ಜಗತ್ತು ವರ್ಷ ಕಳೆದಂತೆ ದಿನದಿಂದ ದಿನಕ್ಕೆ ತುಂಬಾ ಬದಲಾಗುತ್ತಿದೆ. High salary illusion ಕಂಡು ಬರುತ್ತಿದೆ. ಬದಲಾಗುತ್ತಿರುವ ಈ ಆರ್ಥಿಕ ಜಗತ್ತಿನಲ್ಲಿ, ಹೆಚ್ಚಿನ ಮಾಸಿಕ ಸಂಬಳವೇ ಜೀವನದ ಭದ್ರತೆ ಎಂದು ಅನೇಕರು ಭಾವಿಸುತ್ತಾರೆ ಮತ್ತು ತಿಂಗಳ ಸಂಬಳವನ್ನೇ ನಂಬಿ ಜೀವನ ನಡೆಸುತ್ತಿರುವವರು ಆನೇಕ ಮಂದಿ. ಮುಖ್ಯವಾಗಿ ಹೇಳುವುದಾದರೆ ಐಟಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿರುವ ಯುವಕರಿಗೆ ಕಮ್ಮಿ ಸಂಬಳವಂತೂ ಇರುವುದಿಲ್ಲ. ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವನ್ನು ಅವರು ಪಡೆಯುತ್ತಿರುತ್ತಾರೆ, ಜೀವನದಲ್ಲಿ ಯಾವ ಸಂಕಷ್ಟವೂ ಕೂಡ ಅವರಿಗೆ ಎದುರಾಗುವುದಿಲ್ಲ ಯಾಕೆಂದರೆ ನಮಗೆ ಲಕ್ಷಾಂತರ ಸಂಬಳ ಇದೆಯಲ್ಲ ಎಂಬ ನಂಬಿಕೆ ಅವರಲ್ಲಿ ಆಳವಾಗಿ ಬೇರೂರಿರುತ್ತದೆ. ಆದರೆ ನಿಜ ಹೇಳಬೇಕಾದರೆ ಜೀವನದಲ್ಲಿ ಆರ್ಥಿಕ ಸ್ಥಿರತೆಯು ಕೇವಲ ಸಂಬಳದ ಮೇಲೆ ಮಾತ್ರ ನಿಂತಿರುವುದಿಲ್ಲ. ಉಳಿತಾಯ ಮುಖ್ಯ, ಹೂಡಿಕೆ, ಮತ್ತು ತುರ್ತು ಪರಿಸ್ಥಿತಿಗಳಿಗೆ ಮೊದಲೇ ಯೋಚಿಸಿ ಸಿದ್ಧತೆ ಇಲ್ಲದಿದ್ದರೆ, ಎಷ್ಟೇ ದೊಡ್ಡ ಸಂಬಳ ಇದ್ದರೂ ಕೂಡ ಅದು ಒಂದು ಕ್ಷಣದಲ್ಲಿ ಸರ್ವ ನಾಶ ಆಗಬಹುದು ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಘಾಜಿಯಾಬಾದ್ ಮೂಲದ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ನ ಜೀವನವೇ ಈಗ ಸಾಕ್ಷಿಯಾಗಿದೆ. ಏನಿದು ಈ ಇಂಜಿನಿಯರ್ ನ ಕಥೆ ಇಲ್ಲಿದೆ ಪೂರ್ತಿ ಮಾಹಿತಿ.
ಈ ವ್ಯಕ್ತಿಯು ದೇಶದ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದನು. ಅವನ ವಾರ್ಷಿಕ ಆದಾಯ ಅಂದಾಜು ಸುಮಾರು 40 ಲಕ್ಷ ರೂಪಾಯಿ. ಈ ಆದಾಯ ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಕನಸು. ಯಾಕೆಂದರೆವಷ್ಟು ವಾರ್ಷಿಕ ಆದಾಯ ಬರುವಂತಹ ಕೆಲಸ ಸಿಗುವುದು ಅವರ ಅದೃಷ್ಟ, ಉತ್ತಮ ಸಂಬಳ, ಸುಂದರ ಜೀವನಶೈಲಿ, ನಗರದಲ್ಲಿ ಐಶಾರಾಮಿ ಬದುಕು – ಇವೆಲ್ಲವೂ ಕೂಡ ಈತನ ದಿನನಿತ್ಯದ ಭಾಗವಾಗಿದ್ದವು. ಹಣದ ಅಭಾವ ಅಂದ್ರೆ ಎಂದೇ ಅವನಿಗೆ ತಿಳಿದಿರಲಿಲ್ಲ. ಅವನು ಅವನಿಗೆ ಹೀಗೆ ಇಷ್ಟವೋ ಆ ರೀತಿಯಲ್ಲಿ ಇಷ್ಟ ಬಂದ ಹಾಗೆ ಖರ್ಚು ಮಾಡುತ್ತಿದ್ದನು. ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಾ, ಪ್ರವಾಸ ಹೋಗಿ ಬರುವುದು, ಬ್ರಾಂಡೆಡ್ ವಸ್ತುಗಳನ್ನೇ ಬಳಸುವುದು – ಇವೆಲ್ಲವೂ ಅವನ ಜೀವನದ ದೈನಂದಿನ ಚಟುವಟಿಕೆಯ ಸಾಮಾನ್ಯ ಅಂಶಗಳಾಗಿದ್ದವು. ಆದರೆ ಅವನಿಗೆ ತಿಳಿದಿರಲಿಲ್ಲ ಅವನು ಗಮನಿಸದೇ ಹೋದ ಒಂದು ಮುಖ್ಯ ವಿಷಯವೇ ಅವನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು – ಅದು ಉಳಿತಾಯದ ಕೊರತೆ.ಹೌದು ಅವನಿಗೆ ಸಾಕಷ್ಟು ಆದಾಯ ಇದ್ದಿದ್ದರಿಂದ ಆತನಿಗೆ ಭವಿಷ್ಯದ ಚಿಂತೆ ಕಾಡಲಿಲ್ಲ ಮುಂದೆ ಒಂದು ದಿನ ನನ್ನ ಕೈನಲ್ಲಿ ಹಣ ಇಲ್ಲವಾದರೆ ಏನು ಮಾಡುವುದು ನಾನು ಸ್ವಲ್ಪ ಉಳಿತಾಯ ಮಾಡಿದರೆ ಮುಂದೆ ಸಹಾಯ ಆಗಬಹುದೆಂದು ಆತ ಯೋಚಿಸಲಿಲ್ಲ. ಅವನೇನು ದೊಡ್ಡ ತಪ್ಪು ಮಾಡಲಿಲ್ಲ, ಹೆಚ್ಚಿನ ಸಂಬಳ ಬಂದಾಗ ಅನೇಕರು ಇಂತಹ ತಪ್ಪನ್ನ ಮಾಡುತ್ತಾರೆ. ಅವನು ಕೂಡ ಇದೇ ಮಾಡಿದ್ದನು. “ಇಂದು ನಾನು ಸಂಪಾದಿಸುತ್ತಿದ್ದೇನೆ, ನಾಳೆಯೂ ಕೂಡ ಹೀಗೆ ಸಂಪಾದಿಸುತ್ತೇನೆ” ಎಂಬ ಭಾವನೆ ಅವನ ಮನಸ್ಸನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿತ್ತು. ಇದರಿಂದ ಅವನು ಯೋಚಿಸದೇ ತನ್ನ ಆದಾಯದ ಬಹುಪಾಲನ್ನು ಖರ್ಚು ಮಾಡುತ್ತಿದ್ದನು. ಅವನಿಗೆ ತುರ್ತು ಪರಿಸ್ಥಿತಿಗೆ ಬೇಕಾದಷ್ಟು ಹಣವನ್ನು ಉಳಿಸಬೇಕು ಎನ್ನುವ ಅರಿವು ಕೂಡ ಇರಲಿಲ್ಲ. ಅವನಿಗೆ ಜೀವನ ಎಂದರೆ ಇಂದಿನ ಸಂತೋಷ ಮಾತ್ರ ಆಗಿತ್ತು, ನಾಳೆಯದು ನಾಳೆ ನೋಡಿಕೊಂಡರೆ ಆಯಿತು ಎನ್ನುವ ಮನೋಭಾವನೆ ಇಟ್ಟುಕೊಂಡಿದ್ದನು . ಭವಿಷ್ಯದ ಬಗ್ಗೆ ಆಳವಾದ ಆರ್ಥಿಕ ಯೋಜನೆ ಅವನ ಜೀವನದಲ್ಲಿ ಇರಲೇ ಇಲ್ಲ.
ಅವನು ಮೊದಲಿಂದಲೂ ಒಂದು ಕನಸನ್ನು ಇಟ್ಟುಕೊಂಡಿದ್ದನು., 2024ರಲ್ಲಿ ಅದನ್ನು ನನಸಾಗಿಸಲು ಮುಂದಾಗುತ್ತಾನೆ. ಘಾಜಿಯಾಬಾದ್‌ನ ಪ್ರತೀಕ್ ಗ್ರ್ಯಾಂಡ್ ಸಿಟಿಯಲ್ಲಿ ಬರೋಬ್ಬರಿ 1.4 ಕೋಟಿ ರೂಪಾಯಿ ಮೌಲ್ಯದ 3BHK ಅಪಾರ್ಟ್‌ಮೆಂಟ್ ಅನ್ನು ಖರೀದಿಸುತ್ತಾನೆ. ಈ ಮನೆಯು ಅವನ ಕನಸುಗಳ ಪ್ರತೀಕವಾಗಿತ್ತು. ತನ್ನದೇ ಒಂದು ಮನೆ ಮಾಡಿಕೊಂಡು ತನ್ನ ಮನೆಯವರೊಂದಿಗೆ ಆರಾಮವಾಗಿ ಜೀವನ ನಡೆಸಬೇಕು ಎನ್ನುವುದು ಆತನ aase ಆಗಿತ್ತು. ಈ ಮನೆಗಾಗಿ ಅವನು ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲವನ್ನು ಕೂಡಾ ಪಡೆದುಕೊಳ್ಳುತ್ತಾನೆ. ತಿಂಗಳಿಗೆ ಆತನಿಗೆ ಸುಮಾರು 95 ಸಾವಿರ ರೂಪಾಯಿ EMI ಪಾವತಿ ಮಾಡಬೇಕಿತ್ತು ಆತನಿಗೆ ಬಹಳಷ್ಟು ಮೊತ್ತದ ಸಂಬಳ ಬರುತ್ತಿದ್ದ ಕಾರಣ ಒಪ್ಪಿಕೊಂಡಿದ್ದನು. ಈ ಸಮಯದಲ್ಲಿ ಆ ಸಮಯದಲ್ಲಿ ಈತನಿಗೆ ಇದೇನು ದೊಡ್ಡ ಮೊತ್ತವಾಗಿ ಕಾಣಿಸಲಿಲ್ಲ. EMI ಪಾವತಿಸಿದ ನಂತರವೂ ಕೂಡ ಅವನ ಬಳಿ ಸಾಕಷ್ಟು ಹಣ ಉಳಿಯುತ್ತಿತ್ತು. ಹೀಗಾಗಿ ಅವನು ಮನೆ ಕೊಂಡುಕೊಳ್ಳುವ ಈ ನಿರ್ಧಾರವನ್ನು ಬಹಳ ಆತ್ಮವಿಶ್ವಾಸದಿಂದ ತೆಗೆದುಕೊಳ್ಳುತ್ತಾನೆ.
ಆದರೆ ವಿಪರ್ಯಾಸ ಅಂದರೆ ಜೀವನ ಯಾವಾಗಲೂ ನಾವು ನೆನೆಸಿದಂತೆ ನಮ್ಮ ಯೋಜನೆಯಂತೆ ನಡೆಯಲು ಸಾಧ್ಯವಿಲ್ಲ. ಒಂದು ದಿನ ದಿಢೀರ್ ಅಂತ ಕಂಪನಿ ಅಚಾನಕ್ ಸಾಮೂಹಿಕ ವಜಾವನ್ನು ಘೋಷಣೆ ಮಾಡಿತು. ಎಷ್ಟು surprise ಆಗಿ ಮಾಡುತ್ತಾರೆ ಅಂದರೆ ಇವತ್ತು ರಾತ್ರಿ ಆರಾಮವಾಗಿ ನಿದ್ದೆ ಮಾಡಿದ್ದರೆ ಬೆಳಗ್ಗೆ ಎದ್ದು ಮೊಬೈಲ್ ನೋಡಿದಾಗ ಶಾಕಿಂಗ್ ಮೇಲ್ ಬಂದಿರುತ್ತದೆ. ಈ ಸುದ್ದಿ ಅನೇಕ ಉದ್ಯೋಗಿಗಳ ಜೀವನವನ್ನು ತೊಂದರೆಗೆ ಸಿಲುಕುವಂತೆ ಮಾಡಿತು. ಈ ಪಟ್ಟಿಯಲ್ಲಿ ಈ ಇಂಜಿನಿಯರ್ ಹೆಸರು ಕೂಡ ಸೇರಿಕೊಂಡಿದೆ. ಈ ಘಟನೆ ಅವನಿಗೆ ಭಾರಿ ಆಘಾತವನ್ನು ಉಂಟುಮಾಡಿದೆ. ನಿನ್ನೆವರೆಗೆ ನನ್ನ ಕೆಲಸ ಸುರಕ್ಷಿತವಾಗಿತ್ತು ಇಂದು ನನ್ನ ಕೆಲಸ ಹೊರಟು ಹೋಗಿದೆ ನನ್ನ ಕೈಯಲ್ಲಿ ಏನು ಇಲ್ಲ. ಒಂದು ಕ್ಷಣದಲ್ಲಿ ಅವನ ಆದಾಯ ಪೂರ್ತಿಯಾಗಿ ನಿಂತುಬಿಡುತ್ತದೆ. ಆದರೆ ಆತನಿಗೆ EMI, ಸಾಲ, ಖರ್ಚುಗಳು ಹಾಗೆಯೇ ಮುಂದುವರಿದವು ಇದನ್ನು ಎದುರಿಸುವುದು ಕಷ್ಟವಾಯಿತು.
ಉದ್ಯೋಗ ಕಳೆದುಕೊಂಡ ಮೇಲೆ ಅವನಿಗೆ ಬೇರೆ ಕಂಪನಿಗಳಿಗೆ ಅರ್ಜಿಯನ್ನು ಹಾಕುವುದು ಅನಿವಾರ್ಯವಾಯಿತು. ಆದರೆ ದುರದೃಷ್ಟಕ್ಕೆ ಮೂರು ತಿಂಗಳು ಕಳೆದರೂ ಕೂಡ ಯಾವುದೇ ಕೆಲಸ ಸಿಗಲಿಲ್ಲ. ಐಟಿ ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ ಹೊಸ ಉದ್ಯೋಗ ಪಡೆಯುವುದು ಸುಲಭವಿರಲಿಲ್ಲ ಯಾಕೆಂದರೆ ಅಲ್ಲಿ AI ಬಗ್ಗೆ ಗೊತ್ತ ಅಂತ ಕೇಳುತ್ತಾರೆ. ಈ ಸಮಯದಲ್ಲಿ ಅವನು ಎದುರಿಸಿದ ಆರ್ಥಿಕ ಒತ್ತಡ ತುಂಬಾ ದೊಡ್ಡದು, ಯಾಕಂದ್ರೆ ಒಂದು ಕಡೆ ಕೆಲಸ ಇಲ್ಲ,ಇನ್ನೊಂದು ಕಡೆ EMI. ಒಂದು ಕಾಲದಲ್ಲಿ ಸುಲಭವಾಗಿ ಪಾವತಿಸುತ್ತಿದ್ದ EMI ಈಗ ಅವನಿಗೆ ತುಂಬ ಭಾರವಾಗಿತ್ತು ಮತ್ತು ಇದರಿಂದ ಒತ್ತಡ ಹೆಚ್ಚಾಯಿತು. ಬ್ಯಾಂಕ್‌ನಿಂದ ಕರೆಗಳು ಬರಲು ಆರಂಭಿಸಿದವು. ಬಾಕಿ ಪಾವತಿಗಳ ಒತ್ತಡ ಹಾಕುತ್ತಿದ್ದರು. ಮನೆಯ ಖರ್ಚುಗಳನ್ನು ಕೂಡ ಅವನಿಗೆ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿತ್ತು.
ಈ ಪರಿಸ್ಥಿತಿಯಲ್ಲಿ ಅವನ ಮಾನಸಿಕ ಸ್ಥಿತಿ ಕೂಡ ಹದಗೆಡತೊಡಗಿತು. ಒತ್ತಡದಿಂದಾಗಿ ನಿದ್ರೆ ಬರದೆ ರಾತ್ರಿಗಳು ಅವನ ಜೀವನದ ಕಷ್ಟಕರ ಭಾಗವಾಗಿಬಿಟ್ಟವು. ಭವಿಷ್ಯದ ಬಗ್ಗೆ ಚಿಂತೆ ಕಾಡಲು ಆರಂಭಿಸಿತು. ಕುಟುಂಬದ ಜವಾಬ್ದಾರಿ ಆತನ ಹೆಗಲ ಮೇಲಿತ್ತು, ಸಾಲದ ಒತ್ತಡ – ಇವೆಲ್ಲವೂ ಅವನ ಮನಸ್ಸನ್ನು ಒತ್ತಡಕ್ಕೆ ಒಳಪಡಿಸಿ ಯಾರಿಗೂ ತೋರಿಸಿಕೊಳ್ಳಲು ಆಗದೆ ಒದ್ದಾಡುವಂತಾಯಿತು. ಒಂದು ಕಾಲದಲ್ಲಿ ಕನಸಿನಂತೆ ಕಂಡ ಮನೆ ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಈಗ ಅವನಿಗೆ ಅದೇ ಮನೆ ಕೈತಪ್ಪಿ ಹೋಗುವ ಭಯದ ಮೂಲವಾಗಿತ್ತು. “ಈಗ EMI ಹೇಗೆ ಪಾವತಿಸಬೇಕು?” ಎಂಬ ಪ್ರಶ್ನೆ ಅವನ ಮನಸ್ಸನ್ನು ದಿನವೂ ಕಾಡುತ್ತಿತ್ತು.
ಈ ಆರ್ಥಿಕ ಸಮಸ್ಯೆಯಿಂದ ಹೊರಬರಲು ಅವನು ತೆಗೆದುಕೊಂಡ ನಿರ್ಧಾರವೇ ಅವನ ಬದುಕಿನ ತಿರುವು ಅವನು ಚಿಂತೆ ಮಾಡಿ ಕೋರುವ ಬದಲು ಪರಿಹಾರ ಹುಡುಕಲು ಮುಂದಾದ. ತನ್ನ ಮನೆ ಉಳಿಸಿಕೊಳ್ಳಲು ಮತ್ತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ಅವನು Rapido ನಲ್ಲಿ ಬೈಕ್ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡಲು ನಿರ್ಧಾರ ಮಾಡುತ್ತಾನೆ. ಒಂದು ಕಾಲದಲ್ಲಿ ಆತನು ಪ್ರತಿಷ್ಠಿತ ಕಾರ್ಪೊರೇಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ರಸ್ತೆ ಮೇಲೆ ಪ್ರಯಾಣಿಕರನ್ನು ಸಾಗಿಸುತ್ತಾ ದುಡಿಮೆ ಮಾಡುತ್ತಿದ್ದಾನೆ. ಆದರೆ ಅವನಿಗೆ ಇದು ಅವಮಾನವಾಗಿ ಕಾಣಲಿಲ್ಲ. ಬದುಕು ಉಳಿಸಿಕೊಳ್ಳಲು ಮತ್ತು ತನ್ನ ಕುಟುಂಬವನ್ನು ಕಾಪಾಡಲು ಅವನು ತೆಗೆದುಕೊಂಡ ಧೈರ್ಯದ ನಿರ್ಧಾರದ ಮೇಲೆ ಆತನಿಗೆ ಗೌರವವಿತ್ತು.
ಪ್ರತಿ ದಿನ ಅವನು ಕಷ್ಟ ಪಡುತ್ತ ಹಲವಾರು ರೈಡ್‌ಗಳನ್ನು ಮಾಡುತ್ತಿದ್ದಾನೆ. ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾನೆ. ಪ್ರತಿಯೊಂದು ರೈಡ್ ಅವನಿಗೆ ಸ್ವಲ್ಪ ಹಣ ತರುತ್ತದೆ. ಆ ಹಣವನ್ನು ಸೇರಿಸಿ EMI ಪಾವತಿ ಮಾಡುತ್ತಾನೆ. ಆದರೆ ಇದು ಸುಲಭವಾದ ಕೆಲಸ ಅಲ್ಲ ಯಾಕೆಂದರೆ AC ಯಲ್ಲಿ ಆರಾಮವಾಗಿ ದುಡಿದವನಿಗೆ ರಸ್ತೆಯಲ್ಲಿ ದುಡಿಯುವುದು ಕಷ್ಟಕರ. ದಿನಪೂರ್ತಿ ದುಡಿದರೂ ಅವನಿಗೆ ಬೇಕಾದಷ್ಟು ಹಣ ಸಂಪಾದಿಸಲು ಕಷ್ಟವಾಗುತ್ತಿತ್ತು. ಆದರೂ ಅವನು ಹೆದರದೆ ತನ್ನ ಪರಿಸ್ಥಿತಿಯನ್ನು ನೆನೆಸಿಕೊಂಡು ಮುಂದೆ ಸಾಗುತ್ತಿದ್ದಾನೆ.
ಈತನ ಕಥೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಅವನ ಪರಿಸ್ಥಿತಿಯನ್ನು ನೋಡಿ ಕರುಣೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅವರಿಗೆ ಸಲಹೆಗಳನ್ನು ನೀಡಿದ್ದಾರೆ. ಕೆಲವರು ಮನೆಯನ್ನು ಮಾರಿ ತಮಗೆ ಎಷ್ಟು ಅನುಕೂಲತೆ ಇದೆಯೋ ಅಂತ ಮನೆ ಖರೀದಿ ಮಾಡಿ ಆರ್ಥಿಕ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವು ಜನರು ಬಾಡಿಗೆ ಮನೆಗೆ ಹೋಗಿ ಹೊಸ ಉದ್ಯೋಗ ಹುಡುಕಲು ಸಮಯ ತೆಗೆದುಕೊಳ್ಳಬೇಕು ಎಂದು ಸಲಹೆ ಸೂಚಿಸಿದ್ದಾರೆ.
ಇನ್ನೂ ಕೆಲವರು “ಕನಿಷ್ಠವಾದರೂ ವರ್ಷದ ಖರ್ಚಿಗೆ ಸಮಾನವಾದ ಉಳಿತಾಯ ಮಾಡಿಕೊಳ್ಳಬೇಕು” ಎಂದು ಅಭಿಪ್ರಾಯವನ್ನು ಪಟ್ಟಿದ್ದಾರೆ.
ಈ ಘಟನೆಯಿಂದ ನಾವು ಉತ್ತಮ ಪಾಠವನ್ನು ಕಲಿಯಬಹುದು. ಲಕ್ಷಾಂತರ ಸಂಬಳ ಇದ್ದರೆ ಸಾಕು ಜೀವನ ನಡೆಯುತ್ತದೆ ಎಂಬುದು ತಪ್ಪು. ಜೀವನದಲ್ಲಿ ಕಷ್ಟ ಯಾವಾಗ ಬೇಕಾದರೂ ಬರಬಹುದು, ಸಂಪಾದನೆ ಯಾವಾಗ ಬೇಕಾದರೂ ನಿಲ್ಲಬಹುದು. ಆದ್ದರಿಂದ ನಾವು ಯಾವಾಗಲೂ ಎಲ್ಲದಕ್ಕೂ ತಯಾರಾಗಿರಬೇಕು. ಉಳಿತಾಯ ಮಾಡುವುದು ಮುಖ್ಯ. ಕನಿಷ್ಠ 6 ರಿಂದ 12 ತಿಂಗಳ ವೆಚ್ಚವನ್ನು ಭರಿಸುವಂತೆ ಆದರೂ ಹಣವನ್ನು ಉಳಿಸಿಕೊಂಡಿರಬೇಕು.
ಇದರ ಜೊತೆಗೆ, ದೊಡ್ಡ ಸಾಲ ತೆಗೆದುಕೊಳ್ಳುವ ಮೊದಲು ಮುಂದೆ ಅದರ ಪರಿಣಾಮ ಏನಾಗಬಹುದು ಎಂಬುದು ಕೂಡ ಯೋಚಿಸಿರಬೇಕು. EMI ಪಾವತಿ ಮಾಡಲು ನಾವು ಪೂರ್ತಿಯಾಗಿ ನಮ್ಮ ಆದಾಯದ ಮೇಲೆ ಭಾರ ಹಾಕಬಾರದು.
ಈ ಕಥೆ ನಮಗೆ ಮಹತ್ವದ ಸತ್ಯವನ್ನು ತೋರಿಸಿ ಕೊಡುತ್ತದೆ– ಕೆಲಸ ಎಂದರೆ ಯಾವ ಕೆಲಸವೂ ಕೂಡ ಚಿಕ್ಕದಾಗಿರುವುದಿಲ್ಲ. ಬದುಕಬೇಕು ಎಂಬ ಹಠ ಇದ್ದರೆ ಹೇಗೆ ಬೇಕಾದರೂ ಬದುಕಬಹುದು, ದುಡಿಯಬೇಕು ಎಂಬ ಹಠ ಇರುವವರಿಗೆ ಎಷ್ಟು ಕಷ್ಟದ ಕೆಲಸವಾಗಲಿ, ಕೆಳಮಟ್ಟದ ಕೆಲಸವಾಗಲಿ ಅವರಿಗೆ ಅದು ಅವಮಾನವಾಗಿ ಕಾಣುವುದಿಲ್ಲ.ತನ್ನ ಜೀವನಕ್ಕಾಗಿ ಮತ್ತು ಕುಟುಂಬದ ಸಂತೋಷಕ್ಕಾಗಿ ದುಡಿದು ಸ್ವಾವಲಂಬಿಯಾಗಿ ಜೀವನವನ್ನು ಸಾಗಿಸುವವರಲ್ಲಿ ಇವರು ಒಬ್ಬರು.
ಇಂದಿನ ಯುವಕರಿಗೆ ಈ rapido ಕಥೆ ಒಂದು ಎಚ್ಚರಿಕೆ ಆಗಿದೆ. ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳ ಇದ್ದರೂ ಕೂಡ, ಅದು ಶಾಶ್ವತ ಭದ್ರತೆ ಆಗಿರುವುದಿಲ್ಲ. ಕಂಪನಿಗಳು ಯಾರನ್ನು ಯಾವಾಗ ಬೇಕಾದರೂ layoff ಮಾಡುತ್ತದೆ. ಆದ್ದರಿಂದ ನಾವು ಯಾವಾಗಲೂ ಎಲ್ಲದಕ್ಕೂ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು.
- Best exercises for lower back pain relief at home: ಈ ವ್ಯಾಯಾಮಗಳನ್ನು ಮಾಡಿದರೆ ನಿಮ್ಮ ಸೊಂಟನೋವು ಖಂಡಿತ ಮಾಯ ಆಗುತ್ತದೆ,ಪೂರ್ತಿ ಮಾಹಿತಿ ಇಲ್ಲಿದೆ. - April 16, 2026
- Cancer Drug Crisis: ಬಹು ದುಬಾರಿ Keytruda ಔಷಧಿ, ಸಾಮಾನ್ಯ ಜನರಿಗೆ ಯಾಕೆ ಸಿಗುತ್ತಿಲ್ಲ? ದುಬಾರಿ ಕ್ಯಾನ್ಸರ್ ಔಷಧಿಗೆ ಭಾರತೀಯರ ಹೋರಾಟ - April 14, 2026
- High salary illusion:ಬರೋಬ್ಬರಿ 40 ಲಕ್ಷ ಸಂಬಳವನ್ನುಪಡೆಯುತ್ತಿದ್ದ ಯುವಕ ಈಗ rapido ಚಾಲಕ, ಈತನ ಕಥೆ ಕೇಳಿದ್ರೆ ಎಂಥವರಿಗೂ ಅಯ್ಯೋ ಅನಿಸಬಹುದು ಅಥವಾ ಪ್ರೇರಣೆ ಆಗಬಹುದು ಪೂರ್ತಿ ಮಾಹಿತಿ ತಿಳಿದುಕೊಳ್ಳಿ - April 13, 2026