೈನ್ಸ್ನಲ್ಲಿ ಹೇಳಿಲ್ಲ. ಇದು ಜಪಾನಿನ ಒಂದು ಕಂಪನಿ.ವಾಕಿಂಗ್ distance ಅಳತೆ ಮಾಡಲಿಕ್ಕೆ ಮೆಷಿನ್ ಅನ್ನು ಮಾರ್ಕೆಟಿಂಗ್ ಗೆ ಯೂಸ್ ಮಾಡಿದ ಗಿಮಿಕ್ ಅಷ್ಟೇ.ಹಾಗಾದ್ರೆ ನಿಜವಾಗಿ ಎಷ್ಟು ನಡೀಬೇಕು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಹದಿನಾಲ್ಕು ಸಾವಿರಕ್ಕೂ ಅಧಿಕ ವಯಸ್ಸಾದ ಮಹಿಳೆಯರ ಮೇಲೆ ಒಂದು ಬೃಹತ್ ಅಧ್ಯಯನ ನಡೆಸಿತು,ಈ ಅಧ್ಯಯನದ ಡೇಟಾ ಪ್ರಕಾರ ದಿನಕ್ಕೆ 4400ಕ್ಕಿಂತ ಜಾಸ್ತಿ ಹೆಜ್ಜೆ ನಡೆದವರಲ್ಲಿ ಅಕಾಲಿಕ ಮರಣದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು.ವಿಜ್ಞಾನದ ಪ್ರಕಾರ ಇಲ್ಲಿ ಪ್ಲಾಟೂ ಎಫೆಕ್ಟ್ ತುಂಬ ಮುಖ್ಯ.ಅಂದರೆ ನೀವು ನಾಲ್ಕು ಸಾವಿರದಿಂದ ಏಳುವರೆ ಸಾವಿರ ಸ್ಟೆಪ್ಸ್ ನಡೆದರೆ ನಿಮಗೆ ಆರೋಗ್ಯದ ಲಾಭಗಳು ಹೆಚ್ಚು ದೊರೆಯುತ್ತದೆ.ಅದಕ್ಕಿಂತ ಎಷ್ಟು ಹೆಚ್ಚು ನಡೆದರೂ ಕೂಡ ನಿಮಗೆ ಸಿಗುವ ಪ್ರಯೋಜನಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.ವಾರಕ್ಕೆ 150ನಿಮಿಷ ನಿಮ್ಮ ದೇಹ ಬೆವರುವಂತೆ ಆಕ್ಟಿವ್ ಆಗಿರಿ.ದಿನಕ್ಕೆ ಕನಿಷ್ಠ 30 ನಿಮಿಷ ಕಡ್ಡಾಯವಾಗಿ ವಾಕಿಂಗ್ ಮಾಡಿ.ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಅನ್ನುವುದನ್ನು ಮರೆಯಬೇಡಿ ಆದಷ್ಟು ವಾಕಿಂಗ್ ಮಾಡಿ ಖಾಯಿಲೆಗಳು ಬಾರದಂತೆ ತಡೆಯಿರಿ.
- Benifits of walking: ದಿನಾಲೂ ವಾಕಿಂಗ್ ಮಾಡುವುದರಿಂದ ಇಷ್ಟೆಲ್ಲ ಲಾಭ ಇದೆ ಅಂದ್ರೆ ನಂಬ್ತೀರಾ! ವಾಕಿಂಗ್ ಮಾಡುವ ಮುನ್ನ ಈ ಮಾಹಿತಿ ತಿಳಿದುಕೊಳ್ಳುವುದು ತುಂಬಾ ಮುಖ್ಯ - May 7, 2026
- Life changing tips: ನಿಮ್ಮLife ಲೈಫ್ ಚೇಂಜ್ ಆಗಲು ನಿಮ್ಮ ದಿನನಿತ್ಯದ ಜೀವನದಲ್ಲಿ ಇದನ್ನು ಅನುಸರಿಸಿ ಸಾಕು! ಇಷ್ಟು ಮಾಡಿದರೆ ನಿಮ್ಮ ಜೀವನ ಬದಲಾಗುವುದು ಖಂಡಿತ - May 1, 2026
- Best exercises for lower back pain relief at home: ಈ ವ್ಯಾಯಾಮಗಳನ್ನು ಮಾಡಿದರೆ ನಿಮ್ಮ ಸೊಂಟನೋವು ಖಂಡಿತ ಮಾಯ ಆಗುತ್ತದೆ,ಪೂರ್ತಿ ಮಾಹಿತಿ ಇಲ್ಲಿದೆ. - April 16, 2026