Life changing tips: ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.ಹೌದು ಎಲ್ಲರಿಗೂ ನಾನು ಜೀವನದಲ್ಲಿ ಸುಂದರಕ್ಷಣಗಳನ್ನು ಅನುಭವಿಸುತ್ತಾ ಆರೋಗ್ಯವಾಗಿ ನೆಮ್ಮದಿಯಾಗಿ ಬಾಳಿ ಬದುಕಬೇಕೆಂಬ ಬಯಕೆ ಇರುವುದು ಸರ್ವೇ ಸಾಮಾನ್ಯ ಅಲ್ಲವೇ? ಹಾಗಾದರೆ ಇಂತಹ ನೆಮ್ಮದಿಯ ಮತ್ತು ಆರೋಗ್ಯಕರ ಜೀವನವನ್ನು ಪಡೆಯಲು ಏನು ಮಾಡಬೇಕು, ಯಾವ ರೀತಿಯ ಚಟುವಟಿಕೆಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ತೊಡಗಿಸಿಕೊಳ್ಳಬೇಕು, ಎಂಬುದನ್ನು ಇಲ್ಲಿ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ
ಮುಂಜಾನೆಯ ಚಟುವಟಿಕೆಗಳು
ನಾವು ದಿನಾಲೂ ಬೆಳಗ್ಗೆ ಬೇಗನೆ ಏಳಬೇಕು. ಯಾಕಂದ್ರೆ ನಾವು ಎಷ್ಟು ತಡವಾಗಿ ಏಳುತ್ತೇವೋ ಅಷ್ಟು ಪ್ರಯೋಜನವನ್ನು ನಾವು ಕಳೆದುಕೊಳ್ಳುತ್ತೇವೆ. ಇಡೀ ಸೃಷ್ಟಿ ಮಂಡಲಕ್ಕೆ ಹಾಗೂ ನಮ್ಮ ದೇಹಕ್ಕೆ ದಿವ್ಯ ಚೈತನ್ಯವನ್ನು ತುಂಬುವ ಸಮಯ ಯಾವುದು ಗೊತ್ತಾ ಅದು ಬೆಳಗು, ಮುಂಜಾವು. ಕೆಲವರಿಗಂತೂ ಮುಂಜಾನೆಯ ವಾತಾವರಣ ಸವಿದು ಗೊತ್ತೇ ಇರುವುದಿಲ್ಲ ಮುಂಜಾನೆ ಅನ್ನುವುದು ಹೇಗೆ ಪ್ರಾರಂಭವಾಗುತ್ತದೆ ಅದನ್ನು ಹೇಗೆ ಕಳೆಯಬೇಕು ಎನ್ನುವುದು ಸಹ ತಿಳಿದಿರುವುದಿಲ್ಲ.ಯಾಕೆಂದರೆ ಏಳುವುದು ತುಂಬ ತಡ ಸೋಮಾರಿಗಳು ಆಗಿರುತ್ತಾರೆ.ತಡವಾಗಿ ಎದ್ದು ಬೇಗ ಬೇಗ ರೆಡಿ ಆಗಿ ಉಸಿರು ಮೇಲೆ ಕೆಳಗೆ ಬಿಡುತ್ತಾ ಕೈಯಲ್ಲಿ ಚಪ್ಪಲಿಯನ್ನು ಹಿಡಿದು ಓಟ ಓಡಿದ ಹಾಗೆ ಬೇಗ ಬೇಗನೆ ಕಚೇರಿಗೆ ಹೋಗುವುದು ಕೆಲವರ ದಿನಚರಿ. ಇನ್ನು ಮುಂಜಾನೆಯ ದಿನಚರಿ ಹೇಗಿರಬೇಕು ಏನೆಲ್ಲ ಮಾಡಬೇಕು ನಾವು ಮಾಡುತ್ತಿರುವ ಮಿಸ್ಟೇಕ್ಸ್ ಏನು? ಅದರಿಂದ ನಮ್ಮ ಜೀವನವನ್ನು ಹೇಗೆ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ನೋಡುತ್ತಾ ಹೋಗೋಣ.
ಸ್ನೇಹಿತರಿಗೆ ಮೊದಲಿಗೆ ಮುಂಜಾನೆ ಯಾಕೆ ಅಷ್ಟು ಮಹತ್ವವಾದುದು ಅಂತ ತಿಳಿದುಕೊಳ್ಳುವುದು ಮುಖ್ಯ ತುಂಬಾ ಜನರಿಗೆ ಬೆಳಗ್ಗೆ ಬೇಗ ಏಳಬೇಕು ಅನ್ನುವುದು ಆಧುನಿಕ ಪುರಾಣ ಅನ್ನಿಸಿದರೂ ಕೂಡ ನ್ಯೂರೋ ಸೈನ್ಸ್ ನ ಪ್ರಕಾರ ಬೆಳಗಿನ ಜಾವ ಗಂಟೆ 5 ರಿಂದ 7 ಗಂಟೆಯ ಸಮಯದಲ್ಲಿ ನಮ್ಮ ಮೆದುಳು ಆಲ್ಫಾ ಸ್ಟೇಟ್ ಆಫ್ ಮೈಂಡ್ ನಲ್ಲಿ ಇರುತ್ತದೆ.ಮೊದಲ ಇಪ್ಪತ್ತು ನಿಮಿಷಗಳಲ್ಲಿ ನಮ್ಮ ಮೆದುಳಿನ ವೇವ್ ಗಳು 8 ರಿಂದ 12 HZ ವೇಗಗಳಲ್ಲಿ ಚಲಿಸುತ್ತವೆ. ಅಂದರೆ ನಮ್ಮ ಮೈಂಡ್ ಅಷ್ಟು ಆಕ್ಟಿವ್ ಆಗಿ ಇರುತ್ತದೆ ಆದ್ದರಿಂದ ನಮ್ಮ ಇಡೀ ದಿನದ routine ಅನ್ನು ರೂಪಿಸಲು ಇದು ಸರಿಯಾದ ಸಮಯ, ಇನ್ನು ಬೆಳಗಿನ ಸಮಯ ನಮಗೆ ಹೆಚ್ಚಿನ ಒತ್ತಡವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ.ಮೆಂಟಲ್ ಕ್ಲಾರಿಟಿಯನ್ನು ಇಂಪ್ರೂವ್ ಮಾಡುತ್ತದೆ.ಬೆಳಗ್ಗೆ ಏನು ಮಾಡುತ್ತೇವೆ ಎನ್ನುವುದು ತುಂಬ ತುಂಬ ಮುಖ್ಯವಾಗುತ್ತದೆ.ಹಾಗಾದರೆ ಬೆಳಗ್ಗೆ ಎದ್ದು ಏನುಮಾಡಬೇಕು ಅನ್ನೋದಕ್ಕಿಂತ ಮೊದಲನೆಯದಾಗಿ ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳಿ.
ಅಲಾರಾಂ snooze ನಿಲ್ಲಿಸಿ
ಕೆಟ್ಟಗುಣ ಏನಂದ್ರೆ ಅಲಾರಾಂ ಆಗುತ್ತಿದ್ದ ಹಾಗೆ ಎದ್ದೇಳುವುದನ್ನು ಬಿಟ್ಟು ಇನ್ನೂ 10 ನಿಮಿಷ ಬಿಟ್ಟು ಏಳೋಣ ನಿದ್ದೆಯನ್ನು ಮಾಡೋಣ ಅಂತ snooze ಮಾಡಿಬಿಡುತ್ತೀರಿ.ಹತ್ತು ನಿಮಿಷ ಹತ್ತು ನಿಮಿಷ ಅಂತ ಅಲಾರಾಂ ಆಗುತ್ತಲೇ ಇರುತ್ತದೆ. ಸೂರ್ಯ ನೆತ್ತಿಯ ಮೇಲೆ ಬಂದಿರುತ್ತಾನೆ.ಹೀಗಾಗಿ ನೀವು ಹತ್ತು ನಿಮಿಷ ಹೆಚ್ಚು ಮಲಗುವುದರಿಂದ ನಿಮಗೇನು ಲಾಭ ಇಲ್ಲ.ಹೀಗಾಗಿ ಅಲಾರಂನ snooze ಗೆ ಹಾಕಿ ಮಲಗುವುದನ್ನು ನಿಲ್ಲಿಸಿ.ಆದಷ್ಟು ಅಲಾರಂನ ದೂರ ಇಟ್ಟುಕೊಳ್ಳಿ. ಇನ್ನು ಪಕ್ಕದ ಕೋಣೆಯಲ್ಲಿ ಇಟ್ಟರೆ ಇನ್ನೂ ಉತ್ತಮ ಸಮಯವನ್ನು ನಿಗದಿಸಿ ನಂತರ ಮಲಗಿ.ಯಾವ ಟೈಮ್ ನಿಮಗೆ ಹೊಂದಾಣಿಕೆ ಆಗುತ್ತದೆ ಎಂದು ನೋಡಿಕೊಂಡು ಸಮಯವನ್ನು ಸೆಟ್ ಮಾಡಿ.ಇನ್ನೂ ರಾತ್ರಿ ಸಮಯ ಕೆಲಸ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ.ರೆಗ್ಯುಲರ್ ಶಿಫ್ಟ್ ನಲ್ಲಿ ಯಾರು ಇರುತ್ತಾರೋ ಅವರಿಗೆ ಇದು ಅನ್ವಯವಾಗುತ್ತದೆ.
ನೀರು ಕುಡಿಯುವುದು
ಏನ್ರೀ ಇದು ಅಂತ ಕೇಳೋರಿಗೆ ಇದು ಸಿಂಪಲ್ ಅಂತ ಅನಿಸಬಹುದು. ಎಷ್ಟು ಜನ ಇದನ್ನು ಫಾಲೋ ಮಾಡ್ತಾ ಇದೀರಾ ಬೆಳಿಗ್ಗೆ ಎದ್ದು ಹಲ್ಲು ಉಜ್ಜದಿದ್ದರೂ ಬರೀ ನೀರಿನಲ್ಲಿ ಬಾಯಿ ಮುಕ್ಕಳಿಸಿ ಕುಡಿಯುವ ಅಭ್ಯಾಸ ಕೆಲವರಿಗಷ್ಟೇ ಇದೆ. ಆದರೆ ಸ್ನೇಹಿತರೇ ಇದು ತುಂಬ ಮುಖ್ಯವಾದದ್ದು ಎದ್ದಾಗ ನಮ್ಮ ದೇಹ dehydrate ಆಗಿರುತ್ತದೆ ಕಳೆದ 7ರಿಂದ ಎಂಟು ಗಂಟೆಗಳ ಕಾಲ ನಿಮ್ಮ ದೇಹಕ್ಕೆ ನೀರು ಸರಿಯಾಗಿ ಸಿಕ್ಕಿರುವುದಿಲ್ಲ, ಹಾಗಾಗಿ ನೀರು ಕುಡಿದರೆ ಮೆಟಬಾಲಿಸಮ್ ಚಟುವಟಿಕೆಗಳು ಪ್ರಾರಂಭವಾಗುತ್ತದೆ.ಅಲ್ಲದೆ ದೇಹದಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಿ ನಿಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ಹೀಗಾಗಿ ರಾತ್ರಿಯೆ ಮಲಗುವ ಮೊದಲು ನಿಮ್ಮ ಹಾಸಿಗೆಯ ಪಕ್ಕ ಒಂದು ಲೋಟ ನೀರನ್ನು ಇರಿಸಿದರೆ ಬೆಳಗ್ಗೆ ಎದ್ದ ತಕ್ಷಣ ನೀವು ಅದನ್ನು ಕುಡಿಯಬಹುದು.ಸೂರ್ಯನ ಕಿರಣ ತುಂಬ ಮುಖ್ಯ,ಬೆಳಗ್ಗೆ ಎದ್ದ ತಕ್ಷಣ ಮೊದಲ ಒಂದು ಗಂಟೆಯಲ್ಲಿ ನೈಸರ್ಗಿಕ ಸೂರ್ಯನ ಕಿರಣವನ್ನು ಪಡೆಯುವುದು ತುಂಬ ಮುಖ್ಯ. ನಮ್ಮ ಕಣ್ಣಿಗೆ ಸೂರ್ಯನ ಕಿರಣಗಳು ಬೀಳಬೇಕು. ಒಂದು ವೇಳೆ ಸೂರ್ಯ ಬರುವ ಮೊದಲೇ ಎದ್ದರೆ ಲೈಟ್ ಹಾಕಿಕೊಳ್ಳಿ.ಐದರಿಂದ ಹತ್ತು ನಿಮಿಷಗಳ ಕಾಲ ನೈಸರ್ಗಿಕ ಸೂರ್ಯನ ಕಿರಣ ಬೀಳಲೇಬೇಕು.ಯಾಕೆಂದರೆ ಈ ಟೈಮ್ನಲ್ಲಿ ಕಾರ್ಟಿಸೋಲ್ ಎನ್ನುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ.ಈ ಹಾರ್ಮೋನ್ ನಮ್ಮ ದೇಹದ ಟೆಂಪರೇಚರ್ ಸೆಟ್ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ದೇಹದಲ್ಲಿ ಪ್ರತಿ ಗಂಟೆಗೂ ಉತ್ಪತ್ತಿಯಾಗುತ್ತದೆ ಆದರೆ ಜಾಸ್ತಿ ಬೆಳಗಿನ ಜಾವದಲ್ಲಿ ಸೂರ್ಯನ ಕಿರಣಗಳು ಈ ಕಾರ್ಟಿಸೋಲ್ ಅನ್ನು ಸ್ಪೈಕ್ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಬೇಗ ಎದ್ದರೂ ಈ ಸೂರ್ಯನ ಕಿರಣ ನಿಮ್ಮ ದೇಹದಮೇಲೆ ಬೀಳಲು ಆಗದೆ ಇದ್ದಾಗ ಸ್ಪೈಕ್ ಆಗೋದು ತಡ ಆಗುತ್ತದೆ ಹಾಗೆ ಟೆಂಪರೇಚರ್ ಕೂಡ ತಡವಾಗಿ ತೋರಿಸುತ್ತದೆ.ಹೀಗಾಗಿ ನಿಮಗೆ ಬೇಗ ಎದ್ದರೂ ಕೂಡ ಎನರ್ಜಿ ಇರುವುದಿಲ್ಲ.ನೀವು ಎಷ್ಟು ಗಂಟೆಗೆ ಮಲಗುತ್ತೀರಾ ಎಷ್ಟು ಗಂಟೆಗೆ ಏಳುತ್ತೀರಾ ಎನ್ನುವುದು ಕೂಡ ಪರಿಣಾಮವನ್ನು ಬೀರುತ್ತದೆ.ಕಣ್ಣಿನಲ್ಲಿ ಮೆಲನೊಪ್ಸಿನ್ ಹೊಂದಿರುವ ಗ್ಯಾಂಗ್ಲಿಯನ್ ಕೋಶಗಳು ಇರುತ್ತವೆ,ಸೂರ್ಯನ ಕಿರಣಗಳು ಬಿದ್ದಾಗ ತಕ್ಷಣ ಮೆದುಳಿನಲ್ಲಿರುವ ಹೈಪೊಥಲಾಮಸ್ ಗೆ ಸಿಗ್ನಲ್ ಕೊಡುತ್ತವೆ.ಈ hypothalamus ಪೆಪ್ಟೈಡ್ಗಳನ್ನು ಬಿಡುಗಡೆ ಮಾಡಿ ನಿಮಗೆ ಎದ್ದೇಳುವಂತೆ ಸೂಚನೆಗಳನ್ನು ನೀಡುತ್ತದೆ.ಇಷ್ಟೇ ಅಲ್ಲದೆ ಅಲ್ಲಿಂದ ಹದಿನಾರು ಗಂಟೆಗಳ ನಂತರ ಮೆಲಟೋನಿನ್ ರಿಲೀಸ್ ಆಗುವಂತೆ ಟೈಮರ್ ಕೂಡ ಸೆಟ್ ಮಾಡುತ್ತದೆ. ಮೆಲಟೋನಿನ್ ನಿಮಗೆ ನಿದ್ದೆ ಬರುವಂತೆ ಮಾಡುತ್ತದೆ.ಬೆಳಗ್ಗೆ ಬೇಗ ಎದ್ದು ಆಗ ತಾನೇ ಸೂರ್ಯ ಉದಯಿಸುತ್ತಿರುವ ಬೆಳಕನ್ನು ಕಣ್ಣಿಗೆ ತುಂಬಿಸಿಕೊಳ್ಳುತ್ತಾ ನೇರವಾಗಿ ಸೂರ್ಯನನ್ನು ನೋಡಿ ಎಂದು ಅರ್ಥ ಅಲ್ಲ ಒಟ್ಟಿನಲ್ಲಿ ಸೂರ್ಯನ ಬೆಳಕು ನಿಮ್ಮ ದೇಹ ಮತ್ತು ಕಣ್ಣಿಗೆ ಬೀಳಬೇಕು ಅಷ್ಟೇ, ಆ ರೀತಿ ಬೀಳುವುದರಿಂದ ಡೋಪಮೈನ್ ಕೂಡ ರಿಲೀಸ್ ಆಗುತ್ತದೆ ಡೋಪಮೈನ್ ಫೀಲ್ ಗುಡ್ ಹಾರ್ಮೋನ್ ಅಂದರೆ ಸುಖ ತೃಪ್ತಿ ಭಾವನೆಯನ್ನು ಕೊಡುವ ಹಾರ್ಮೋನ್ ಆದರೆ ಡೋಪಮೈನ್ ನ ಮುಖ್ಯ ಕೆಲಸ ಒತ್ತಡವನ್ನು ಕೊಡುವುದಿಲ್ಲ ಬದಲಿಗೆ motivation attention ಕ್ರಿಯೇಟ್ ಮಾಡುವುದು ಹೀಗಾಗಿ ಸೂರ್ಯನ ಕಿರಣದಿಂದ ನಿಮಗೆ ಜೀವನದಲ್ಲಿ motivation ಸಿಗುತ್ತದೆ ಬೆಳಗ್ಗೆ ಎದ್ದು ಹತ್ತು ನಿಮಿಷ ನಡೆದಾಡಿ ಕೂಡ ನಿಮ್ಮ ದಿನಚರಿಯನ್ನು ಪ್ರಾರಂಭಿಸಬಹುದು.ಮನೆಯಲ್ಲಿ ಬಾಲ್ಕನಿ ಇದ್ದರೆ ಅಲ್ಲಿ ಕಿರಣಗಳನ್ನು ಪಡೆದುಕೊಳ್ಳಬಹುದು.ಮರಗಿಡಗಳ ವಾತಾವರಣವನ್ನು ಸವಿಯಬಹುದು.ಚಟುವಟಿಕೆಗಳು ಜಗತ್ತಿನಲ್ಲಿ ಶುರುವಾಗಿದೆ ಎಂಬುದು ನಮ್ಮ ಮೆದುಳಿನಲ್ಲಿ ಅಚ್ಚು ಒತ್ತಿದಂತೆ ಇರುತ್ತದೆ. ಇಲ್ಲ ಅಂದರೆ ನೀವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ನೀರು ಕುಡಿಯುತ್ತ ಕಿಟಕಿಯ ಬಳಿ ಕುಳಿತು ಸೂರ್ಯನ ಬೆಳಕನ್ನು ಪಡೆಯಬಹುದು.
ಟೀ ಕಾಫಿಗೆ ಕಡಿವಾಣ
ಬೆಳಗ್ಗೆ ಎದ್ದ ತಕ್ಷಣ ಕಾಫಿ ಟೀ ಕುಡಿಯುವುದು ಕೂಡ ಅಷ್ಟು ಸೂಕ್ತವಲ್ಲ. ಕನಿಷ್ಠ ಒಂದು ಒಂದೂವರೆ ಗಂಟೆ ಕಾದು ಆಮೇಲೆ ಕುಡಿಯುವುದು ಒಳ್ಳೆಯದು ಯಾಕೆಂದರೆ ಎಚ್ಚರವಿದ್ದಾಗ ದೇಹದಲ್ಲಿ ಅಡೆನೋಸಿನ್ ಕ್ರಿಯೇಟ್ ಆಗುತ್ತಿರುತ್ತದೆ. ನಿದ್ದೆ ಮಾಡಬೇಕು ಅನ್ನುವ ಒತ್ತಡವನ್ನು ಹಾಕುತ್ತದೆ. ಎಚ್ಚರವಿದ್ದಷ್ಟು ಒತ್ತಡ ಜಾಸ್ತಿ ಆಗುತ್ತಾ ಹೋಗುತ್ತದೆ.ಆದರೆ ಮಲಗಿದ್ದಾಗ ನಮ್ಮ ದೇಹ ಈ ಅಡೆನೊಸೀನ್ ನ ಕ್ಲಿಯರ್ ಮಾಡುತ್ತದೆ.ಹಾಗಾಗಿ ಎದ್ದ ಕೂಡಲೇ ನಮಗೆ ಫ್ರೆಷ್ ಫೀಲ್ ಆಗುತ್ತದೆ ಈ ಕಾಫಿ ಯಲ್ಲಿರುವ ಕೆಫೀನ್ ಅಡೆನೊಸಿನ್ ಎಫೆಕ್ಟನ್ನೂ ಕಡಿಮೆ ಮಾಡುತ್ತದೆ. ಅಂದರೆ ನೀವು ಎದ್ದಾಗ ಅಡೆನೊಸೀನ್ ಕ್ಲಿಯರ್ ಆಗುತ್ತಾ ಇರುತ್ತದೆ ಅದೇ ಸಮಯದಲ್ಲಿ ನೀವು ಕಾಫಿ ಅಥವಾ ಟೀ ಕುಡಿದರೆ ಕೆಫೀನ್ a ಅಡೆನೊಸೀನ್ ಅನ್ನು ತಡೆಹಿಡಿದು ನಿಮ್ಮನ್ನು ಅಲರ್ಟ್ ಮಾಡುತ್ತದೆ ನೀವು ಆಕ್ಟಿವ್ ಆಗುತ್ತೀರಾ ಆದರೆ ಆ ಕೆಫೀನ್ ಎಫೆಕ್ಟ್ ಮುಗಿದ ತಕ್ಷಣ ಉಳಿದುಕೊಂಡಿರುವ ಹಾಗೂ ಉತ್ಪತ್ತಿಯಾಗುವ ಅಡೆನೊಸಿನ್ ಸೇರಿಕೊಂಡು ಮಧ್ಯಾಹ್ನ ಮತ್ತೆ ನಿಮಗೆ ನಿದ್ದೆ ಬರುವಂತೆ ಮಾಡುತ್ತದೆ. ಜಿಮ್ ಗೆ ಹೋಗುವವರು ಒಂದು ಗಂಟೆ ಮೊದಲು ಎದ್ದು ಫ್ರೆಷ್ ಆಗಿ ನೀರು ಕುಡಿದು ಸ್ವಲ್ಪ ಸೂರ್ಯನ ಬೆಳಕು ತೆಗೆದುಕೊಂಡು ನಿಮ್ಮ ದಿನನಿತ್ಯದ ಚಟುವಟಿಕೆಯ ಯೋಜನೆಗಳನ್ನು ಮಾಡಿಕೊಳ್ಳಿ.ನಂತರ ಬೇಕಾದರೆ ನೀವು ಕೆಫೀನ್ ಸೇವಿಸಿ ವರ್ಕೌಟ್ ಮಾಡಲು ಹೋಗಬಹುದು.
ವ್ಯಾಯಾಮಗಳು
ಬೆಳಗಿನ ಜಾವ ನಿಮ್ಮ ದೇಹಕ್ಕೆ ಒಂದಿಷ್ಟು ವ್ಯಾಯಾಮ ಕೊಡುವುದು ಕೂಡ ತುಂಬ ಮುಖ್ಯ,ವಾಕಿಂಗ್,ವರ್ಕೌಟ್, ಯೋಗ ಹೀಗೆ ಏನಾದರೂ ಒಂದು ದೈಹಿಕ ಚಟುವಟಿಕೆಯಲ್ಲಿ ಕನಿಷ್ಠ ಅರ್ಧ ಗಂಟೆ ಕಳೆಯಬೇಕು.ಇದರಿಂದ ನಮ್ಮ ದೇಹವು ಫಿಟ್ ಆಗಿರುವಂತೆ ಮಾಡುತ್ತದೆ, ಜೊತೆಗೆ ನಮ್ಮ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುವಂತೆ ಮಾಡುತ್ತದೆ.ಮೆದುಳಿಗೆ ಹೊಸ ರಕ್ತ ಹರಿಯುವುದರಿಂದ ನಾವು ಆಕ್ಟಿವ್ ಆಗುತ್ತೇವೆ.ವ್ಯಾಯಾಮ ಮಾಡುವುದನ್ನು ನಮ್ಮ ಜೀವನದ ಒಂದು ಭಾಗವಾಗಿ ಮಾಡಿಕೊಳ್ಳಬೇಕು.ದಿನಾಲೂ ನಾವು ಆಹಾರವನ್ನು ತಪ್ಪದೆ ಸೇವಿಸುತ್ತೇವೆ ಹಾಗೆಯೇ ವ್ಯಾಯಾಮವನ್ನು ಕೂಡ ದಿನ ಮಾಡಬೇಕು.
ತಣ್ಣೀರು ಸ್ನಾನ
ಇದು ಕಡ್ಡಾಯವಲ್ಲ, ನಮ್ಮ ದೇಹ ಒಂದು ಉಷ್ಣತೆಯ routine ಅನ್ನು ಅನುಸರಿಸುತ್ತದೆ.ನಾವು ಬೆಳಗ್ಗೆ ಎದ್ದೇಳುವ ಮೊದಲು ನಮ್ಮ ಇಡೀ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅತ್ಯಂತ ಕಡಿಮೆ ತಾಪಮಾನವನ್ನು ಹೊಂದಿರುವ ಸಮಯವಾಗಿರುತ್ತದೆ.ನಾವು ಎದ್ದ ಹಾಗೆ ದೇಹದ ಉಷ್ಣತೆ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.ಎದ್ದೇಳುವಾಗ ಉಷ್ಣತೆ ಹೆಚ್ಚು ಮಾಡಬೇಕು ಮಲಗುವಾಗ ದೇಹದ ಉಷ್ಣತೆ ಕಡಿಮೆ ಮಾಡಬೇಕು ಹಾಗಾಗಿ ಬೆಳಗ್ಗೆ ಎದ್ದು ತಣ್ಣೀರಿನಲ್ಲಿ ಸ್ನಾನ ಮಾಡಬೇಕು ದೇಹದ ಉಷ್ಣತೆ ಆಗ ಹೆಚ್ಚಾಗುತ್ತದೆ.
ಬೆಳಗಿನ ಆಹಾರ
ಬೆಳಗ್ಗೆ ನ್ಯೂಟ್ರಿಷನ್ ಭರಿತ ಆಹಾರವನ್ನು ಸೇವಿಸುವುದು ಉತ್ತಮ. ಹಾಗಂತೆ ಭರ್ಜರಿ ಊಟ ಮಾಡಬೇಕೆಂದಿಲ್ಲ. ಓಟ್ಸ್ ಫ್ರೂಟ್ಸ್ ಆದರೂ ಕೂಡ ನಡೆಯುತ್ತೆ.ಆದರೆ ಏನೇ ಆಹಾರ ತೆಗೆದುಕೊಂಡರು ಸಹ nutritious ಆಗಿ ತೆಗೆದುಕೊಳ್ಳಿ.ಜಂಕ್ ಇಲ್ಲದೆ ಇರುವ ಆಹಾರವನ್ನು ಸೇವಿಸಿ ಅದರಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇರಲಿ ಕಾರ್ಬೋಹೈಡ್ರೇಟ್ಸ್ ಇರಲಿ ಫೈಬರ್ ಕೂಡ ಇರಲಿ ನಿಮ್ಮ ದೇಹಕ್ಕೆ ಯಾವುದು ಉತ್ತಮ ಎಂದು ತಿಳಿದುಕೊಂಡು ಉತ್ತಮ ಆಹಾರವನ್ನು ಸೇವಿಸಿ.
- Benifits of walking: ದಿನಾಲೂ ವಾಕಿಂಗ್ ಮಾಡುವುದರಿಂದ ಇಷ್ಟೆಲ್ಲ ಲಾಭ ಇದೆ ಅಂದ್ರೆ ನಂಬ್ತೀರಾ! ವಾಕಿಂಗ್ ಮಾಡುವ ಮುನ್ನ ಈ ಮಾಹಿತಿ ತಿಳಿದುಕೊಳ್ಳುವುದು ತುಂಬಾ ಮುಖ್ಯ - May 7, 2026
- Life changing tips: ನಿಮ್ಮLife ಲೈಫ್ ಚೇಂಜ್ ಆಗಲು ನಿಮ್ಮ ದಿನನಿತ್ಯದ ಜೀವನದಲ್ಲಿ ಇದನ್ನು ಅನುಸರಿಸಿ ಸಾಕು! ಇಷ್ಟು ಮಾಡಿದರೆ ನಿಮ್ಮ ಜೀವನ ಬದಲಾಗುವುದು ಖಂಡಿತ - May 1, 2026
- Best exercises for lower back pain relief at home: ಈ ವ್ಯಾಯಾಮಗಳನ್ನು ಮಾಡಿದರೆ ನಿಮ್ಮ ಸೊಂಟನೋವು ಖಂಡಿತ ಮಾಯ ಆಗುತ್ತದೆ,ಪೂರ್ತಿ ಮಾಹಿತಿ ಇಲ್ಲಿದೆ. - April 16, 2026