



Best exercises for lower back pain relief at home
ಬಹಳಷ್ಟು ಜನರಿಗೆ ಬೆನ್ನು ಬಿಡದೆ ಕಾಡುತ್ತಿರುವ ಸಮಸ್ಯೆ ಅಂದರೆ ಸೊಂಟ ನೋವು.ನಾವೀಗ ತಂತ್ರಜ್ಞಾನ ಹೊಂದಿರುವ ಆಧುನಿಕ ಜಗತ್ತಿನಲ್ಲಿದ್ದೇವೆ.ಮಕ್ಕಳಿಂದ ಹಿಡಿದು ವಯಸ್ಕರು, ವಯೋವೃದ್ಧರಿಗೂ ಕಾಡುತ್ತಿದೆ ಸೊಂಟ ನೋವಿನ ಸಮಸ್ಯೆ.ಇದರಿಂದ ಮುಕ್ತಿ ಹೊಂದಲು ಈ ವ್ಯಾಯಾಮಗಳನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಿ ತಡ ಮಾಡದೆ ಇವತ್ತಿನಿಂದಲೇ ವ್ಯಾಯಾಮವನ್ನು ಪ್ರಾರಂಭಿಸಿ.ಸೊಂಟನೋವಿನಿಂದ ಮುಕ್ತಿಯನ್ನು ಪಡೆದುಕೊಳ್ಳಿ.
ಸೊಂಟ ನೋವು ಯಾಕೆ ಬರುತ್ತದೆ?
ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಹಲವು ಮಂದಿಯಲ್ಲಿ ಸೊಂಟನೋವು ಕಾಣಿಸುವುದು ಸಾಮಾನ್ಯ ಯಾಕೆಂದರೆ ಮೊದಲೆಲ್ಲ ಮನೆಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು ಮತ್ತು ಆಗ ತಂತ್ರಜ್ಞಾನ ಮುಂದುವರೆಯದೇ ಇದ್ದಿದ್ದರಿಂದ ಸಾಮಾನ್ಯ ಕೆಲಸಗಳಾದ ಬಟ್ಟೆಯನ್ನು ಕೈಗಳಿಂದ ಒಗೆಯುತ್ತಿದ್ದರು,ಆದರೆ ಈಗ ಕಾಲ ಮತ್ತು ಜನ ಎಲ್ಲವೂ ಬದಲಾಗಿರುವುದರಿಂಗ ವಾಷಿಂಗ್ ಮಷೀನ್ ಬಳಸುತ್ತಿದ್ದಾರೆ ಇದರಿಂದ ಬಗ್ಗಿ ಬಟ್ಟೆ ತೊಳೆಯದ ಕಾರಣ ಅಪರೂಪಕ್ಕೆ ಒಮ್ಮೆ ಮಷೀನ್ ಕೆಟ್ಟಾಗ ಕೈಯಲ್ಲಿ ಒಗೆದರೆ ಸೊಂಟ ಹಿಡಿದುಕೊಂಡಂತೆ ಅನುಭವ ಆಗುತ್ತದೆ.ಒಂದು ಕ್ಷಣ ಜೀವವೇ ಹೊರಟು ಹೋದಂತೆ ಆಗುತ್ತದೆ.ಇನ್ನೂ ಮೊದಲೆಲ್ಲ ಬೆಳಗ್ಗೆ ತಿಂಡಿ ಮಾಡಲು ಹಿಟ್ಟನ್ನು ಕಲ್ಲಿನಲ್ಲಿ ತುಂಬುತ್ತಿದ್ದರು.ಮಸಾಲೆಯನ್ನು ಕೂಡ ಕಲ್ಲಿನಲ್ಲಿ ತುಂಬುತ್ತಿದ್ದರು ಇದರಿಂದ ದೇಹಕ್ಕೆ ಎಡೆ ಬಿಡದೆ ಕೆಲಸ ಸಿಗುತ್ತಿತ್ತು ಇದಕ್ಕೆ ಸರಿಯಾಗಿ ನಮ್ಮ ದೇಹವು ಕೂಡ ಹೊಂದಿಕೊಳ್ಳುತ್ತಿತ್ತು.ಈಗ ಅದಕ್ಕೂ ಕೂಡ mixer grinder ಬಂದಿದೆ.
ಇನ್ನು ಹೊರಗಡೆ ದುಡಿಯುವವರ ವಿಷಯಕ್ಕೆ ಬಂದರೆ ಆಫೀಸಿನಲ್ಲಿ ಕುಳಿತುಕೊಂಡು ಕಂಪ್ಯೂಟರ್ ಮುಂದೆ ತಣ್ಣಗೆ AC ಕೆಳಗೆ ದುಡಿಯುತ್ತಿರುವರ ಕೆಲಸ ನೋಡುವವರ ಕಣ್ಣಿಗೆ ಮಾತ್ರ ಆರಾಮದಾಯಕ ಕೆಲಸ . ಅಯ್ಯೋ ಅವರು ಬಿಡ್ರಿ AC ಕೆಳಗೆ ಹಾಯಾಗಿ ಕೆಲಸ ಮಾಡಿ ಕೈತುಂಬ ಸಂಬಳ ತಗೊಳ್ತಾರೆ ಅಂತಾರೆ ನೋಡಿದವರು.ಆದರೆ ಪಾಪ ಅವರ ಕಷ್ಟ ಅವರಿಗೆ ಗೊತ್ತು.ಅದಕ್ಕೆ ಹೇಳಿದರೆ ಅನ್ಸುತ್ತೆ ಪುಸ್ತಕದ ಕವಚ ನೋಡಿ ಅದನ್ನು ಜಡ್ಜ್ ಮಾಡಬಾರದು ಅಂತ.ಗಣಕಯಂತ್ರದ ಮುಂದೆ ಯಂತ್ರದ ಹಾಗೆ ದಿನವಿಡೀ ಕೆಲಸ ಮಾಡಿ ಒಂದೇ ಕಡೆ ಕುಳಿತುಕೊಳ್ಳುವುದರಿಂದ ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರು ಬಲವಾದ ಕೆಲಸ ಮಾಡಿ ಅಭ್ಯಾಸ ಇಲ್ಲದಿದ್ದರೆ ಒಮ್ಮೆಲೇ ತುಂಬ ಭಾರ ಎತ್ತಿದಾಗ ಸೊಂಟ ಉಳುಕುತ್ತದೆ. ಇನ್ನು ಕೆಲವರ ದಿನಚರಿ ಹೇಳುವುದೇ ಬೇಡ ತಿನ್ನುತ್ತಾರೆ ಆಫೀಸು ಕೆಲಸ ಮುಗಿಸಿ ಬಂದು ಮತ್ತೆ ರಾತ್ರಿ ತಿಂದು ಮಲಗುತ್ತಾರೆ ಅಂತವರಿಗೆ ಬೊಜ್ಜು ಕೂಡ ಬರುತ್ತದೆ,ಎಷ್ಟು ಸೋಮಾರಿಗಳು ಆಗಿರುತ್ತಾರೆ ಅಂದ್ರೆ ಅವರು ಒಂದು ದಿನ ಕೂಡ ವ್ಯಾಯಾಮಗಳನ್ನು ಮಾಡುವುದಿಲ್ಲ,ಇದರಿಂದಾಗಿ ದೇಹವು ಬೇಗ ಆಯಾಸಗೊಳ್ಳುತ್ತದೆ.ನಾವು ತೆಗೆದುಕೊಳ್ಳುವ ಆಹಾರವು ಈಗ ಅಷ್ಟೇನೂ ಪೌಷ್ಟಿಕತೆಯನ್ನು ಹೊಂದಿಲ್ಲ. ಅದರಲ್ಲೂ ಐಟಿ ನಲ್ಲಿ ಕೆಲಸ ಮಾಡುವವರು ಜಂಕ್ ಫುಡ್ ತಿನ್ನುತ್ತಾರೆ.ಇದರಿಂದಾಗಿ ಇಮ್ಯೂನಿಟಿ ಪವರ್ ಕಡಿಮೆ ಇರುತ್ತದೆ ಬೇಗ ಬಿಪಿ ಶುಗರ್ ಬರುತ್ತದೆ.ಇದನ್ನೆಲ್ಲ ತಿಂದು ಸ್ವಲ್ಪವೂ ವ್ಯಾಯಾಮದ ಅಭ್ಯಾಸ ಇಲ್ಲದೆ ಇದ್ದಾಗ ನೀವು ಕೂತಲ್ಲಿಯೇ ಕುಳಿತುಕೊಂಡು ಇದ್ದಾಗ ಮತ್ತು ಕುಳಿತುಕೊಳ್ಳುವ ಭಂಗಿಯು ಸರಿ ಇಲ್ಲದೆ ಇದ್ದಾಗ ಸೊಂಟದ ಭಾಗಕ್ಕೆ ಒತ್ತಡ ಉಂಟಾಗಿ ಸೊಂಟ ನೋವು ಬರುತ್ತದೆ.
ಕೆಲವೊಮ್ಮೆ ಈ ಕಾರಣಗಳು ಇರಬಹುದು
ನಾವು ದಿನನಿತ್ಯ ರಾತ್ರಿ ಆರಾಮವಾಗಿ ನಿದ್ದೆ ಮಾಡಲು ಬಯಸುತ್ತೇವೆ, ಆರಾಮವಾಗಿ ನಿದ್ದೆ ಮಾಡಬೇಕೆಂದರೆ ಹಾಸಿಗೆಯನ್ನು ಆಯ್ಕೆ ಮಾಡುವುದು ಕೂಡ ತುಂಬ ಮುಖ್ಯ ಆಗಿರುತ್ತದೆ.ಸರಿಯಾದ ಹಾಸಿಗೆ ಆಯ್ಕೆ ಮಾಡದೆ ಇದ್ದರೆ ಒಂದೇ ಪೊಸಿಷನ್ ನಲ್ಲಿ ಮಲಗಿದರೆ ಬೆಳಗ್ಗೆ ಏಳುವಷ್ಟರಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಕೆಲವೊಮ್ಮೆ ನಿಯಂತ್ರಣ ಇಲ್ಲದ ತೂಕ ಸಹ ಕಾರಣವಾಗಬಹುದು.ದೇಹದ ತೂಕವನ್ನು ಸಮತೋಲನದಿಂದ ಕಾಪಾಡಿಕೊಳ್ಳುವುದು ಅತಿ ಮುಖ್ಯ.ದೇಹದ ತೂಕ ಕಮ್ಮಿ ಇದರೆ ರೋಗಗಳು ಸಹ ಕಡಿಮೆ ಆಗುತ್ತದೆ.ಹೆಚ್ಚು ಎಣ್ಣೆ ಪದಾರ್ಥವುಳ್ಳ ಆಹಾರ ಮತ್ತು ತಿಂಗಳ ಪೂರ್ತಿ ಹೊರಗಿನ ಆಹಾರ ತಿನ್ನುವುದರಿಂದ ಬೊಜ್ಜು ಹೆಚ್ಚಾಗಿ ತೂಕವು ಹೆಚ್ಚಾಗಬಹುದು.ನಡೆಯದೆ ಇರುವುದು ಕೂತಲ್ಲೇ ಕೂತುಕೊಳ್ಳುವುದು ಬೊಜ್ಜಿಗೆ ಕಾರಣ ಆಗುತ್ತದೆ. ಥೈರಾಯ್ಡ್ ನಿಂದ ಸಹ ತೂಕ ಹೆಚ್ಚಾಗುವುದು ಅಥವಾ ಕಮ್ಮಿ ಆಗುವುದು ಆಗಬಹುದು ಅದಕ್ಕೆ ಬೇರೆಯೇ ಔಷಧಿಗಳು ದೊರೆಯುತ್ತದೆ.
ಕೆಲವೊಮ್ಮೆ ನರಗಳ ಸಮಸ್ಯೆ ಇದ್ದರೂ ಕೂಡ ಸೊಂಟ ನೋವು ಕಾಣಿಸಿಕೊಳ್ಳುತ್ತದೆ.ಅಥವಾ ಕೆಲವೊಮ್ಮೆ ಫ್ರಾಕ್ಚರ್ ಆದಾಗಲೂ ಸೊಂಟ ನೋವು ಕಾಣಿಸಿಕೊಳ್ಳಬಹುದು.ಸಾಮಾನ್ಯ ಸೊಂಟ ನೋವಿಗೆ ನಾವು ಕೊಡುವ ವ್ಯಾಯಾಮಗಳ ಸಲಹೆಯು ಸಹಾಯ ಆಗುತ್ತದೆ.ಆದರೆ ತುಂಬ ತೊಂದರೆಯಿಂದ ಬಳಲುತ್ತಿದ್ದರೆ ಅಥವಾ ತುಂಬ ಹಳೆಯ ನೋವು ಏನಾದರೂ ಇದ್ದರೆ ಈ ವ್ಯಾಯಾಮಗಳು ನಿಮಗೆ ಸಹಾಯ ಆಗುತ್ತವೆ ಎನ್ನುವ ಗ್ಯಾರೆಂಟಿ ಇಲ್ಲ.ಕೆಲವೊಂದು ಸಮಯದಲ್ಲಿ ನಾವು ಅಸ್ವತ್ರೆಗೆ ಹೋಗುವುದು ಅನಿವಾರ್ಯವಾಗುತ್ತದೆ.ಯಾಕೆಂದರೆ ಕೆಲವೊಂದು ಸಮಸ್ಯೆಗೆ ಡಾಕ್ಟರ್ಸ್ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆ ಇದೆ ಅಂದರೆ ವ್ಯಾಯಾಮದಿಂದ ಸರಿ ಹೋಗುತ್ತವೆ ಎನ್ನುವ ನಂಬಿಕೆ ಇರುವುದಿಲ್ಲ.ಇಂತಹ ಸಮಯದಲ್ಲಿ ಫಿಸಿಯೋಥೆರಪಿ ಕೂಡ ಕೊಡುವ ಅವಶ್ಯಕತೆ ಬರಬಹುದು.
ಸೊಂಟ ನೋವು ಬಾರದಂತೆ ಮುಂಜಾಗ್ರತೆ ಕ್ರಮಗಳು
ಸೊಂಟ ನೋವು ಕಾಣಿಸಿಕೊಳ್ಳಬಾರದು ಚಿಕ್ಕ ವಯಸ್ಸಿನಲ್ಲಿ ಅಂತ ಇದ್ದರೆ ಈ ಕೆಲವು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬಹುದು.
- ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಬೆನ್ನಿನ ಹಿಂದೆ ತಲೆದಿಂಬನ್ನು ಇಟ್ಟು ಕುಳಿತುಕೊಳ್ಳಿ
- ನೀವು ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಾಗಿದ್ದರೆ ನಿಮ್ಮ ಕಣ್ಣಿನ ದೃಷ್ಟಿಯ ನೇರಕ್ಕೆ ಇಟ್ಟು ಕುಳಿತುಕೊಳ್ಳಿ ಆಗ ನಿಮ್ಮ ಕುಳಿತುಕೊಳ್ಳುವ ಭಂಗಿ ತಪ್ಪಾಗಲು ಸಾಧ್ಯವಿಲ್ಲ.
- ಆದಷ್ಟು ಹೆಚ್ಚು ಸಮಯ ಒಂದೇ ಸ್ಥಾನದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಒಳ್ಳೆಯದು
- ಪ್ರತಿ ಅರ್ಧ ಗಂಟೆ ಅಥವಾ ಒಂದು ಗಂಟೆಗೆ ಒಮ್ಮೆ ಕುರ್ಚಿಯಿಂದ ಎದ್ದು ಆಚೆ ಈಚೆ ನಡೆದು ಸ್ವಲ್ಪ ವಿಶ್ರಾಂತಿ ಪಡೆಯಿರಿ.
- ಎದ್ದು ನಿಂತಾಗ ನಿಮ್ಮ ಕೈಗಳನ್ನು ಹಿಂದಕ್ಕೆ ಸ್ಟ್ರೆಚ್ ಮಾಡಿ ಸ್ವಲ್ಪ ಚಲನೆಗಳನ್ನು ಮಾಡಿ
- ಒಮ್ಮೆಲೇ ಅಭ್ಯಾಸ ಇಲ್ಲದಿದ್ದರೆ ಭಾರವಾದ ವಸ್ತುಗಳನ್ನು ಎತ್ತಲು ಹೋಗಬೇಡಿ, ಎತ್ತುವುದು ಅನಿವಾರ್ಯ ಆದರೆ ನೇರವಾಗಿ ಬಗ್ಗಿ ಭಾರ ಎತ್ತುವ ಬದಲು ಮೊಣಕಾಲು ಊರಿ ಮತ್ತೆ ಏಳುವಾಗ ಮೊಣಕಾಲಿಗೆ ಕೈಯನ್ನು ಇಟ್ಟು ಎದ್ದೇಳಿ
ನಾವು ಸಲಹೆ ನೀಡುವ ವ್ಯಾಯಾಮಗಳು
- ಗೋಡೆಗಾಣಿಸಿ ಜಾರುವುದು
ಇದರಲ್ಲಿ ನಿಮ್ಮ ಬೆನ್ನನ್ನು ಗೋಡೆಗಾಣಿಸಿ ನಿಲ್ಲಿರಿ.ಪಾದ ಮತ್ತು ಭುಜವನ್ನು ದೂರ ಇರಿಸಬೇಕು ನಂತರ ಬೆನ್ನು ಕೆಳಗೆ ಜಾರಿಸುತ್ತಾ ಮಂಡಿಯು ಸುಮಾರು 90 ಡಿಗ್ರಿ ಬಾಗುವ ತನಕ ನಿಲ್ಲಿರಿ. ಐದು ಅಂಕೆಗಳನ್ನು ಎಣಿಸಿ ಮತ್ತೆ ಗೋಡೆಗೆ ಮೇಲ್ಮುಖವಾಗಿ ಜಾರಿಸುತ್ತಾ ಎದ್ದೇಳಿ.ಹೀಗೆ ಇದನ್ನು ಐದು ಸಲ ಪುನರಾವರ್ತನೆ ಮಾಡಬೇಕು.
- ಕೆಳಹೊಟ್ಟೆಯ ವ್ಯಾಯಾಮಗಳು
ಬೆನ್ನಿನ ಮೇಲೆ ಹುಲಗಿರಿ. ಮಂಡಿಯು ಮಾಡಿಚಿರಲಿ ಮತ್ತು ಪಾದ ನೆಲಕ್ಕೆ ತಾಗಿರಲಿ.ನಿಮ್ಮ ಎರಡೂ ಮಂಡಿಗಳನ್ನು ನಿಮ್ಮ ಎದೆಯತ್ತ ಎತ್ತಿರಿ.ಕೈಗಳನ್ನು ಮಂಡಿಯ ಕೆಳಗೆ ತಂದು ಮಂಡಿಗಳನ್ನು ಸಾವಕಾಶವಾಗಿ ಎಷ್ಟು ಸಾಧ್ಯವೋ ಅಷ್ಟು ಹತ್ತಿರ ಎದೆಯತ್ತ ತನ್ನಿರಿ. ನಿಮ್ಮ ತಲೆ ಮೇಲೆ ಎತ್ತಬೇಡಿ.ಕಾಲುಗಳನ್ನು ನೆಟ್ಟಗೆ ಮಾಡದೇ ಕೆಳಗೆ ತನ್ನಿರಿ ಐದು ಬಾರಿ ಮಾಡಬೇಕು.
- ಮಂಡಿಯಿಂದ ಎದೆಯವರೆಗಿನ ವ್ಯಾಯಾಮಗಳು
ಮಂಡಿಗಳನ್ನು ಮಡಚಿ ಅಂಗಾತ ಮಲಗಿರಿ.ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಮೇಲೆ ಕೆಳಗೆ ಮಾಡುತ್ತಾ ಬೆನ್ನನ್ನು ನೆಲಕ್ಕೆ ಸಪಾಟಾಗಿಸಿ.ಮಂಡಿಯನ್ನು ನೇರವಾಗಿಸಿ.ನಿಮ್ಮ ಕಾಲುಗಳನ್ನು ಮೇಲೆತ್ತಿ.3 ಸೆಕೆಂಡುಗಳ ಕಾಲ ಹಾಗೆ ಇಟ್ಟುಕೊಳ್ಳಿ.ನಂತರ ಕಾಲನ್ನು ಸಾವಕಾಶವಾಗಿ ನೆಲಕ್ಕೆ ಇಳಿಸಿ.ಇನ್ನೊಂದು ಕಾಲಿಗೆ ಹೀಗೇ ಮಾಡಿ.ಕಿಬ್ಬೊಟ್ಟೆ ಭಾಗ ಚಲಿಸುತ್ತಿರಲಿ ಮತ್ತು ನೆಲಕ್ಕೆ ಇರುವ ಕಾಲನ್ನು ಯಾವಾಗಲೂ ವಿಶ್ರಾಂತಿಯಲ್ಲಿ ಇಡಿ.ಈ ಸಮಯದಲ್ಲಿ ಉಸಿರು ಬಿಗಿಯಾಗಿ ಹಿಡಿಯಬಾರದು.
- ಕಿಬ್ಬೊಟ್ಟೆ ತಿರುಗಿಸುವುದು
ಹೊಟ್ಟೆಯ ಕೆಳಭಾಗದ ಸ್ನಾಯುಗಳನ್ನು ಮೇಲೆ ಮತ್ತು ಒಳಗೆ ತೆಗೆದುಕೊಳ್ಳುತ್ತಾ ಬೆನ್ನಿನ ಕೆಳಭಾಗವನ್ನು ನೆಲದತ್ತ ಒತ್ತಿರಿ.ಹಗುರವಾಗಿ ಉಸಿರಾಡುತ್ತಿರುವಂತೆ ನಿಮ್ಮ ಬೆನ್ನು ನೆಲಕ್ಕೆ ಸಮಾನಾಗಿರಲಿ.3 ಸೆಕೆಂಡುಗಳ ತನಕ ಹೀಗೆ ಇರಿ ಮತ್ತೆ ಐದು ಬಾರಿ ಪುನರಾವರ್ತಿಸಿ.
- ಕಾಲುಗಳ ಮೇಲೆತ್ತುವುದು
ಬೋರಲಾಗಿ ಮಲಗಿ.ಒಂದು ಕಾಲಿನ ಸ್ನಾಯುಗಳನ್ನು ಬಿಗಿಗೊಳಿಸಿ ನೆಲದಿಂದ ಅದನ್ನು ಮೇಲಕ್ಕೆ ಎತ್ತಿ ಐದು ಎನಿಸುವ ತನಕ ಕಾಲು ಹಾಗೆ ಎತ್ತಿ ಹಿಡಿದು ನಂತರ ನೆಲದತ್ತ ಕೆಳಗಿಳಿಸಿ.ಇನ್ನೊಂದು ಕಾಲಿನಿಂದ ಹೀಗೆ ಮಾಡಿ ಪ್ರತಿಯೊಂದು ಕಾಲಿನಿಂದ ಐದು ಸಲ ಪುನರಾವರ್ತಿಸಿ.
- ಮೇಲ್ಮುಖ ಒತ್ತಡ
ನಿಮ್ಮ ಕೈಗಳನ್ನು ನೇರಗೊಳಿಸುತ್ತಾ ಸೊಂಟದ ಮೇಲ್ಭಾಗವನ್ನು ನೆಲದಿಂದ ಮೇಲಕ್ಕೆ ಎತ್ತಿ.ನಿಮ್ಮ ಹೊಟ್ಟೆಯ ಕೆಳಭಾಗ ಹಾಸಿಗೆಯ ಮೇಲೆ ಇರಲಿ. ಕೆಳಬೆನ್ನು ಬಾಗಿಸಿ. ಮೂರು ನಿಮಿಷಗಳ ಕಾಲ ಹಾಗೆ ಇರಿ.ಪ್ರಾರಂಭದ ಸ್ಥಿತಿಗೆ ಮರಳಿ ಬನ್ನಿ.ಐದು ಸಲ ಪುನರಾವರ್ತನೆ ಮಾಡಿ.
ಇದು ತುಂಬ ಸರಳವಾದ ಮತ್ತು ಎಲ್ಲರಿಗೂ ಮಾಡಲು ಸಾಧ್ಯವಾಗುವಂತಹ ವ್ಯಾಯಾಮಗಳು.ಈ ವ್ಯಾಯಾಮಗಳನ್ನು ದಿನವೂ ತಪ್ಪದೆ ಅಭ್ಯಾಸ ಮಾಡಿ ಇದರಿಂದ ನಿಮ್ಮ ಮನಸ್ಸು ಕೂಡ ಸಮತೋಲನ ಹಾಗೂ ಚೈತನ್ಯದಿಂದ ಕೂಡಿರುತ್ತದೆ.ನೀವು ಗಮನಿಸಿರಬಹುದು ಯಾರು ಪ್ರತಿನಿತ್ಯ ವ್ಯಾಯಾಮಗಳನ್ನು ಮಾಡುತ್ತಾರೋ ಅವರಿಗೆ ಕಾಯಿಲೆಗಳು ಬರುವುದು ಕಮ್ಮಿ ಅವರು ವ್ಯಾಯಾಮ ಮಾಡಿ ಬೆವರಿಳಿಸುತ್ತಾರೆ ಇದರಿಂದ ನಮ್ಮ ದೇಹದಲ್ಲಿನ ಕಶ್ಮಲಗಳು ಹೊರಹಾಕಲಾಗುತ್ತದೆ.ವ್ಯಾಯಾಮ ಮಾಡುವವರ ಚರ್ಮವು ಕೂಡ ಕಾಂತಿಯುಕ್ತವಾಗುತ್ತದೆ.ಮತ್ತು ಅವರ ಮುಖದಲ್ಲಿ ಮೊಡವೆಗಳ ತೊಂದರೆಗಳು ಇರುವುದಿಲ್ಲ.ಸಕ್ಕರೆ ಖಾಯಿಲೆ ರಕ್ತದ ಒತ್ತಡ ಬರುವುದಿಲ್ಲ.ಅಕಸ್ಮಾತಾಗಿ ಬಂದರೂ ಅದನ್ನು ವ್ಯಾಯಾಮದ ಮೂಲಕ ಹತೋಟಿಯಲ್ಲಿಡಬಹುದು.ಈ ಅಭ್ಯಾಸದಿಂದ ದೇಹವು ಉಲ್ಲಾಸದಾಯಕ ಅನಿಸಿ ದಿನ ಇಡೀ ಚೈತನ್ಯದಿಂದ ಕೂಡಿರುತ್ತದೆ. ಹಾರ್ಮೋನಲ್ imbalances ತಡೆಗಟ್ಟುತ್ತದೆ. ಈ ವ್ಯಾಯಾಮಗಳನ್ನು ಮಾಡಿ ನಿಮ್ಮ ಸಮಸ್ಯೆ ಬಗೆಹರಿಯದೆ ಇದ್ದಾಗ ಮಾತ್ರ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಚಿಕಿತ್ಸೆ ಪಡೆಯಿರಿ.ಅನವಶ್ಯಕ ನೋವು ನಿವಾರಕ ಗುಳಿಗೆಗಳನ್ನು ನುಂಗಬೇಡಿ ಅತಿಯಾದ ಗುಳಿಗೆಗಳ ಸೇವನೆಯಿಂದ ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡಬಹುದು.ಇದನ್ನೆಲ್ಲ ದೂರ ಇಟ್ಟು ಆರೋಗ್ಯಕರವಾಗಿರಲು ವ್ಯಾಯಾಮವನ್ನು ನಿಮ್ಮ ಚಟುವಟಿಕೆಯನ್ನಾಗಿಸಿ.
ಈ ಮಾಹಿತಿ ಇಷ್ಟವಾದರೆ ನಮ್ಮ ವೆಬ್ಸೈಟ್ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ ಉತ್ತಮ ಆರೋಗ್ಯಕರ ಜೀವನಕ್ಕೆ ಉತ್ತಮವಾದ ಸಲಹೆಯನ್ನು ನೀಡಲು ನಾವು ಸದಾ ಸಿದ್ಧ.
- Best exercises for lower back pain relief at home: ಈ ವ್ಯಾಯಾಮಗಳನ್ನು ಮಾಡಿದರೆ ನಿಮ್ಮ ಸೊಂಟನೋವು ಖಂಡಿತ ಮಾಯ ಆಗುತ್ತದೆ,ಪೂರ್ತಿ ಮಾಹಿತಿ ಇಲ್ಲಿದೆ. - April 16, 2026
- Cancer Drug Crisis: ಬಹು ದುಬಾರಿ Keytruda ಔಷಧಿ, ಸಾಮಾನ್ಯ ಜನರಿಗೆ ಯಾಕೆ ಸಿಗುತ್ತಿಲ್ಲ? ದುಬಾರಿ ಕ್ಯಾನ್ಸರ್ ಔಷಧಿಗೆ ಭಾರತೀಯರ ಹೋರಾಟ - April 14, 2026
- High salary illusion:ಬರೋಬ್ಬರಿ 40 ಲಕ್ಷ ಸಂಬಳವನ್ನುಪಡೆಯುತ್ತಿದ್ದ ಯುವಕ ಈಗ rapido ಚಾಲಕ, ಈತನ ಕಥೆ ಕೇಳಿದ್ರೆ ಎಂಥವರಿಗೂ ಅಯ್ಯೋ ಅನಿಸಬಹುದು ಅಥವಾ ಪ್ರೇರಣೆ ಆಗಬಹುದು ಪೂರ್ತಿ ಮಾಹಿತಿ ತಿಳಿದುಕೊಳ್ಳಿ - April 13, 2026